100 ಕ್ಕೂ ಹೆಚ್ಚು ಜನರ ಪ್ರಾಣ ತೆಗೆದುಕೊಂಡ ವಿಶ್ವದ ಮೊದಲ "ಹಾಡು"..! ದಯವಿಟ್ಟು ನೀವೂ ಕೇಳ್ಬೇಡಿ..

Gloomy Sunday : ಬೇಸರವಾದಾಗ, ಇಲ್ಲವೇ ಮನಸ್ಸಿಗೆ ನೋವಾದಾಗ ಸಂಗೀತ ಮತ್ತು ಹಾಡುಗಳನ್ನು ಕೇಳುವುದು ಸಾಮಾನ್ಯ. ಸಂಗೀತಕ್ಕೆ ನೋವನ್ನು ಮರೆಸುವ ಶಕ್ತಿ ಇದೆ.. ಆದ್ರೆ ಈ ಹಾಡು 100ಕ್ಕೂ ಹೆಚ್ಚು ಜನ ಜೀವವನ್ನೇ ತೆಗೆದುಕೊಂಡಿತು. ನಿಜ ಏಕೆಂದರೆ ಈ ಸಾಂಗ್‌ ಕೇಳಿದ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ..

Written by - Krishna N K | Last Updated : Apr 18, 2025, 07:53 PM IST
    • ಮನಸ್ಸಿಗೆ ನೋವಾದಾಗ ಸಂಗೀತ ಮತ್ತು ಹಾಡುಗಳನ್ನು ಕೇಳುವುದು ಸಾಮಾನ್ಯ.
    • ಈ ಹಾಡು 100ಕ್ಕೂ ಹೆಚ್ಚು ಜನ ಜೀವವನ್ನೇ ತೆಗೆದುಕೊಂಡಿತು.
    • ಈ ಸಾಂಗ್‌ ಕೇಳಿದ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ..
100 ಕ್ಕೂ ಹೆಚ್ಚು ಜನರ ಪ್ರಾಣ ತೆಗೆದುಕೊಂಡ ವಿಶ್ವದ ಮೊದಲ "ಹಾಡು"..! ದಯವಿಟ್ಟು ನೀವೂ ಕೇಳ್ಬೇಡಿ..

Gloomy Sunday song history : ನಾವು ದುಃಖಿತರಾದಾಗ ಅಥವಾ ಸಂತೋಷಪಟ್ಟಾಗ ಸಾಂಗ್‌ ಕೇಳ್ತಿವಿ. ಮದುವೆಯಾಗಿರಲಿ ಅಥವಾ ಯಾವುದೇ ಶುಭ ಸಂದರ್ಭವಾಗಿರಲಿ ಅಲ್ಲಿ ಸಂಗೀತಕ್ಕೆ ಮೊದಲ ಸ್ಥಾನ ಇದ್ದೇ ಇರುತ್ತದೆ. ಹಾಡುಗಳ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದಾರೆ.. ಕೆಲವು ಜನರು ವಿರಹ ಗೀತೆಗಳನ್ನು ಇಷ್ಟ ಪಟ್ಟರೆ ಇನ್ನೂ ಕೆಲವರು ಪಾಪ್ ಮತ್ತು ಸೂಫಿ ಸಂಗೀತ ಇಷ್ಟ ಪಡುತ್ತಾರೆ.. ಆದರೆ ಈ ಒಂದು ಹಾಡನ್ನು ಕೇಳಿದವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡ್ತಾರೆ.. ಏಕೆ ಗೊತ್ತೆ..? 

1933 ರಲ್ಲಿ, ರೆಗಿಜ್ ಸೆರೆಸ್ ಎಂಬ ಹಂಗೇರಿಯನ್ ಸಂಯೋಜಕ ಹಾಡನ್ನು ಬರೆದರು. ಅದನ್ನು 'ಗ್ಲೂಮಿ ಸಂಡೇ' ಎಂದು ಕರೆಯಲಾಗುತ್ತಿತ್ತು. ಈತನ ಗೆಳತಿ ಬಿಟ್ಟು ಹೋಗುತ್ತಿರುವಾಗ ಅವನು ಈ ಹಾಡನ್ನು ಬರೆದ. ಹಾಡಿನ ಸಾಹಿತ್ಯ ಎಷ್ಟು ದುಃಖಕರವಾಗಿತ್ತು ಎಂದರೆ ಅದನ್ನು ಕೇಳಿದವರು ತೀವ್ರ ದುಃಖದಲ್ಲಿ ಮುಳುಗುತ್ತಾರೆ. ಈ ಅಷ್ಟು ಖಿನ್ನತೆಗೆ ಒಳಪಡಿಸುತ್ತಿತ್ತು ಎಂದು ಹೇಳಲಾಗುತ್ತದೆ. ಇದನ್ನು ಕೇಳಿದ ನಂತರ ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಾರಂಭಿಸಿದರು. ಇದೇ ಕಾರಣಕ್ಕೆ ಇದನ್ನು ಹಂಗೇರಿಯನ್ ಆತ್ಮಹತ್ಯಾ ಗೀತೆ ಎಂದು ಕರೆಯಲಾಯಿತು. 

ಇದನ್ನೂ ಓದಿ:ಕೊನೆಗೂ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಸಮಂತಾ..! ಆ ವಿಶೇಷ ದಿನಾಂಕ ಸೇರಿದಂತೆ ಎಲ್ಲದಕ್ಕೂ ಸ್ಪಷ್ಟನೆ.. ಪೋಸ್ಟ್ ವೈರಲ್

ಈ ಹಾಡನ್ನು ರೆಕಾರ್ಡ್ ಮಾಡಿ 1935 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಹಾಡು ಜನರ ನಡುವೆ ಹೊರಬಂದ ತಕ್ಷಣ, ಸಾವಿನ ಪ್ರಕರಣಗಳು ಹೆಚ್ಚಾದವು. ವರದಿಗಳ ಪ್ರಕಾರ, ಆರಂಭದಲ್ಲಿ ಈ ಹಾಡಿನಿಂದ ಸುಮಾರು 17 ಜನರು ಪ್ರಾಣ ಕಳೆದುಕೊಂಡಿದ್ದರು. ನಂತರ ಈ ಸಂಖ್ಯೆ 100 ರ ಹತ್ತಿರ ತಲುಪಿತು. ಅದಕ್ಕಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ ಅಂದ್ರೆ, 1941 ರಲ್ಲಿ ಸರ್ಕಾರ ಈ ಹಾಡನ್ನು ನಿಷೇಧಿಸಿತು.

ಈ ಹಾಡಿನ ಮೇಲಿನ ನಿಷೇಧವನ್ನು ಸುಮಾರು 62 ವರ್ಷಗಳ ನಂತರ, ಅಂದರೆ 2003 ರಲ್ಲಿ ತೆಗೆದುಹಾಕಲಾಯಿತು. ಈ ಹಾಡನ್ನು ಕೇಳಿದ ನಂತರ ರೆಗ್ಸೊ ಸೆರೆಸ್‌ನ ಗೆಳತಿ ಕೂಡ ಆತ್ಮಹತ್ಯೆ ಮಾಡಿಕೊಂಡಳು. ಅತ್ಯಂತ ಆಘಾತಕಾರಿ ವಿಷಯವೆಂದರೆ ರೆಜ್ಸೊ ಸೆರೆಸ್ ಕೂಡ ಈ ಹಾಡಿನಲ್ಲಿ ಉಲ್ಲೇಖಿಸಿರುವಂತೆ ಅದೇ ದಿನವನ್ನು, ಅಂದರೆ ಭಾನುವಾರವನ್ನು ತಮ್ಮ ಮರಣಕ್ಕೆ ಆಯ್ಕೆ ಮಾಡಿಕೊಂಡರು. 

ಈ ಹಾಡನ್ನು 28 ಭಾಷೆಗಳಲ್ಲಿ 100 ಕ್ಕೂ ಹೆಚ್ಚು ಗಾಯಕರು ಹಾಡಿದ್ದಾರೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಬಿಲ್ಲಿ ಹಾಲಿಡೇ ಹಾಡಿದ ಇಂಗ್ಲಿಷ್ ಆವೃತ್ತಿ. ಇದನ್ನೂ ಸಹ ನಿಷೇಧಿಸಲಾಯಿತು. ಈ ಹಾಡಿನ ಕಥೆಯನ್ನು ಆಧರಿಸಿದ ಗ್ಲೂಮಿ ಸಂಡೇ ಚಲನಚಿತ್ರವು 1999 ರಲ್ಲಿ ಹಂಗೇರಿ ಮತ್ತು ಜರ್ಮನಿಯಲ್ಲಿ ಬಿಡುಗಡೆಯಾಯಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News