Powerstar Pavan Kalyan: ತೆಲುಗು ಚಿತ್ರರಂಗದ ಪವರ್‌ಸ್ಟಾರ್ ಪವನ್ ಕಲ್ಯಾಣ್ ಪ್ರಸ್ತುತ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿಯೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಪಾಲಿಟಿಕ್ಸ್ ಪ್ರವೇಶಿಸಿದಾಗ ರಾಜಕೀಯ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದಾಗಿ ಭರವಸೆ ನೀಡಿದ್ದ ಪವರ್‌ಸ್ಟಾರ್ ಗೆ ಸದ್ಯ ಅದು ಸಾಧ್ಯವಾಗುತ್ತಿಲ್ಲವೇನೋ ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದು, ಅವರ ಅಭಿಮಾನಿಗಳಿಗೊಂದು ಬೇಸರದ ಸುದ್ದಿಯಿದೆ.
ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಭಾರೀ ನಿರೀಕ್ಷಿತ ಚಿತ್ರ "ಹರಿ ಹರ ವೀರ ಮಲ್ಲು" ಸೆಟ್ಟೇರಿ ಬಹಳ ತಿಂಗಳುಗಳೇ ಕಳೆದಿವೆ. ಈ ತಿಂಗಳಾಂತ್ಯಕ್ಕೆ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇತ್ತು. ರಾಜ್ಯದ ಡಿಸಿಎಂ ಆಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿರುವ ಪವನ್ ಕಲ್ಯಾಣ್ ಹೀರೋ ಆಗಿ ನಟಿಸಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದರು. ಇದೀಗ ಸಿನಿಮಾ ನಿಗದಿಯಂತೆ ಮಾರ್ಚ್ 28ರಂದು ತೆರೆಕಾಣುತ್ತಿಲ್ಲ. ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದೂಡಲಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿದ್ದು ಪವರ್‌ಸ್ಟಾರ್ ಅಭಿಮಾನಿಗಳಲ್ಲಿ ಬೇಸರ ಮೂಡಿದೆ.
ಇದನ್ನೂ ಓದಿ- Sandalwood: ಕನ್ನಡದ ಈ ಸ್ಟಾರ್ ನಟಿ 50ನೇ ವಯಸ್ಸಿನಲ್ಲಿ ಮದುವೆ ಆಗಲಿದ್ದಾರಾ, ಹುಡುಗ ಇವರೇನಾ!?
ಪ್ರಸ್ತುತ, ರಾಜಕೀಯದಲ್ಲಿ ನಿರತರಾಗಿರುವ ಪವನ್ ಕಲ್ಯಾಣ್ ಅಂದುಕೊಂಡಂತೆ ನಿಗದಿತ ಸಮಯದೊಳಗೆ ಸಿನಿಮಾ ಶೂಟ್ ಮುಗಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ "ಹರಿ ಹರ ವೀರ ಮಲ್ಲು" ಸಿನಿಮಾ ರಿಲೀಸ್ ಡೇಟ್ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ- ಪುನೀತ್ ರಾಜ್‌ಕುಮಾರ್-ಅಣ್ಣಾವ್ರು ಹೀಗಿದ್ರಾ? ಯಾರಿಗೂ ಗೊತ್ತಿಲ್ಲದ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಸ್ಯಾಂಡಲ್‌ವುಡ್ ಹಿರಿಯ ನಟಿ!
ವರ್ಷಗಳಿಂದ ಪವನ್ ಕಲ್ಯಾಣ್ ಅವರನ್ನು ಮತ್ತೆ ಹೀರೋ ಆಗಿ ತೆರೆಯ ಮೇಲೆ ಕಾಣಲು ಕಾತುರರಾಗಿದ್ದೇವೆ. ಸದ್ಯ 'ಹರಿ ಹರ ವೀರ ಮಲ್ಲು' ಸಿನಿಮಾ ಬಿಡುಗಡೆ ವಿಳಂಬವಾಗುತ್ತಿರುವ ಸುದ್ದಿಯಿಂದ ಬೇಸರವಾಗಿದೆ ಎಂದು ನೆಚ್ಚಿನ ನಟನ ಬಗ್ಗೆ ಅಭಿಮಾನಿಗಳು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ವಾಸ್ತವವಾಗಿ, ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಕೊನೆಯದಾಗಿ ರಿಲೀಸ್ ಆದ ಚಿತ್ರ 'ಭೀಮ್ಲಾ ನಾಯಕ್'. 2022ರಲ್ಲಿ ತೆರೆಕಂಡ ಈ ಸಿನಿಮಾ ಅಷ್ಟು ಹಿಟ್ ಆಗಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









