Actor Om Puri: ಚಿತ್ರರಂಗದಲ್ಲಿ ಅದರಲ್ಲೂ ಹಿಂದಿ ಚಿತ್ರರಂಗ ಬಾಲಿವುಡ್‌ನಲ್ಲಿ ತಾರೆಯರು ಅವರ ಲವ್ ಅಫೇರ್, ವಿವಾಹ, ಡಿವೋರ್ಸ್, ವಿವಾಹಕ್ಕೂ ಮೊದಲು ತಾಯಿಯಾಗುವುದು ಇಲ್ಲವೇ ಅಕ್ರಮ ಸಂಬಂಧಗಳ ಬಗ್ಗೆ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಇತ್ತೀಚಿನ ಸಂದರ್ಶನವೊಂದರೆಯಲ್ಲಿ ಖ್ಯಾನ ನಟನ ಪತ್ನಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು 'ನಾನು ಗರ್ಭಿಣಿಯಾಗಿದ್ದಾಗ ನನ್ನ ಪತಿ ಅಕ್ರಮ ಸಂಬಂಧದಲ್ಲಿದ್ದರು' ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಕನ್ನಡದ ಎಕೆ47, ಧ್ರುವ ಸೇರಿದಂತೆ ದಕ್ಷಿಣ ಭಾರತದ ತೆಲುಗು, ಮಲೆಯಾಳಂ ಮಾತ್ರವಲ್ಲದೆ, ಭಾರತದಾದ್ಯಂತ ಹಲವು ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ 'ಓಂ ಪುರಿ'. ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ ನಲ್ಲೂ ಖ್ಯಾತಿ ಪಡೆದಿದ್ದ ದಿವಂಗತ ನಟ ಓಂ ಪುರಿ ಬಗ್ಗೆ ಅವರ ಪತ್ನಿ ಸೀಮಾ ಕಪೂರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನಟನೆಯಲ್ಲಿ ಸೈ ಎನಿಸಿಕೊಂಡು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ನಟ ಓಂ ಪುರಿ ಅವರಿಂದಾಗಿ ಜೀವನದಲ್ಲಿ ತಾವು ಅನುಭವಿಸಿದ ಕಹಿ ಘಟನೆಗಳು, ದ್ರೋಹ, ತಾಯ್ತನದ ನಷ್ಟದ ಬಗ್ಗೆ ಭಾವನಾತ್ಮಕವಾಗಿ ಹಲವು ವಿಚಾರಗಳನ್ನು ಸೀಮಾ ಕಪೂರ್ ಹಂಚಿಕೊಂಡಿದ್ದಾರೆ.
ವೈವಾಹಿಕ ಜೀವನದಲ್ಲಿ ಆಘಾತ:
ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಸೀಮಾ ಕಪೂರ್, ಮೊದ ಮೊದಲಿಗೆ ಓಂ ಪುರಿ ಹಾಗೂ ನನ್ನ ಸಾಂಸಾರಿಕ ಬದುಕು ಸುಂದವಾಗಿಯೇ ಇತ್ತು. ಆದರೆ, ಹಾಲಿವುಡ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಟ ಓಂ ಪುರಿ ಅವರಿಗೆ ಪತ್ರಕರ್ತೆ ನಂದಿತಾ ಅವರೊಂದಿಗೆ ಪ್ರೇಮಾಂಕುರವಾಗಿತ್ತು. ಇದು ನಮ್ಮ ಸಾಂಸಾರಿಕ ಜೀವನದಲ್ಲಿ ದೊಡ್ಡ ಬಿರುಕನ್ನೆ ಸೃಷ್ಟಿಸಿತು. ಇನ್ನೂ ಆಘಾತಕಾರಿ ಸಂಗತಿಯೆಂದರೆ ಈ ಸಂದರ್ಭದಲ್ಲಿ ನಾನು (ಸೀಮಾ) ಗರ್ಭಿಣಿಯಾಗಿದ್ದೆ... ಒಂದು ದಿನ ಓಂ ಪುರಿ ಅವರು ಕರೆ ಮಾಡಿ, ನಾನು ಬೇರೆಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ನಮ್ಮ ಸಂಬಂಧವನ್ನು ಕೊನೆಗೊಳಿಸೋಣ ಎಂದಿದ್ದರು. ಮೊದಲಿಗೆ ನನಗೆ ಇದನ್ನು ನಂಬಲು ಸಾಧ್ಯವಾಗಲಿಲ್ಲ.ಬಳಿಕ ಅವರ ಬಳಿ ಪ್ರೇಮ ಪತ್ರಗಳು ಸಿಕ್ಕಾಗ ನಾನು ನಂಬಲೇ ಬೇಕಾಯಿತು. ಆದರೆ, ಆ ಸಂದರ್ಭದಲ್ಲಿ ನಾನು ಗರ್ಭಿಣಿಯಾಗಿದ್ದರಿಂದ ಡಿವೋರ್ಸ್ ನೀಡುವ ಬಗ್ಗೆ ಏನನ್ನೂ ನಿರ್ಧರಿಸಿರಲಿಲ್ಲ ಎಂದಿದ್ದಾರೆ.
ಉದ್ದೇಶಪೂರ್ವಕವಾಗಿ ಪತ್ನಿ ಮುಂದೆಯೇ ಪ್ರಿಯಕರನ ಹೆಸರಿಡಿದು ಕರೆಯುತ್ತಿದ್ದ ಆಕೆ...
ಓಂ ಪುರಿ ಮತ್ತು ಅವರ ಪತ್ನಿ ಸೀಮಾ ಸಂಬಂಧದಲ್ಲಿ ಬಿರುಕಿರುವುದನ್ನು ಅರಿತಿದ್ದ ಪತ್ರಕರ್ತೆ ನಂದಿತಾ ಬೇಕೆಂತಲೇ ಸೀಮಾ ಎದುರು ಓಂ ಪುರಿ ಅವರನ್ನು ಹೆಸರಿಡಿದು ಕರೆಯುತ್ತಿದ್ದರಂತೆ. ಆ ಸಂದರ್ಭದಲ್ಲಿ ಓಂ ಪುರಿ ಮದ್ಯದ ಚಟಕ್ಕೂ ಒಳಗಾಗಿದ್ದರು. ಅದೊಂದು ತುಂಬಾ ದುಃಖದಿಂದಲೇ ಕೂಡಿದ್ದ ಸಮಯ ಎಂದು ಕಷ್ಟದ ಬದುಕಿನ ಬಗ್ಗೆ ಸೀಮಾ ಭಾವುಕರಾಗಿದ್ದಾರೆ.
ಡಿವೋರ್ಸ್..
ಕೊನೆಗೆ ಓಂ ಪುರಿ ಕಾನೂನಾತ್ಮಕವಾಗಿ ಪತ್ನಿಯಿಂದ ಡಿವೋರ್ಸ್ ಪಡೆದು ಬೇರ್ಪಟ್ಟರು. ಆ ಕಾಲದಲ್ಲಿ 6ಲಕ್ಷ ರೂ. ಜೀವನಾಂಶವನ್ನು ನೀಡಿದ್ದರು. ಈ ಎಲ್ಲಾ ನೋವನ್ನು ಮೆಟ್ಟಿ ಜೀವನಸಾಗಿಸಲು ಮುಂದಾಗಿದ್ದ ಸೀಮಾ ದುರದೃಷ್ಟವಶಾತ್ ಅಪಘಾತವೊಂದರಲ್ಲಿ ತಾವು ಹೆತ್ತ ಕಂದಮ್ಮನನ್ನೂ ಸಹ ಕಳೆದುಕೊಂಡರು. ಈ ಸಂದರ್ಭದಲ್ಲಿ ಓಂ ಪುರಿ ವಿಚ್ಛೇದಿತ ಪತ್ನಿಗೆ ತಮ್ಮ ಕಾರ್ಯದರ್ಶಿ ಮೂಲಕ 25,000ರೂ. ಕಳುಹಿಸಿದ್ದರಂತೆ. ಇದನ್ನು ತಿರಸ್ಕರಿಸಿದ ಸೀಮಾ "ಸಂಬಂಧವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದರಂತೆ. ಆ ಬಳಿಕ "ತಾವು ಒಬ್ಬಂಟಿಯಾಗಿಯೇ ಜೀವನ ಸಾಗಿಸಿರುವ ಸೀಮಾ ಎಂದಿಗೂ ಕೂಡ ನನ್ನ ಸ್ವಾಭಿಮಾನವನ್ನು ಬಿಟ್ಟುಕೊಟ್ಟಿಲ್ಲ" ಎಂದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









