ತನ್ನ ಮಗುವಿನೊಂದಿಗೆ ಫೋಟೋಗಳನ್ನು ಹಂಚಿಕೊಂಡ Natasa Stankovicಗೆ ಜನರ ಪ್ರತಿಕ್ರಿಯೆ ಇದು

ನಟಾಸಾ ಮತ್ತು ಹಾರ್ದಿಕ್ ಅವರ ಮಗು ಜುಲೈ 30, 2020ರಂದು ಜನಿಸಿತು ಮತ್ತು ಅವರು ತಮ್ಮ ಪ್ರೀತಿಯ ಮಗುವಿಗೆ ಅಗಸ್ತ್ಯ ಎಂದು ಹೆಸರಿಸಿದ್ದಾರೆ.  

Last Updated : Oct 1, 2020, 03:15 PM IST
  • ನಟಾಸಾ ಆಗಾಗ್ಗೆ ಫೋಟೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ
  • ತಂದೆ ಹಾರ್ದಿಕ್ ಪಾಂಡ್ಯ ರಂತಿದ್ದಾರಂತೆ ಅಗಸ್ತ್ಯ
ತನ್ನ ಮಗುವಿನೊಂದಿಗೆ ಫೋಟೋಗಳನ್ನು ಹಂಚಿಕೊಂಡ Natasa Stankovicಗೆ ಜನರ ಪ್ರತಿಕ್ರಿಯೆ ಇದು title=
File Image

ನವದೆಹಲಿ: ಸೆರ್ಬಿಯಾದ ಸುಂದರಿ ನಟಾಸಾ ಸ್ಟಾಂಕೋವಿಕ್ (Natasa Stankovic) ತನ್ನ ಮಗ ಅಗಸ್ತ್ಯ ಎರಡು ತಿಂಗಳ ಮಗುವಾಗಿದ್ದಾಗ ತೆಗೆದಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಪೋಸ್ಟ್ ಮಾಡಿದ ಕೂಡಲೇ ಜನರು ಮಗು ಮತ್ತು ತಂದೆ ಹಾರ್ದಿಕ್ ಪಾಂಡ್ಯ (Hardik Pandya) ನಡುವೆ ಸಾಮ್ಯತೆಯನ್ನು ಸೆಳೆಯಲು ಪ್ರಾರಂಭಿಸಿದ್ದಾರೆ. ಮಗು ಜುಲೈ 30, 2020 ರಂದು ದಂಪತಿಗಳ ಜೀವನದಲ್ಲಿ ಬಂದಿತು. ಅವರು ತಮ್ಮ ಮಗುವಿಗೆ ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ.

PICS: ಮಗು ಜೊತೆ ಸುಂದರ ಸಮಯ ಕಳೆಯುತ್ತಿರುವ ನತಾಶಾ, ಹಾರ್ದಿಕ್ ಪಾಂಡ್ಯ

ತಂದೆ ಹಾರ್ದಿಕ್ ಪಾಂಡ್ಯ ರಂತಿದ್ದಾರಂತೆ ಅಗಸ್ತ್ಯ:
ನೀವೂ ಸಹ ನಟಾಸಾ ಅವರು ಶೇರ್ ಮಾಡಿರುವ ಈ ಚಿತ್ರಗಳನ್ನು ನೋಡಬಹುದು ಮತ್ತು ಆ ಕಾಮೆಂಟ್‌ಗಳನ್ನು ಓದಬಹುದು. ಅದರಲ್ಲಿ ಮಗ ತಂದೆಯಂತೆ ಕಾಣುತ್ತಿದ್ದಾನೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 

 
 
 
 

 
 
 
 
 
 
 
 
 

#2months 💙 Agastya 💙

A post shared by Nataša Stanković✨ (@natasastankovic__) on

ನಟಾಸಾ ಆಗಾಗ್ಗೆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ!
ಹಾರ್ದಿಕ್ ಪಾಂಡ್ಯ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯುತ್ತಿರುವ ಐಪಿಎಲ್ನಲ್ಲಿ ಆಡುತ್ತಿದ್ದಾರೆ ಮತ್ತು ಇಲ್ಲಿ ಅವರ ಪತ್ನಿ ನಟಾಸಾ ಆಗಾಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಪುತ್ರರತ್ನನಿಗೆ ಜನ್ಮ ನೀಡಿದ Natasa Stankovic, ತಂದೆಯಾದ Hardik Pandya

ವೈರಲ್ ಆಗಿದ್ದ ಪ್ರಪೋಸ್ ವಿಡಿಯೋ :
ಹಾರ್ದಿಕ್ ಈ ವರ್ಷದ ಜನವರಿಯಲ್ಲಿ ದುಬೈನಲ್ಲಿ ನಟಾಸಾ ಅವರಿಗೆ ಪ್ರಪೋಸ್ ಮಾಡಿದ್ದರು ಮತ್ತು ಉಡುಗೊರೆಯಾಗಿ ಅವರಿಗೆ ಉಂಗುರವನ್ನು ನೀಡಿದರು. ಆ ಸಮಯದಲ್ಲಿ ಹಾರ್ದಿಕ್ ಅವರ ಪ್ರಪೋಸ್ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.

ಬಿಗ್ ಬಾಸ್ ಮನೆಯಲ್ಲಿ ನಟಾಸಾ:
ನಟಾಸಾ ಸರ್ಬಿಯಾದ ಮಾಡೆಲ್ ಆಗಿದ್ದು, ಪ್ರಕಾಶ್ ಝಾ ಅವರ 'ಸತ್ಯಾಗ್ರಹ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅವರು 2014-15ರಲ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್ 8' ನ ಭಾಗವಾಗಿದ್ದರು. ಅವರು ಅನೇಕ ಬಾಲಿವುಡ್ ಹಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲವು ನೃತ್ಯ ಸಹ ಮಾಡಿದ್ದಾರೆ. ಟಿವಿಯಲ್ಲಿ ಕೊನೆಯ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋ 'ನಾಚ್ ಬಲಿಯೆ 9' ನಲ್ಲಿ ಇವರು ಕಾಣಿಸಿಕೊಂಡರು.

Trending News