)
Serials ending for bigg boss : ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಇನ್ನು 3 ದಿನ ಬಾಕಿ ಉಳಿದಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ರಾತ್ರಿ 9.30ಕ್ಕೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಬಿಗ್ ಬಾಸ್ ಗಾಗಿ ಯಾವೆಲ್ಲ ಸೀರಿಯಲ್ ಗಳು ಕೊನೆ ಆಗುತ್ತವೆ ಎಂಬ ಮಾಹಿತಿ ಇಲ್ಲಿದೆ.
ದೃಷ್ಟಿ ಬೊಟ್ಟು ಧಾರಾವಾಹಿ ಈಗಾಗಲೇ ಅಂತ್ಯಗೊಂಡಿದೆ. ಇದರ ಜೊತೆ ಇನ್ನೂ ಒಂದು ಧಾರಾವಾಹಿ ಮುಕ್ತಾಯವಾಗಲಿದೆ. ದಿವ್ಯಾ ಉರುಡುಗ ಹಾಗೂ ರಿತ್ವಿಕ್ ನಟಿಸುತ್ತಿರುವ ನಿನಗಾಗಿ ಧಾರಾವಾಹಿ ಹಲವು ಎಪಿಸೋಡ್ ಪ್ರಸಾರ ಕಂಡಿದ್ದು ಟಿವಿ ಪ್ರೇಕ್ಷಕರ ಮನಗೆದ್ದಿದೆ. ಈ ಧಾರಾವಾಹಿ ಪ್ರತಿ ನಿತ್ಯ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿತ್ತು.
ಈಗ ಈ ಧಾರಾವಾಹಿಯ ಕೊನೆಯ ಹಂತದ ಶೂಟಿಂಗ್ ಪೂರ್ಣಗೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿನಗಾಗಿ ಸೀರಿಯಲ್ ಸಮಯದಲ್ಲಿ ‘ಗಂಧದಗುಡಿ’ ಧಾರಾವಾಹಿ ಪ್ರಸಾರ ಕಾಣಲಿದೆ ಎನ್ನಲಾಗಿದೆ.
ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರ ಕಾಣುತ್ತಿದ್ದ ‘ದೃಷ್ಟಿ ಬೊಟ್ಟು’ ಧಾರಾವಾಹಿ ಮುಕ್ತಾಯಗೊಂಡಿದೆ. ಆ ಸಮಯದಲ್ಲಿ ‘ಯಜಮಾನ’ ಹಾಗೂ ‘ರಾಮಾಚಾರಿ’ ಧಾರಾವಾಹಿಗಳ ಮಹಾ ಸಂಗಮ ಟೆಲಿಕಾಸ್ಟ್ ಆಗುತ್ತಿದೆ. ಈ ಎರಡು ಸೀರಿಯಲ್ಗಳ ಪೈಕಿ ಒಂದು ಕೊನೆ ಆಗಬಹುದು ಅಥವಾ ಮಹಾ ಸಂಗಮ ಮುಂದುವರಿಯಬಹುದು ಎನ್ನಲಾಗುತ್ತಿದೆ. ಒಟ್ಟಾರೆ ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.