Nayanthara Casting couch : ಹಲವು ದಿನಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ನಯನತಾರಾ ಕೂಡ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಜಾನಿ ಮಾಸ್ಟರ್ ಕೇಸ್ ನಂತರ..ಮಲಯಾಳಂನಲ್ಲಿ ಹೇಮಾ ಕಮಿಟಿ ಬಳಿಕ.. ತೆಲುಗು ನಾಯಕಿಯರು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಯನತಾರಾ ಹೇಳಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹೆಚ್ಚಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ಮಲಯಾಳಂ ಚಿತ್ರರಂಗದಲ್ಲಿ ಈ ವಿಷಯ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಖ್ಯಾತ ನಟಿ ನಯನತಾರಾ ಅವರು ಕಾಸ್ಟಿಂಗ್ ಕೌಚ್‌ಗೆ ಸಂಬಂಧಿಸಿದಂತೆ ತಮಗಾದ ಸಂಕಷ್ಟವನ್ನು ವಿವರಿಸಿದ್ದಾರೆ. ಒಂದು ಕಾಲದಲ್ಲಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದೆ ಎಂದು ನಯನತಾರಾ ಹೇಳಿದ್ದಾರೆ.
ನಯನತಾರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾನು ಕೂಡ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 'ನನಗೆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡಲು, ನಿರ್ಮಾಪಕರು ನನ್ನಿಂದ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು' ಆದರೆ ನಾನು ಪಾತ್ರ ಮತ್ತು ಬೇಡಿಕೆ ಎರಡನ್ನೂ ಧೈರ್ಯವಾಗಿಯೇ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ನಯನತಾರಾ ಚಿತ್ರದ ಹೆಸರು ಮತ್ತು ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಧೈರ್ಯವಾಗಿ ಆಫರ್ ತಿರಸ್ಕರಿಸಿ ಒಂದು ಹೆಜ್ಜೆ ಮುಂದಿಟ್ಟಿದ್ದೆ. ಅದೇ ನನ್ನನ್ನು ಇಷ್ಟು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ನಿಲ್ಲುವಂತೆ ಮಾಡಿದೆ ಎನ್ನುತ್ತಾರೆ ನಯನತಾರಾ.
ಕಾಸ್ಟಿಂಗ್ ಕೌಚ್ ಬಗ್ಗೆ ಹಲವು ತಾರೆಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್‌ನಿಂದ ಹಿಡಿದು ಕಂಗನಾ ರಣಾವತ್‌ವರೆಗೆ ಅನೇಕ ಬಾಲಿವುಡ್ ತಾರೆಯರು ಕಾಸ್ಟಿಂಗ್ ಕೌಚ್‌ನ ಸತ್ಯವನ್ನು ಪ್ರಪಂಚದ ಮುಂದೆ ತಂದಿದ್ದಾರೆ.
ದಕ್ಷಿಣ ಇಂಡಸ್ಟ್ರಿ ಕೂಡ ಈ ಕಳಂಕದಿಂದ ದೂರವಿರಲು ಸಾಧ್ಯವಾಗಲಿಲ್ಲ. ನಟಿ ರಾಧಿಕಾ ಆಪ್ಟೆಯಿಂದ ಹಿಡಿದು ನಯನತಾರಾವರೆಗೆ ಅನೇಕ ನಟಿಯರು ಚಿತ್ರರಂಗದ ಈ ಕರಾಳ ಸತ್ಯವನ್ನು ತೆರೆದಿಟ್ಟಿದ್ದಾರೆ.
ಇದನ್ನೂ ಓದಿ: ಏನಿದು ಮಗಳ ವಯಸ್ಸಿನ ನಟಿಯೊಂದಿಗೆ ಬಾಲಯ್ಯನ ವರ್ತನೆ? ಹಿರಿಯ ನಟ ಮಾಡಿದ ಕೆಲಸಕ್ಕೆ ಕೆಂಡಾಮಂಡಲವಾದ ಫ್ಯಾನ್ಸ್..
ಇದನ್ನೂ ಓದಿ: ಏನೇ ಮಾಡಿದ್ರೂ.. ಎಷ್ಟೇ ಕೋಟಿ ಕೊಟ್ರೂ ಸಲ್ಮಾನ್ ಖಾನ್ ಜೊತೆ ಮಾತ್ರ ನಟಿಸಲ್ಲ ಎಂದ ಖ್ಯಾತ ನಟಿ! ಕಾರಣ ಇದೇ..









