ಮುಂಬೈ: ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಪ್ರಕರಣದಲ್ಲಿ ಮಾದಕ ಪದಾರ್ಥ ಗಳ ಆಂಗಲ್ ಕುರಿತು ತನಿಖೆ ನಡೆಸುತ್ತಿದ್ದ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಪ್ರಮುಖ ಆರೋಪಿ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ 30 ಗಂಟೆಗಳ ಕಾಲ ಆಕೆಯ ವಿಚಾರಣೆಯನ್ನು ನಡೆಸಲಾಗಿದೆ. ವಿಚಾರಣೆಯ ವೇಳೆ ರಿಯಾ ಸುಶಾಂತ್ ಗೆ ಡ್ರಗ್ಸ್ ನೀಡುತ್ತಿರುವುದನ್ನು ಒಪ್ಪಿಕೊಂಡಿದ್ದು, ತಾನೂ ಕೂಡ ಡ್ರಗ್ಸ್ ಸೇವನೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ರಾಜ್ಪುತ್ ಸಾವಿನ 86 ದಿನಗಳ ಬಳಿಕ NCB ಅಧಿಕಾರಿಗಳು ರಿಯಾ ಅವರನ್ನು ಬಂಧಿಸಿದ್ದಾರೆ.
ಭಾನುವಾರ ಹಾಗೂ ಸೋಮವಾರ ನಡೆದ ವಿಚಾರಣೆಯ ಬಳಿಕ ಮೂರನೇ ದಿನವಾದ ಇಂದು ಕೂಡ ರಿಯಾ ಚಕ್ರವರ್ತಿಯನ್ನು NCB ಅಧಿಕಾರಿಗಳು ಬೆಳಗ್ಗೆ 10.35ಕ್ಕೆ ಕಚೇರಿಗೆ ಕರೆಯಿಸಿ, ಮಧ್ಯಾಹ್ನ 3.15ರ ವರೆಗೆ ಪುನಃ ವಿಚಾರಣೆ ನಡೆಸಿ ಬಂಧನಕ್ಕೆ ಒಳಪಡಿಸಿದ್ದಾರೆ.
ಮೂಲಗಳ ಪ್ರಕಾರ ಎನ್.ಸಿ.ಬಿ ಅಧಿಕಾರಿಗಳು ರಿಯಾ ಚಕ್ರವರ್ತಿಗೆ ಪ್ರಶ್ನೆಯೊಂದನ್ನು ಕೇಳಿದ್ದು, ಈ ಪ್ರಶ್ನೆಗೆ ರಿಯಾ ನಿರುತ್ತರರಾಗಿದ್ದಾರೆ ಎನ್ನಲಾಗಿದೇ. ಮೂಲಗಳ ಪ್ರಕಾರ ಅಧಿಕಾರಿಗಳಿಗೆ ದೊಡ್ಡ ಪ್ರಶ್ನೆಯೊಂದನ್ನು ಕೇಳಿದ್ದು, ಇದಕ್ಕೆ ರಿಯಾ ಉತ್ತರಿಸಲು ವಿಫಲರಾಗಿದ್ದಾರೆ. ನೀವು ನಿಮ್ಮ ಅನಾರೋಗ್ಯ ಪೀಡಿತ ಸ್ನೇಹಿತನಿಗೆ ಔಷಧಿ ನೀಡುವಿರೊ ಅಥವಾ ಡ್ರಗ್ಸ್ ನೀದುವಿರೋ? ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಲು ರಿಯಾ ವಿಫಲರಾಗಿದ್ದಾರೆ. ಇದಕ್ಕೆ ಉತ್ತರಿಸಿದ ರಿಯಾ, ತಾವು ಸುಶಾಂತ್ ಹೇಳಿಕೆಯಂತೆಯೇ ಅವರಿಗೆ ಡ್ರಗ್ಸ್ ನೀಡಿದ್ದು, ಸುಶಾಂತ್ ಒತ್ತಡ ಹಿನ್ನೆಲೆ ಹೀಗೆ ಮಾಡಿರುವುದಾಗಿ ಹೇಳಿದ್ದಾರೆ.
ಬಳಿಕ ಸುಶಾಂತ್ ಮನೋವೈದ್ಯರ ಸಲಹೆಯ ಮೇರೆಗೆ ಔಷಧಿ ಸೇವಿಸಿದ್ದರು ಎಂಬ ಮಾತು ನಿಮಗೆ ತಿಳಿದಿತ್ತೆ ಎಂದು ಅಧಿಕಾರಿಗಳು ರಿಯಾ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ರಿಯಾ ಉತ್ತರ ನೀಡಲು ನಿರಾಕರಿಸಿದ್ದಾರೆ.
ಅಪರಾಧ ಒಪ್ಪಿಕೊಂಡ ರಿಯಾ
NCB ಅಧಿಕಾರಿಯ ವಿಚಾರಣೆಯ ವೇಳೆ ರಿಯಾ ತಾವು ಮಾದಕ ಪದಾರ್ಥ ಹೊಂದಿದ ಸಿಗರೆಟ್ ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ತಾವು BUD ನಿಂದ ತುಂಬಿದ ಸಿಗರೆಟ್ ಸೇದುತ್ತಿರುವುದಾಗಿ ರಿಯಾ ಹೇಳಿದ್ದಾರೆ. ಅಂದರೆ ರಿಯಾ ಗಾಂಜಾದಿಂದ ಕೂಡಿದ ಸಿಗರೆಟ್ ಸೇವನೆ ಮಾಡುತ್ತಿದ್ದಳು. ಸುಶಾಂತ್ ಜೊತೆಗೆ ತಾವು ಈ ಸಿಗರೆಟ್ ಸೇದುತ್ತಿರುವುದಾಗಿ ರಿಯಾ ಒಪ್ಪಿಕೊಂಡಿದ್ದಾಳೆ. ರಿಯಾ ಮನೆಯಿಂದ ವಶಕ್ಕೆ ಪಡೆಯಲಾಗಿರುವ ಇಲೆಕ್ಟ್ರಾನಿಕ್ ಸಾಕ್ಷಾಧಾರಾಗಳಿಂದ ಇದು ಸಾಬೀತಾಗಿದೆ. ಇವುಗಳ ಫೋರೆನ್ಸಿಕ್ ತನಿಖೆ ನಡೆಸಲಾಗಿದೆ .