ʻಅಂದು ಅವರು ಕರೆದಾಗ ಒಪ್ಪಿದ್ರೆ.. ಇವತ್ತು ಟಾಪ್ ನಟಿ ಆಗಿರ್ತಿದ್ದೆʼ: ಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ

Sandalwood actress: ನಟಿಯರು ಹಲವು ಬಾರಿ ಸಿನಿಮಾ ರಂಗದಲ್ಲಿ ಕೆಟ್ಟ ಅನುಭವಗಳಿಗೆ ಗುರಿಯಾಗುತ್ತಾರೆ. ಆದರೆ ಕೆಲವೇ ಕೆಲವರು ಅದನ್ನು ಧೈರ್ಯದಿಂದ ಹೇಳಿಕೊಳ್ಳುತ್ತಾರೆ.

Written by - Chetana Devarmani | Last Updated : Apr 17, 2025, 05:55 PM IST
  • ಸಿನಿರಂಗದಲ್ಲಿ ಇತ್ತೀಚೆಗೆ ಅನೇಕ ಕಾಸ್ಟಿಂಗ್ ಕೌಚ್ ಘಟನೆಗಳು ಹೊರಬರುತ್ತಿವೆ.
  • ತಮ್ಮೊಂದಿಗೆ ನಡೆದ ಕಹಿ ಅನುಭವಗಳ ಬಗ್ಗೆ ನಟಿಯರು ಬೋಲ್ಡ್‌ ಆಗಿ ಹೇಳಿಕೊಳ್ಳುತ್ತಿದ್ದಾರೆ.
ʻಅಂದು ಅವರು ಕರೆದಾಗ ಒಪ್ಪಿದ್ರೆ.. ಇವತ್ತು ಟಾಪ್ ನಟಿ ಆಗಿರ್ತಿದ್ದೆʼ: ಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ

actress ashita: ಸಿನಿರಂಗದಲ್ಲಿ ಇತ್ತೀಚೆಗೆ ಅನೇಕ ಕಾಸ್ಟಿಂಗ್ ಕೌಚ್ ಘಟನೆಗಳು ಹೊರಬರುತ್ತಿವೆ. ತಮ್ಮೊಂದಿಗೆ ನಡೆದ ಕಹಿ ಅನುಭವಗಳ ಬಗ್ಗೆ ನಟಿಯರು ಬೋಲ್ಡ್‌ ಆಗಿ ಹೇಳಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಕರಿಯರ್‌ ಕಂಡುಕೊಳ್ಳಲು ಬಂದ ಅನೇಕ ನಟಿಯರಿಗೆ ಈ ಕಾಸ್ಟಿಂಗ್‌ ಕೌಚ್‌ ಭೂತ ಕಾಡಿದೆ. ಕನ್ನಡದಲ್ಲೂ ಅನೇಕ ನಟಿಯರಿಗೆ ಈ ಕೆಟ್ಟ ಅನುಭವ ಆಗಿದೆ. ನಟಿ ಆಶಿತಾ ಸಿನಿಮಾ ಬದುಕಿನ ಕರಾಳ ಮುಖವನ್ನು ಪರಿಚಯ ಮಾಡಿಸಿದ್ದಾರೆ.

ನಟಿ ಆಶಿತಾ ಕೂಡ ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದು, "ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರ ಇಲ್ಲ. ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೆಯೇ ನನಗೆ ಕೆಟ್ಟ ಅನುಭವಗಳು ಆಗಿದ್ದು. ಸಿನಿಮಾಗಳಲ್ಲಿ ನಟಿಸುವಾಗ ಆರಂಭದಲ್ಲಿ ಅಂಥ ಕೆಟ್ಟ ಸಮಸ್ಯೆ ಆಗಿಲ್ಲ. ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಬಳಿಕ ತನಗೆ ಕೆಟ್ಟ ಅನುಭವವಾಯಿತು" ಎಂದು ಹೇಳಿದ್ದರು. 

"ಅದಕ್ಕೆಲ್ಲ ನಾನು ಆಸ್ಪದ ಕೊಡಲಿಲ್ಲ. ನನಗೆ ಅಂತ ಅವಕಾಶ ಬೇಕಾಗಿರಲಿಲ್ಲ. ಆ ನಿರ್ದೇಶಕರ ಹೆಸರು ಹೇಳುವುದು ಬೇಡ. ನನ್ನೊಂದಿಗೆ ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದ ನಾನು ಬೇಸತ್ತಿದ್ದೆ" ಎಂದಿದ್ದರು.

ಅವರ ಜೊತೆ ನಗು ನಗುತ್ತಾ ಮಾತನಾಡಬೇಕು. ತೀರಾ ಸಲುಗೆ ಇಂದ ಇರಬೇಕಿತ್ತು. ಆದರೆ ನಾನು ಆ ರೀತಿ ಯಾರ ಜೊತೆಯೂ ಇರುತ್ತಿರಲಿಲ್ಲ. ಅದರ ಅವಶ್ಯಕತೆ ಕೂಡ ನನಗೆ ಇರಲಿಲ್ಲ.ನನಗೆ ನಟಿಸುವ ಪ್ರತಿಭೆ ಇತ್ತು. ಅದನ್ನೇ ನಂಬಿದ್ದರ. ನಾನು ಆ ರೀತಿ ಇರುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಸೆಟ್‌ನಲ್ಲಿ ಸಾಕಷ್ಟು ಕಷ್ಟ ಎದುರಿಸಿದ್ದೇನೆ ಎಂದಿದ್ದರು.

ಇದನ್ನೂ ಓದಿ : ಡಿವೋರ್ಸ್‌ ಹಾದಿಯಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಸ್ಟಾರ್‌ ನಟಿ..!?

ಬಹುಶಃ ನಾನು ಅವರ ಆಫರ್‌ಗಳಿಗೆ ಒಪ್ಪಿದ್ದರೆ ಇಂದು ಟಾಪ್ ನಟಿಯಾಗಿ ಇರುತ್ತಿದ್ದೆ. ಆದರೆ ನಾನು ಆ ಥರದ ಹೆಣ್ಣುಮಗಳಲ್ಲ. ಚಿತ್ರರಂಗದಲ್ಲಿ ಎಲ್ಲರೂ ಹೀಗಲ್ಲ. ಕೆಲವರು ಮಾತ್ರ ಈ ರೀತಿ ಇಂಡಸ್ಟ್ರಿಯಲ್ಲಿ ಇದ್ದಾರೆ ಎಂದಿದ್ದಾರೆ ನಟಿ ಆಶಿತಾ. 

ಚಿತ್ರರಂಗದಿಂದ ದೂರು ಉಳಿದಿರುವ ಆಶಿತಾ ಯೂ ಟ್ಯೂಬ್​ ಚಾನೆಲ್​ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿದ್ದರು. ಸುಮಾರು ವರ್ಷಗಳ ಹಿಂದೆ ನಟಿ ಆಶಿತಾ ನೀಡಿದ ಈ ಹೇಳಿಕೆ ಸಿನಿ ರಂಗದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಆದರೆ ಆಶಿತಾ ಧೈರ್ಯವನ್ನು ಅವರ ಅಭಿಮಾನಿಗಳು ಮೆಚ್ಚಿದ್ದರು. 

ನಟಿ ಆಶಿತಾ 1984, ಅಕ್ಟೋಬರ್ 3 ರಂದು ಜೆನ್ನಿಫರ್ ಮತ್ತು ಲೋವಿಸ್ ದಂಪತಿಗಳ ಪುತ್ರಿಯಾಗಿ ಮುಂಬೈನಲ್ಲಿ ಜನಿಸಿದರು. ಅವರು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. 15 ವರ್ಷ ಇದ್ದಾಗಲೇ ಡ್ಯಾನ್ಸ್ ಮತ್ತು ಮಾಡೆಲಿಂಗ್ ನಲ್ಲಿ ಸಕ್ರಿಯರಾದರು. ಮೌಂಟ್ ಕಾರ್ಮೆಲ್ ಕಾಲೇಜಿನಿಂದ MBA ಪದವಿ ಪಡೆದಿರುವ ನಟಿ 

ಆಶಿತಾ ಹದಿನಾರು ವರ್ಷದವರಿದ್ದಾಗ ಮೊದಲ ಬ್ಯೂಟಿ ಕಂಟೆಸ್ಟ್‌ ಗೆದ್ದರು. ಆ ನಂತರ ಹಲವು ಬ್ರಾಂಡಗಳ ಮಾಡೆಲ್ ಆಗಿ ಕಾಣಿಸಿಕೊಂಡರು. ಬಾ ಬಾ ಬಾರೋ ರಸಿಕ, ತವರಿನ ಸಿರಿ, ಆಕಾಶ್ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿ ಆಶಿತಾ ನಟಿಸಿದ್ದಾರೆ.

ಇದನ್ನೂ ಓದಿ : ನಟನೆಯಿಂದ ದೂರ ಸರಿದರೂ 48ನೇ ವಯಸ್ಸಿನಲ್ಲಿ ನಟಿ ಮೀನಾ ಬಳಿ ಇಷ್ಟೊಂದು ಆಸ್ತಿ ಇದೆಯಾ?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News