Neha Kakkar: ವಿಧಿಯಾಟವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಇದಕ್ಕೆ ಉತ್ತಮ ನಿದರ್ಶನ ಸ್ಟಾರ್ ಗಾಯಕಿ. ಕಡು ಬಡತನದಲ್ಲಿಯೇ ಹುಟ್ಟಿ ಬೆಳೆದ ಈಕೆ ಇಂದು ಬಾಲಿವುಡ್ ಸ್ಟಾರ್ ಸಿಂಗರ್. ಕೋಟ್ಯಾಂತರ ರೂಪಾಯಿ ಸಂಪತ್ತಿನ ಒಡತಿ.

Neha Kakkar Net Worth: ಬಡತನದಲ್ಲಿಯೇ ನಮಗೇ ತಿನ್ನಲು ಹಿಟ್ಟಿಲ್ಲ ಮಕ್ಕಳು ಸಾಕುವುದು ಇನ್ನೂ ಕಷ್ಟವೆಂದು ಹುಟ್ಟುವ ಮೊದಲೇ ಪೋಷಕರು ಗರ್ಭಪಾತಕ್ಕೆ ಮುಂದಾಗಿದ್ದರು. ಅನಿವಾರ್ಯ ಕಾರಣದಿಂದಾಗಿ ಬದುಕುಳಿದ ಈಕೆ ಕಷ್ಟದಲ್ಲೇ ಹುಟ್ಟಿ, ಬೆಳೆದು ಇಂದು ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸ್ಟಾರ್ ಗಾಯಕಿ. ಈಕೆ ಮಾತ್ರವಲ್ಲ, ಈಕೆಯ ಸಹೋದರ-ಸಹೋದರಿಯೂ ಕೂಡ ಗಾಯನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಜನಪ್ರಿಯ ಗಾಯಕಿ ಬೇರಾರೂ ಅಲ್ಲ ಭಾರತದ ಪ್ರಸಿದ್ದ ಸಿಂಗಿಂಗ್ ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೀಸನ್ ಎರಡರಲ್ಲಿ ಸ್ಪರ್ಧಿಯಾಗಿ ಪ್ರಸ್ತುತ ಅದೇ ಕಾರ್ಯಕ್ರಮದ ಜಡ್ಜ್ ಕೂಡ ಆಗಿರುವ ನೇಹಾ ಕಕ್ಕರ್.
ಹಲವು ಆಲ್ಬಂಗಳಲ್ಲಿ ಕೆಲಸ ಮಾಡಿರುವ ನೇಹಾ ಕಕ್ಕರ್ ಬಾಲಿವುಡ್ ನಲ್ಲಿ ಜನಪ್ರಿಯ ಗೀತೆಗಳಲ್ಲಿ ಒಂದಾದ 'ಕಾಲಾ ಚಸ್ಮ' ಗೀತೆಯನ್ನಾಡಿ ಇಡೀ ಭಾರತದಲ್ಲಿ ಹೆಸರುವಾಸಿ ಆದರು. ಕನ್ನಡವೂ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಾಡಿರುವ, ವೇದಿಕೆ ಮೇಲೆ ಸದಾ ನಗುಮುಖದೊಂದಿಗೆ ಕಾಣಿಸುವ ಈ ರಾಕ್ ಸ್ಟಾರ್ ಗಾಯಕಿ ಜೀವನ ಮೇಲೆ ಕಾಣುವಷ್ಟು ಸುಂದರ, ಹೂವಿನ ಹಾದಿಯಾಗಿರಲಿಲ್ಲ.
ಹುಟ್ಟುವ ಮೊದಲೇ ಗರ್ಭಪಾತಕ್ಕೆ ಮುಂದಾಗಿದ್ದ ಪೋಷಕರು:
ಮೊದಲೇ ತಿಳಿಸಿದಂತೆ ಕಡು ಬಡತನದಿಂದ ಬಂದವರು ನೇಹಾ ಕಕ್ಕರ್. ಇವರ ಪೋಷಕರಿಗೆ ಮೊದಲೇ ಇಬ್ಬರು ಮಕ್ಕಳಿದ್ದರು. ಹಾಗಾಗಿ ನೇಹಾ ಹುಟ್ಟುವ ಮೊದಲೇ ಪೋಷಕರು ತಮಗೆ ಈ ಮಗು ಬೇಡವೆಂದು ಗರ್ಭಪಾತ ಮಾಡಿಸಲು ನಿರ್ಧರಿಸಿದ್ದರಂತೆ.... ಈ ಬಗ್ಗೆ ನೇಹಾ ಕಕ್ಕರ್ ಅವರ ಅಣ್ಣ ಟೋನಿ ಕಕ್ಕರ್ ಸ್ವತಃ ತಮ್ಮ 'ಕಕ್ಕರ್ ಫ್ಯಾಮಿಲಿ ಸ್ಟೋರಿ' ಎಂಬ ಸಂಚಿಕೆಯಲ್ಲಿ ಮಾತನಾಡಿದ್ದಾರೆ.
ಕಳೆದ ವರ್ಷ ನೇಹಾ ಕಕ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ 'ಕಕ್ಕರ್ ಫ್ಯಾಮಿಲಿ ಸ್ಟೋರಿ' ಸಂಚಿಕೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದ ಟೋನಿ ಕಕ್ಕರ್, ನಮ್ಮ ತಂದೆ-ತಾಯಿ ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದ ದಿನಗಳವು. ತೀವ್ರವಾದ ಹಣಕಾಸು ತೊಂದರೆಯನ್ನು ಎದುರಿಸುತ್ತಿದ್ದ ಅವರು ನೇಹಾ ಜನಿಸುವ ಮೊದಲೇ ಈ ಪರಿಸ್ಥಿತಿಯಲ್ಲಿ ಮತ್ತೊಂದು ಮಗು ಸಾಕುವ ಗರ್ಭಪಾತ ಮಾಡಿಸಿಕೊಳ್ಳುವ ಬಗ್ಗೆ ಚಿಂತಿಸಿದ್ದರು. ಆದರೆ, ಭ್ರೂಣವು 8 ವಾರಗಳಿಗಿಂತ ಮೇಲ್ಪಟ್ಟಿದ್ದರಿಂದ ಇದು ಸಾಧ್ಯವಾಗಲಿಲ್ಲ. ಆದರೆ, ಆಕೆ ಹುಟ್ಟಿದ ಬಳಿಕ ಅವಳೇ ನಮಗೆಲ್ಲಾ ಆಸರೆಯಾದಳು. ನೇಹಾ ಕಕ್ಕರ್ ನಡೆದು ಬಂದ ದಾರಿ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಶ್ಲಾಘಿಸಿದ್ದರು.
ಋಷಿಕೇಶದಲ್ಲಿ ಹುಟ್ಟಿ ಬೆಳೆದ ನೇಹಾ ಆರಂಭದಲ್ಲಿ ಸಹೋದರಿ ಸೋನು ಕಕ್ಕರ್ ರಿಂದ ಹಾಡುವುದನ್ನು ಕಲಿತರು. ಅದನ್ನೇ ಕಾಯಕವನ್ನಾಗಿ ಮಾಡಿಕೊಂಡ ಈಕೆ ಮೊದಲು ಮನೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಹಾಡುತ್ತಿದ್ದರು. ಆದರೀಗ ಈಕೆ ಕೋಟ್ಯಾಂತರ ಆಸ್ತಿಯ ಒಡತಿಯಾಗಿದ್ದಾರೆ.
ನೇಹಾ ಕಕ್ಕರ್ ಸಂಪತ್ತು:
ಲಭ್ಯವಿರುವ ಮಾಹಿತಿಗಳ ಪ್ರಕಾರ, ಗಾಯಕಿ ನೇಹಾ ಕಕ್ಕರ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲು 5 ಲಕ್ಷ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ. ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಲು ಸುಮಾರು 60-70 ಲಕ್ಷ ರೂ.ವರೆಗೆ ಚಾರ್ಜ್ ಮಾಡುತ್ತಾರೆ. ಋಷಿಕೇಶದಲ್ಲಿ ಭವ್ಯ ಬಂಗಲೆ, ಮುಂಬೈನಲ್ಲಿ ಆಸ್ತಿ ಹೊಂದಿರುವ ನೇಹಾ ಕಕ್ಕರ್ ಸುಮಾರು 65 ಕೋಟಿ ರೂ. ಸಂಪತ್ತಿನ ಒಡತಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.