ಕಿಚ್ಚ ಸುದೀಪ್‌ ಸಿನಿಮಾದಲ್ಲಿ ಬುಟ್ಟ ಬೊಮ್ಮ! ಕನ್ನಡಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಬ್ಯೂಟಿ?

Pooja Hegde: ಬಿಲ್ಲ ರಂಗ ಬಾಷಾ ಸಿನಿಮಾದಲ್ಲಿ ಬಾಲಿವುಡ್‌ ನಟಿ ಅಭಿನಯಿಸಲಿದ್ದಾರೆ ಎಂಬ ವದಂತಿಯೊಂದು ಜೋರಾಗಿ ಸದ್ದು ಮಾಡುತ್ತಿದೆ.  

Written by - Chetana Devarmani | Last Updated : Apr 20, 2025, 12:56 PM IST
  • ಕಿಚ್ಚ ಸುದೀಪ್ ನಟನೆಯ ಬಿಲ್ಲ ರಂಗ ಬಾಷಾ
  • ಬಿಲ್ಲ ರಂಗ ಬಾಷಾ ಸಿನಿಮಾದಲ್ಲಿ ಬಾಲಿವುಡ್‌ ನಟಿ
  • ಬಿಲ್ಲಾ ರಂಗ ಬಾಷಾದಲ್ಲಿ ಸುದೀಪ್ ಜೊತೆ ಪೂಜಾ ಹೆಗ್ಡೆ?
ಕಿಚ್ಚ ಸುದೀಪ್‌ ಸಿನಿಮಾದಲ್ಲಿ ಬುಟ್ಟ ಬೊಮ್ಮ! ಕನ್ನಡಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಬ್ಯೂಟಿ?
pooja hegde

Pooja Hegde in Billa Ranga Basha: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಡ್ರೀಮ್‌ ಪ್ರಾಜೆಕ್ಟ್‌ ಬಿಲ್ಲಾ ರಂಗ ಬಾಷಾ ಚಿತ್ರೀಕರಣದ ಆರಂಭವನ್ನು ಅಧಿಕೃತವಾಗಿ ಇತ್ತೀಚೆಗೆ ಘೋಷಿಸಿದ್ದಾರೆ. ಅನುಪ್ ಭಂಡಾರಿ ನಿರ್ದೇಶನದ ಮತ್ತು ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಸಿನಿಮಾದಲ್ಲಿ ಸುದೀಪ್‌ಗೆ ನಾಯಕಿ ಯಾರೆಂಬ ಕುತೂಹಲ ಅನೇಕರನ್ನು ಕಾಡಿತ್ತು. ಇದೇ ವಿಚಾರವಾಗಿ ಹೊಸ ಚರ್ಚೆಯೊಂದು ಶುರುವಾಗಿದೆ.

Add Zee News as a Preferred Source

ಸುದೀಪ್ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂಬ ವದಂತಿಗಳು ಜೋರಾಗಿ ಸದ್ದು ಮಾಡುತ್ತಿವೆ. ಇದಲ್ಲದೇ ಇತ್ತೀಚೆಗೆ ಪೂಜಾ ಹೆಗ್ಡೆ ಸಹ, ನನ್ನ ಪೋಷಕರು ನನಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಒತ್ತಾಯಿಸುತ್ತಿದ್ದಾರೆ ಎಂದಿದ್ದರು. 

ಅದೊಂದು ವೇಳೆ ಸುದೀಪ್ ಜೊತೆ ಪೂಜಾ ಹೆಗ್ಡೆ ಬಿಲ್ಲಾ ರಂಗ ಬಾಷಾ ಸಿನಿಮಾದಲ್ಲಿ ನಟಿಸಿದರೆ ಇದು ಪೂಜಾ ಹೆಗ್ಡೆಯ ಮೊದಲ ಕನ್ನಡ ಸಿನಿಮಾ ಆಗಲಿದೆ. ಈ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಂತಾಗುತ್ತದೆ. 

ಇದನ್ನೂ ಓದಿ : ಸಿನಿಮಾ ಇಂಡಸ್ಟ್ರಿಗೆ ಬಿಗ್‌ ಶಾಕ್‌..! ನಾಲ್ಕು ತಿಂಗಳಿನಿಂದ ನಾಪತ್ತೆಯಾಗಿದ್ದ 24 ವರ್ಷದ ನಟ ಶವವಾಗಿ ಪತ್ತೆ

ನಟಿ ಪೂಜಾ ಹೆಗ್ಡೆ ಅವರು ಸೂರ್ಯ ಜೊತೆ ನಟಿಸಿದ ಮುಂಬರುವ ಚಿತ್ರ ರೆಟ್ರೋ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದಾರೆ ಮತ್ತು ಮೇ 1, 2025 ರಂದು ಬಹು ಭಾಷೆಗಳಲ್ಲಿ ರೆಟ್ರೋ ಬಿಡುಗಡೆಯಾಗಲಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಪೂಜಾ ಹೆಗ್ಡೆ ದೀರ್ಘ ವಿರಾಮದ ನಂತರ ಹೊಸ ತೆಲುಗು ಯೋಜನೆಗೆ ಸಹಿ ಹಾಕಿರುವುದಾಗಿ ಹೇಳಿದ್ದರು. ಇದು ಅವರ ಟಾಲಿವುಡ್ ಅಭಿಮಾನಿಗಳನ್ನು ತುಂಬಾ ಸಂತೋಷಪಡಿಸಿತ್ತು.

ಬಿಲ್ಲಾ ರಂಗ ಬಾಷಾ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಪೂಜಾ ಹೆಗ್ಡೆ ನಟಿಸಬಹುದು ಎಂಬ ಬಲವಾದ ವದಂತಿಗಳು ಹಬ್ಬಿದ್ದು ಸಿನಿಪ್ರಿಯರಲ್ಲಿ ಸಖತ್‌ ಕ್ಯುರಿಯಾಸಿಟಿ ಹುಟ್ಟು ಹಾಕಿದೆ. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುತ್ತಿದೆ.  

ಕುಡ್ಲದ ಚೆಲುವೆ ಅಭಿನಯ ಚಕ್ರವರ್ತಿ ಇಬ್ಬರನ್ನೂ ಒಟ್ಟಿಗೆ ಸ್ಕ್ರೀನ್ ಮೇಲೆ ನೋಡುವ ಕನಸನ್ನು ಅಭಿಮಾನಿಗಳು ಕಾಣಲು ಶುರು ಮಾಡಿದ್ದಾರೆ. ಆದರೆ ಈ ಸುದ್ದಿ ಇನ್ನೂ ಧೃಡಪಟ್ಟಿಲ್ಲ. ಇದೊಂದು ವದಂತಿ ಆಗಿದೆ. 

ಇದನ್ನೂ ಓದಿ : ʻಗಂಡಸರು ಮುಟ್ಟಾದ್ರೆ ನ್ಯೂಕ್ಲಿಯರ್ ವಾರ್ ಆಗುತ್ತೆ..ʼ : ಜಾನ್ವಿ ಕಪೂರ್ ಸೆನ್ಸೇಷನಲ್‌ ಹೇಳಿಕೆ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News