ಕನ್ನಡದ ಈ ಸ್ಟಾರ್ ನಟಿ 50ನೇ ವಯಸ್ಸಿನಲ್ಲಿ ಮದುವೆ ಆಗಲಿದ್ದಾರಾ!?

Nagma marriage Rumors: ಸ್ಯಾಂಡಲ್‌ವುಡ್‌ನಲ್ಲಿ ನಟಿಸಿರುವ ಈ ಸ್ಟಾರ್‌ ನಟಿ 90 ರ ದಶಕದಲ್ಲಿ ಸಾಕಷ್ಟು ಖ್ಯಾತಿ ಪಡೆದವರು. 

Written by - Chetana Devarmani | Last Updated : Nov 15, 2025, 03:26 PM IST
  • ಸ್ಯಾಂಡಲ್‌ವುಡ್‌ನಲ್ಲಿ ನಟಿಸಿರುವ ಈ ಸ್ಟಾರ್‌ ನಟಿ
  • 90 ರ ದಶಕದಲ್ಲಿ ಸಾಕಷ್ಟು ಖ್ಯಾತಿ ಪಡೆದ ನಟಿ
ಕನ್ನಡದ ಈ ಸ್ಟಾರ್ ನಟಿ 50ನೇ ವಯಸ್ಸಿನಲ್ಲಿ ಮದುವೆ ಆಗಲಿದ್ದಾರಾ!?

Nagma marriage Rumors: ಕನ್ನಡದ ಈ ಸ್ಟಾರ್‌ ನಟಿ ಮೂರು ವಿವಾಹಿತ ನಟರೊಂದಿಗೆ ಡೇಟಿಂಗ್‌ ಮಾಡಿದ್ದಾರೆಂಬ ವದಂತಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಲಿವುಡ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್‌ವರೆಗೆ ಹಲವು ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. 

Add Zee News as a Preferred Source

ನಟಿ ನಗ್ಮಾ ಸೌತ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ನಗ್ಮಾ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದವರು.ಬಾಲಿವುಡ್‌ ಸಿನಿಮಾಗಳ ನಂತರ ದಕ್ಷಿಣಕ್ಕೆ ಬಂದು ಸೌತ್‌ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದರು. ನಂತರ ಭೋಜ್‌ಪುರಿ ಚಿತ್ರಗಳಲ್ಲಿ ಸಹ ನಟಿಸಿದರು.  

ನಗ್ಮಾ ಬಾಲಿವುಡ್, ಸೌತ್‌ ಸಿನಿರಂಗ ಮತ್ತು ಭೋಜ್‌ಪುರಿ ಸೇರಿದಂತೆ 81 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ನಟನೆಯಿಂದ ಪ್ರೇಕ್ಷಕರ ಹೃದಯವನ್ನು ಗೆದ್ದರು. ನಗ್ಮಾ ಸಿನಿಮಾಗಳಿಗೆ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದಲ್ಲಿ ಸದಾ ಸುದ್ದಿಯಲ್ಲಿದ್ದರು. 

ನಗ್ಮಾ 1974 ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಈಗ ಅವರಿಗೆ 50 ವರ್ಷ ವಯಸ್ಸು. ನಗ್ಮಾ ಈಗಲೂ ಮದುವೆಯಾಗಿಲ್ಲ. ರಾಜಕಾರಣಿ ಸಹ ಆಗಿರುವ ನಟಿ ನಗ್ಮಾ ಒಂಟಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಮತ್ತೆ ಅವರ ಮದುವೆ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. 

ನಟಿ ನಗ್ಮಾ ಯಾವಾಗ ಮದುವೆ ಆಗಲಿದ್ದಾರೆ ಮತ್ತು ಯಾರನ್ನು ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಯಾವ ರೀತಿಯೂ ಸ್ಪಷ್ಟನೆಯೂ ಇಲ್ಲ. ಇದು ಕೇವಲ ವದಂತಿಯಾಗಿದ್ದು, ಈ ಬಗ್ಗೆ ಹಲವು ಸುದ್ದಿಗಳು ಹರಡುತ್ತಿವೆ.

ಇದನ್ನೂ ಓದಿ: ಚಿತ್ರಕ್ಕಾಗಿ ಸರ್ವಸ್ವವನ್ನೇ ಪಣಕ್ಕಿಟ್ಟ ಖ್ಯಾತ ನಟಿ! ಮನಸ್ಸಿಲ್ಲದಿದ್ರೂ ಮಾಡಿದ ಆತ್ಮೀಯ ದೃಶ್ಯಕ್ಕೆ ಫಿದಾ ಆಗಿತ್ತು ಬಾಲಿವುಡ್‌..  

ಇದನ್ನೂ ಓದಿ: ಯಾವ ಸ್ಟಾರ್‌ಗೂ ಕಮ್ಮಿಯಿಲ್ಲ.. ಹಳ್ಳಿಹೈದ ಗಿಲ್ಲಿ ನಟನ ಬಳಿ ಇರುವ ಕಾರು ಯಾವುದು ಗೊತ್ತೇ? ಬೆಲೆ ಕೇಳಿದ್ರಂತೂ ಶಾಕ್‌ ಆಗುತ್ತೆ 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News