ರೋರಿಂಗ್ ಸ್ಟಾರ್ ಘರ್ಜನೆ “ಪರಾಕ್”ನಲ್ಲಿ ಬಲು ಜೋರಂತೆ. .! ಇದೇ ತಿಂಗಳು ನಡೆಯುತ್ತೆ “ಪರಾಕ್” ಮುಹೂರ್ತ..!

Paraak: ರೋರಿಂಗ್  ಸ್ಟಾರ್ ಶ್ರೀಮುರುಳಿಯ ‘ಬಘೀರ’ ಸಿನಿಮಾವನ್ನ ಮಕ್ಕಳಿಂದ ಹಿಡಿದು ಹಿರಿಯವರೆಗೂ ನೋಡಿ ಕೊಂಡಾಡಿದ್ದಾರೆ.ಯಾಕಂದ್ರೆ ಮುರುಳಿಅವರ ಎಫರ್ಟ್ ಎದ್ದುಕಾಣುತ್ತಿತ್ತು. ಬಘೀರ ಪಾತ್ರಕ್ಕೆ ಜೀವ ಕೊಡಲು ತಮ್ಮ ಜೀವವನ್ನೇ ಮೂಡಿಪಾಗಿಟ್ಟಿದ್ದರು ಅಂದ್ರೆ ತಪ್ಪಿಲ್ಲ ನೋಡಿ. ಸಿನಿಮಾ ಪ್ರಮೋಷನ್ ಅಂತ ಬಂದಾಗಲೂ ಕಾಲಿಗೆ ಗಂಟೆ ಕಟ್ಟಿಕೊಂಡವರಂತೆ ಓಡಾಡಿ ಸಿನಿಮಾ ಪ್ರಚಾರ ಮಾಡಿದ್ದರು ರೋರಿಂಗ್ ಸ್ಟಾರ್ ಶ್ರೀಮುರುಳಿ.   

Written by - YASHODHA POOJARI | Edited by - Zee Kannada News Desk | Last Updated : Mar 5, 2025, 12:38 PM IST
  • “ಪರಾಕ್”ಗೂ ಕೂಡ ಅಷ್ಟೇ ಪ್ರಯತ್ನ ಹಾಕಲು ಆಲ್ಮೋಸ್ಟ್ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ ನಟ ಮುರುಳಿ.
  • ಚಿತ್ರತಂಡ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರೋ ಬಗ್ಗೆ ಗಾಂಧಿನಗರದಲ್ಲಿ ಟಾಕ್ ಶುರು ಆಗಿದೆ.
ರೋರಿಂಗ್ ಸ್ಟಾರ್ ಘರ್ಜನೆ “ಪರಾಕ್”ನಲ್ಲಿ ಬಲು ಜೋರಂತೆ. .! ಇದೇ ತಿಂಗಳು ನಡೆಯುತ್ತೆ “ಪರಾಕ್” ಮುಹೂರ್ತ..!

Paraak: ರೋರಿಂಗ್  ಸ್ಟಾರ್ ಶ್ರೀಮುರುಳಿಯ ‘ಬಘೀರ’ ಸಿನಿಮಾವನ್ನ ಮಕ್ಕಳಿಂದ ಹಿಡಿದು ಹಿರಿಯವರೆಗೂ ನೋಡಿ ಕೊಂಡಾಡಿದ್ದಾರೆ.ಯಾಕಂದ್ರೆ ಮುರುಳಿಅವರ ಎಫರ್ಟ್ ಎದ್ದುಕಾಣುತ್ತಿತ್ತು. ಬಘೀರ ಪಾತ್ರಕ್ಕೆ ಜೀವ ಕೊಡಲು ತಮ್ಮ ಜೀವವನ್ನೇ ಮೂಡಿಪಾಗಿಟ್ಟಿದ್ದರು ಅಂದ್ರೆ ತಪ್ಪಿಲ್ಲ ನೋಡಿ. ಸಿನಿಮಾ ಪ್ರಮೋಷನ್ ಅಂತ ಬಂದಾಗಲೂ ಕಾಲಿಗೆ ಗಂಟೆ ಕಟ್ಟಿಕೊಂಡವರಂತೆ ಓಡಾಡಿ ಸಿನಿಮಾ ಪ್ರಚಾರ ಮಾಡಿದ್ದರು ರೋರಿಂಗ್ ಸ್ಟಾರ್ ಶ್ರೀಮುರುಳಿ. 

Add Zee News as a Preferred Source

ಇದೀಗ ತಮ್ಮ ಮುಂದಿನ ಸಿನಿಮಾ “ಪರಾಕ್”ಗೂ ಕೂಡ ಅಷ್ಟೇ ಪ್ರಯತ್ನ ಹಾಕಲು ಆಲ್ಮೋಸ್ಟ್ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ ನಟ ಮುರುಳಿ. ಇಲ್ಲಿಯವರೆಗೂ ನೀವು ನೋಡಿರಲು ಸಾಧ್ಯವೇ ಇಲ್ಲದ ಪಾತ್ರದಲ್ಲಿ ಶೈನ್ ಆಗಲು ಸಿದ್ಧತೆ ಬಲು ಜೋರು ನಡೆಯುತ್ತಿದೆ. ಯೆಸ್ “ಪರಾಕ್” ಸಿನಿಮಾದಲ್ಲಿ ನಮ್ಮನ್ನ ನೆಕ್ಸ್ಟ್ ಲೆವೆಲ್ಲಿಗೆ ಎಂಟರ್ಟೈನ್ ಮಾಡಲು  ಇಡೀ ಚಿತ್ರತಂಡ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರೋ ಬಗ್ಗೆ ಗಾಂಧಿನಗರದಲ್ಲಿ ಟಾಕ್ ಶುರು ಆಗಿದೆ. 

ಮುಖ್ಯವಾಗಿ ಪ್ಯಾನ್ ಇಂಡಿಯಾ ಅನ್ನೋ ಕಾನ್ಸೆಪ್ಟ್ ದೂರ ಇಟ್ಟು ನಮ್ಮ ನೆಲದ ಮಂದಿಗೆ ರಂಜಿಸಿ ನಂತರ ಪ್ಯಾನ್ ಇಂಡಿಯಾ ಬಗ್ಗೆ ಯೋಚನೆ ಮಾಡೋದಾಗಿ “ಪರಾಕ್” ಬಳಗ ಹೇಳಿಕೊಂಡಿದೆ. 

“ಪರಾಕ್” ಟೈಟಲ್ ಮಾಸ್ ಅನಿಸುವಂತಿದ್ದು ಕ್ಯೂರಿಯಾಸಿಟಿ ಖಂಡಿತ ಕ್ರಿಯೇಟ್ ಆಗಿದೆ. ರೋರಿಂಗ್ ಸ್ಟಾರ್ ಗೆ ಯಾರು ಹೀರೋಯಿನ್, ತಾರಾ ಬಳಗ ಹೇಗಿರುತ್ತೆ ಅನ್ನೋ ಮಾಹಿತಿ ಇನ್ನಷ್ಟೇ ರಿವಿಲ್ ಆಗಬೇಕು. ಆದ್ರೆ ಇದೇ ವರ್ಷ ಸಿನಿಮಾ ಮಾತ್ರ ರಿಲೀಸ್ ಆಗೋದು ಕನ್ಫರ್ಮ್. .!

ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್‌ಗೆ ‘ಪರಾಕ್’ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ. ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹಾಲೇಶ್‌ಗೆ ಮಂಜುನಾಥ್ ಬರವಣಿಗೆಯಲ್ಲಿ ಜೊತೆಯಾಗಿದ್ದಾರೆ. ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನಲ್ಲಿ ಈ ಸಿನಿಮಾವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Trending News