Top 10 Indian Stars: ಭಾರತದ ಟಾಪ್ ನಟ-ನಟಿಯರ ಬಗ್ಗೆ ಯೋಚಿಸಿದರೆ ಮೊದಲು ನೆನಪಾಗುವುದೇ ಬಾಲಿವುಡ್ ತಾರೆಯರು. ಆದರೆ, ಇದಕ್ಕೆ ಸೆಡ್ಡು ಹೊಡೆಯುವಂತ ವರದಿಯೊಂದು ಬಿಡುಗಡೆಯಾಗಿದ್ದು ಇದರಲ್ಲಿ ಬಾಲಿವುಡ್ ನಟ-ನಟಿಯರಿಗಿಂತ ದಕ್ಷಿಣ ಭಾರತದ ಕಲಾವಿದರು ಮೇಲ್ದರ್ಜೆಯಲ್ಲಿರುವುದು ಕಂಡು ಬಂದಿದೆ.

Top 10 Indian Stars List: ವಿಶ್ವದಲ್ಲಿ ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿ ನಟ-ನಟಿಯರ ಬಗ್ಗೆ ವಿಶೇಷವಾದ ಪ್ರೀತಿ, ಗೌರವ ಕಂಡು ಬರುತ್ತದೆ. ಹಲವು ಭಾಷೆ, ವಿವಿಧ ವೈಶಿಷ್ಟ್ಯಗಳಿಂದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಚಿತ್ರರಂಗದ ವಿಷಯಕ್ಕೆ ಬಂದರೆ ಮೊದಲು ನೆನಪಾಗುವುದೇ ಹಿಂದಿ ಚಿತ್ರರಂಗ ಎಂದರೆ ಬಾಲಿವುಡ್. ಅಂತೆಯೇ ಭಾರತದ ಟಾಪ್ ಹೀರೋ-ಹೀರೋಯಿನ್ ಬಗ್ಗೆ ಯೋಚಿಸಿದರೂ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಅಲಿಯಾ ಭಟ್, ಐಶ್ವರ್ಯ ರೈ ಬಚ್ಚನ್ ರಂತಹ ಬಾಲಿವುಡ್ ತಾರೆಯರೇ ನೆನಪಾಗುತ್ತಾರೆ. ಆದರೆ, ಇದಕ್ಕೆ ತದ್ವಿರುದ್ಧವಾದ ವರದಿಯೊಂದು ಬಿಡುಗಡೆಯಾಗಿದ್ದು ಈ ಪಟ್ಟಿಯಲ್ಲಿ ದಕ್ಷಿಣ ಭಾರತದ ನಟ-ನಟಿಯರ ಪ್ರಾಬಲ್ಯ ಸ್ಪಷ್ಟವಾಗಿ ಗೋಚರಿಸುತ್ತದೆ.
ಮಾರ್ಚ್ ತಿಂಗಳ ಓರ್ಮ್ಯಾಕ್ಸ್ ಮೀಡಿಯಾ ವರದಿ ಬಿಡುಗಡೆಯಾಗಿದ್ದು ಇದರಲ್ಲಿ ಭಾರತದ ಟಾಪ್ ನಟ-ನಟಿಯರ ವಿಭಾಗದಲ್ಲಿ ದಕ್ಷಿಣ ಭಾರತದ ಕಲಾವಿದರ ಪ್ರಾಬಲ್ಯ ಹೆಚ್ಚಾಗಿದೆ. ಜನಪ್ರಿಯ ನಟಿಯರ ಪಟ್ಟಿಯಲ್ಲಿ ಬಾಲಿವುಡ್ ಮಂಕಾಗಿದ್ದು ಟಾಪ್ 10 ನಟಿಯರಲ್ಲಿ 7ನಟಿಯರು ದಕ್ಷಿಣ ಭಾರತಾದವರೇ ಆಗಿದ್ದಾರೆ.
ಮಾರ್ಚ್ 2025ರ ಟಾಪ್ 10 ಜನಪ್ರಿಯ ನಟಿಯರು:
ಓರ್ಮ್ಯಾಕ್ಸ್ ಮೀಡಿಯಾ ವರದಿಯ ಪ್ರಕಾರ, ಮಾರ್ಚ್ 2025ರ ಟಾಪ್ 10 ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು ಅಗ್ರಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಅಲಿಯಾ ಭಟ್, ದೀಪಿಕಾ ಪಡುಕೋಣೆ, ಕಾಜಲ್ ಅಗರ್ವಾಲ್ ಟಾಪ್ 2, 3, 4ನೇ ಸ್ಥಾನದಲ್ಲಿದ್ದರೆ 5ರಿಂದ 10ನೇ ಸ್ಥಾನ ಕ್ರಮವಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದನ್ನ, ಸಾಯಿ ಪಲ್ಲವಿ, ತ್ರಿಶಾ ಕೃಷ್ಣನ್, ನಯನತಾರಾ, ಅನುಷ್ಕಾ ಶೆಟ್ಟಿ, ಕತ್ರಿನಾ ಕೈಫ್ ಇದ್ದಾರೆ.
ಮಂಕಾದ ಬಾಲಿವುಡ್ 10ರಲ್ಲಿ 7ಸ್ಟಾರ್ ನಟಿಯರು ದಕ್ಷಿಣ ಭಾರತದವರು!
ಗಮನಾರ್ಹವಾಗಿ, ಇತ್ತೀಚೆಗೆ ಸಮಂತಾ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದಾಗ್ಯೂ, ಸಮಂತಾ ಟಾಪ್ 10 ಜನಪ್ರಿಯ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಅವರ ಅಭಿಮಾನಿಗಳ ಸಂತೋಷವನ್ನು ಹೆಚ್ಚಿಸಿದೆ. ಆದಾಗ್ಯೂ, ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕನ್ನಡದ ಕುವರಿ ರಶ್ಮಿಕಾ ಮಂದಣ್ಣಾನ ಅವರ ಜನಪ್ರಿಯತೆಯೂ ಕುಂದಿದೆಯೇ ಎಂಬ ಅನುಮಾನಗಳು ಮೂಡಿವೆ. ಒಟ್ಟಾರೆಯಾಗಿ ಜನಪ್ರಿಯ ಟಾಪ್ 10ರಲ್ಲಿ 3ಮಂದಿಯಷ್ಟೆ ಹಿಂದಿ ಚಿತ್ರರಂಗದವರಿದ್ದು ಇನ್ನುಳಿದಂತೆ ದಕ್ಷಿಣ ಭಾರತದ 7 ನಟಿಯರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ.
ನಟರಲ್ಲೂ ಅಗ್ರಸ್ಥಾನದಲ್ಲಿ ಸೌತ್ ಸ್ಟಾರ್:
ಟಾಪ್ 10 ಜನಪ್ರಿಯ ನಟರ ಪಟ್ಟಿಯಲ್ಲಿ ಬಾಲಿವುಡ್ನ ಬಾದ್ಶಾ ಶಾರುಖ್ ಖಾನ್ ಅವರನ್ನೂ ಹಿಂದಿಕ್ಕಿರುವ ಪ್ರಭಾಸ್ ಪ್ರಥಮ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ದಳಪತಿ ವಿಜಯ್, ಮೂರನೇ ಸ್ಥಾನದಲ್ಲಿ ಅಲ್ಲು ಅರ್ಜುನ್, ನಾಲ್ಕನೇ ಸ್ಥಾನದಲ್ಲಿ ಶಾರುಖ್ ಖಾನ್ ಇದ್ದಾರೆ. ನಂತರದ ಸ್ಥಾನಗಳಲ್ಲಿ ರಾಮ್ ಚರಣ್, ಮಹೇಶ್ ಬಾಬು, ಅಜಿತ್, ಜೂನಿಯರ್ ಎನ್ಟಿಆರ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಇದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.