)
Anushka Shetty News: ದಿನೇ ದಿನೇ ಬೆಳೆಯುತ್ತಿರುವ ತಂತ್ರಜ್ಞಾನದ ಜಮಾನದಲ್ಲಿ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಯಾವುದೇ ವಿಷಯವೂ ಕೂಡ ತುಂಬಾ ಬೇಗ ವೈರಲ್ ಆಗುತ್ತದೆ. ಅದರಲ್ಲೂ, ಚಿತ್ರರಂಗದ ನಟ-ನಟಿಯರ ವಿಷಯ ಸಿಕ್ಕರಂತು ಕ್ಷಣಾರ್ಧದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಗಳಿಸುತ್ತವೆ. ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹಿರೋಯಿನ್ ಹಳೆಯ ಫೋಟೋ ಮತ್ತವರ ಹಳೆಯ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.
ದಕ್ಷಿಣದ ಟಾಪ್ ಹೀರೋಯಿನ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಈ ನಟಿ ನಾಗಾರ್ಜುನ ಮತ್ತು ಸೋನು ಸೂದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ಸೂಪರ್ಹಿಟ್ ಚಿತ್ರದ ಮೂಲಕ ಟಾಲಿವುಡ್ಗೆ ಪ್ರವೇಶಿಸಿದರು. ಪ್ರಸ್ತುತ ತೆಲುಗು ಸಿನಿಮಾ ರಂಗದಲ್ಲಿ ಟಾಪ್ ಹೀರೋಯಿನ್ಗಳಲ್ಲಿ ಒಬ್ಬರಾಗಿರುವ ಈಕೆ ಒಂದು ಸಮಯದಲ್ಲಿ ಸರಣಿ ಹಿಟ್ಗಳ ಮೂಲಕ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ್ದ ನಟಿ. ತುಂಬಾ ಕಡಿಮೆ ಅವಧಿಯಲ್ಲಿ ಘಟಾನುಘಟಿ ತಾರೆಯರ ಜೊತೆಗೆ ತೆರೆ ಹಂಚಿಕೊಂಡು ತಮ್ಮ ಅಭಿನಯ ಚಾತುರ್ಯದ ಮೂಲಕವೇ ವಿಶೇಷ ಇಮೇಜ್ ಸೃಷ್ಟಿಸಿಕೊಂಡಿದ್ದ ಈಕೆ ನಮ್ಮ ಕರ್ನಾಟಕದ ಮಂಗಳೂರಿನವರು.
ಕನ್ನಡದ ಈ ಮುದ್ದು ಚೆಲುವೆಗೆ ಚಂದನವನಕ್ಕಿಂತ ಹೆಚ್ಚಿನ ಅವಕಾಶಗಳು ಸಿಕ್ಕಿದ್ದು ಟಾಲಿವುಡ್ ಚಿತ್ರರಂಗದಲ್ಲಿ. ಸಿಕ್ಕ ಅವಕಾಶಗಳನ್ನು ಅಚ್ಚುಕಟ್ಟಾಗಿ ಬಳಸಿಕೊಂಡ ಈಕೆ ಬೆರಳೆಣಿಕೆಯಷ್ಟೇ ಚಿತ್ರರಂಗದಲ್ಲಿ ನಟಿಸಿದರು ಒಳ್ಳೆಯ ಇಮೇಜ್ ಸೃಷ್ಟಿಸಿದ್ದಾರೆ. ನಾಗಾರ್ಜುನ, ಪ್ರಭಾಸ್, ಅಲ್ಲು ಅರ್ಜುನ್, ರಾಣಾ ಮುಂತಾದ ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಈ ಸುಂದರಿ 'ಬಾಹುಬಲಿ 1, 2, 'ಸಿಂಗಂ 3' ಚಿತ್ರಗಳಿಂದ ಹೆಚ್ಚಿನ ಜನಮನ್ನಣೆ ಗಳಿಸಿದರು. ಆಕೆ ಬೇರಾರೂ ಅಲ್ಲ, ನಟಿ ಅನುಷ್ಕಾ ಶೆಟ್ಟಿ.
ಒಂದಾನೊಂದು ಕಾಲದಲ್ಲಿ ಬೆಂಗಳೂರಿನ ಈಸ್ಟ್ವುಡ್ ಶಾಲೆಯಲ್ಲಿ ಯೋಗಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಅನುಷ್ಕಾ ಶೆಟ್ಟಿ, ಚಿತ್ರೋದ್ಯಮಕ್ಕೆ ಬರುವ ಮೊದಲು ಒಂದು ಪ್ರಾಜೆಕ್ಟ್ಗಾಗಿ ಆಡಿಷನ್ಗೆ ಹೋಗಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಲ್ಲದೆ, ಅವರ ಹಳೆಯ ಫೋಟೋ ಕೂಡ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...