)
Actress Tabu Real Life: ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ನಟಿಯ ಮುಗುಳ್ನಗುಗೆ ಮನಸೋಲದವರೇ ಇಲ್ಲ. ಹಿಂದಿ ಚಿತ್ರರಂಗದಲ್ಲಿ ಒಂದಾನೊಂದು ಕಾಲದಲ್ಲಿ ಟಾಪ್ ಹೀರೋಯಿನ್ ಆಗಿದ್ದ ಈಕೆಯ ಹೆಸರು ಬಾಲಿವುಡ್ ಮಾತ್ರವಲ್ಲ ಸೌತ್ ಸೂಪರ್ಸ್ಟಾರ್ ಜೊತೆಯೂ ಕೇಳಿಬಂದಿತ್ತು. ಮತ್ತೋರ್ವ ಸ್ಟಾರ್ ನಟಿಯ ಪತಿಯೊಂದಿಗೂ ಈಕೆಯ ಹೆಸರು ತಳುಕು ಹಾಕಿಕೊಂಡಿತ್ತು. ಈ ಎಲ್ಲಾ ವದಂತಿಗಳ ಹೊರತಾಗಿ 53ನೇ ವಯಸ್ಸಿನಲ್ಲಿಯೂ ಕೂಡ ಆಕೆ ಮದುವೆಯಾಗದೆ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ.
1980ರಲ್ಲಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ 90ರ ದಶಕದಲ್ಲಿ ಸ್ಟಾರ್ ಹೀರೋಯಿನ್ ಆಗಿ ದಶಕಗಳ ಕಾಲ ಸಿನಿ ರಂಗವನ್ನು ಆಳಿದ ನಟಿ ಟಬು. 53ನೇ ವಯಸ್ಸಿನ ಟಬು ಈಗಲೂ ಆಕರ್ಷಕ ಮೈಮಾಟ, ಫಿಟ್ನೆಸ್ ವಿಷಯದಲ್ಲಿ ಯುವತಿಯರೂ ನಾಚುವಂತೆ ಮಾಡುತ್ತಾರೆ. ಚಿತ್ರರಂಗದ ಸ್ಟಾರ್ ದಿಗ್ಗಜರ ಹಾರ್ಟ್ ಗೆದ್ದಿದ್ದ ಈಕೆಯ ನಗುವಿಗೆ ಫಿದಾ ಆಗದವರಿಲ್ಲ.
ಕಪೂರ್ ಕುಡಿಯೊಂದಿಗೆ ಪೆಹ್ಲಾ ಪೆಹ್ಲಾ ಪ್ಯಾರ್:
ಬಾಲಿವುಡ್ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿರುವವರರಲ್ಲಿ ಕಪೂರ್ ಕುಟುಂಬವೂ ಒಂದು. ಕಪೂರ್ ಕುಟುಂಬದ ಕುಡಿ ಸಂಜಯ್ ಕಪೂರ್ ಜೊತೆ ನಟಿ ಟಬು 1995ರಲ್ಲಿ ಪ್ರೇಮ್ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಂಜಯ್ ಕಪೂರ್, ತಾವು ಡೇಟಿಂಗ್ ಮಾಡುತ್ತಿದ್ದದ್ದು ನಿಜ. ಆದರೆ, ಸಿನಿಮಾ ರಿಲೀಸ್ ಗೂ ಮೊದಲೇ ನಮ್ಮಿಬ್ಬರ ನಡುವೆ ಮುನಿಸು ಮೂಡಿತ್ತು. ಇಬ್ಬರೂ ಮಾತನಾಡುವುದನ್ನೇ ಬಿಟ್ಟಿದ್ದೆವು ಎಂದವರು ಹೇಳಿದ್ದರು.
ಸೌತ್ ಸೂಪರ್ಸ್ಟಾರ್ ಜೊತೆ ಡೇಟಿಂಗ್:
ಸಂಜಯ್ ಕಪೂರ್ ಜೊತೆಗಿನ ಬ್ರೇಕಪ್ ಬಳಿಕ ಟಬು ಟಾಲಿವುಡ್ ಚಿತ್ರರಂಗದ ಸೂಪರ್ಸ್ಟಾರ್ ನಾಗಾರ್ಜುನ ಅವರೊಂದಿಗೂ ಡೇಟಿಂಗ್ ನಲ್ಲಿದ್ದಾರೆ ಎಂಬ ವರದಿಯೂ ಹಬ್ಬಿತ್ತು. ಆದರೆ, ಈ ಬಗ್ಗೆ ಇಬ್ಬರೂ ತಾರೆಯರು ಯಾವುದೇ ವಿಷಯವನ್ನು ಬಹಿರಂಗಪಡಿಸಿರಲಿಲ್ಲ.
ಸ್ಟಾರ್ ನಟಿಯ ಪತಿ ಜೊತೆಗೆ ಸಂಬಂಧದ ವದಂತಿ:
ಬಾಲಿವುಡ್ ಖ್ಯಾತ ನಟಿ ಕಾಜೋಲ್ ಪತಿ ನಟ ಅಜಯ್ ದೇವಗನ್ ಹಾಗೂ ನಟಿ ಟಬು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವದಂತಿಯೂ ಕೂಡ ಕೇಳಿಬಂದಿತ್ತು. ಒಮ್ಮೆ ಕಪಿಲ್ ಶರ್ಮಾ ಶೋನಲ್ಲಿ ತಾವು ಮದುವೆ ಆಗದಿರುವುದಕ್ಕೆ ಅಜಯ್ ದೇವಗನ್ ಕಾರಣ ಎಂದಿದ್ದ ಟಬು ಈ ಹಿಂದಿನ ಕಾರಣವನ್ನೂ ಬಿಚ್ಚಿಟ್ಟಿದ್ದರು.
ವಾಸ್ತವವಾಗಿ, ಅಜಯ್ ದೇವಗನ್ ಹಾಗೂ ಟಬು ಇಬ್ಬರು ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕಾಲೇಜಿನಲ್ಲಿ ಯಾವುದೇ ಹುಡುಗ ಟಬುಗೆ ಪ್ರಪೋಸ್ ಮಾಡಿದರೂ ಅಜಯ್ ಅವರನ್ನು ಓಡಿಸುತ್ತಿದ್ದರಂತೆ. ಬಳಿಕ, ಟಬು ಬಳಿ ಆತ ನಿನಗೆ ಸರಿಯಾದ ಜೋಡಿಯಲ್ಲ ಎಂದು ಹೇಳುತ್ತಿದ್ದರಂತೆ. ಈ ಕಾರಣದಿಂದಾಗಿಯೇ ನನ್ನ ಮದುವೆ ಆಗಿಲ್ಲ ಎಂದು ಕಪಿಲ್ ಶರ್ಮಾ ಶೋನಲ್ಲಿ ಟಬು ತಮಾಷೆಯಾಗಿ ನುಡಿದಿದ್ದರು.
1999ರಲ್ಲಿ ತೆರೆಕಂಡ 'ಹಮ್ ಸಾಥ್ ಸಾಥ್ ಹೇ' ಸಿನಿಮಾದಲ್ಲಿ ನಟಿ ಟಬು, ಸಾಧನಾ ಪಾತ್ರದಲ್ಲಿ ಆದರ್ಶ ಸೊಸೆಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಟಬು ಅವರ ಪಾತ್ರ ಸಿನಿಪ್ರಿಯರಿಗೆ ಎಷ್ಟು ಮೆಚ್ಚುಗೆಯಾಗಿತ್ತೆಂದರೆ ಸೊಸೆ ಎಂದರೆ ಆಕೆಯ ಸಾಧನಾ ಹಾಗೆಯೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಮನ ಮುಟ್ಟಿತ್ತು. ಆದರೆ, ಈಕೆಗೆ ನೈಜ ಬದುಕಿನಲ್ಲಿ ಒಂದು ಮನೆ ಸೊಸೆಯಾಗುವ ಅದೃಷ್ಟವೇ ಇರಲಿಲ್ಲವೇನೋ...