ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ʼದಿ ರಾಜಾಸಾಬ್ʼ ಸಿನಿಮಾ ರಿಲೀಸ್ ಡೇಟ್‌ ಅನೌನ್ಸ್‌... ಯಾವಾಗ?

ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಟಿ ಜಿ ವಿಶ್ವ ಪ್ರಸಾದ್ ಈ ಚಿತ್ರದ ನಿರ್ಮಾಪಕರು. 

Written by - Bhavishya Shetty | Last Updated : Jun 16, 2025, 01:50 PM IST
    • ಟಾಲಿವುಡ್‌ ನಟ, ರೆಬೆಲ್‌ ಸ್ಟಾರ್‌ ಪ್ರಭಾಸ್‌ ಅಭಿನಯದ ದಿ ರಾಜಾಸಾಬ್
    • ಪೀಪಲ್‌ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ
    • "ದಿ ರಾಜಾ ಸಾಬ್" ಟೀಸರ್ ನೋಡಿದ ಅಭಿಮಾನಿಗಳು ಸದ್ಯ ಪುಳಕಿತರಾಗಿದ್ದಾರೆ
ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ʼದಿ ರಾಜಾಸಾಬ್ʼ ಸಿನಿಮಾ ರಿಲೀಸ್ ಡೇಟ್‌ ಅನೌನ್ಸ್‌... ಯಾವಾಗ?

ಟಾಲಿವುಡ್‌ ನಟ, ರೆಬೆಲ್‌ ಸ್ಟಾರ್‌ ಪ್ರಭಾಸ್‌ ಅಭಿನಯದ, ಮಾರುತಿ ನಿರ್ದೇಶನದ "ದಿ ರಾಜಾಸಾಬ್‌" ಸಿನಿಮಾ, ಈಗಾಗಲೇ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿದೆ. ಮೇಕಿಂಗ್‌ ಮೂಲಕ ಗಮನ ಸೆಳೆದ ಈ ಸಿನಿಮಾದ ಮೊದಲ ಟೀಸರ್‌ ಇದೀಗ ಬಿಡುಗಡೆ ಆಗಿದೆ. ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಟಿ ಜಿ ವಿಶ್ವ ಪ್ರಸಾದ್ ಈ ಚಿತ್ರದ ನಿರ್ಮಾಪಕರು. 

Add Zee News as a Preferred Source

ಇದನ್ನೂ ಓದಿ:  ಒಂದು ಕಾಲದಲ್ಲಿ ಸೈಡ್‌ ಡ್ಯಾನ್ಸರ್‌.. ಇಂದು ಇಂಡಸ್ಟ್ರಿಯ ಟಾಪ್‌ ನಟಿಯರಿಗೆ ಕಠಿಣ ಸ್ಪರ್ಧೆ ಕೊಡುತ್ತಿರುವ ಸ್ಟಾರ್‌ ಹೀರೋಯಿನ್‌

"ದಿ ರಾಜಾ ಸಾಬ್" ಟೀಸರ್ ನೋಡಿದ ಅಭಿಮಾನಿಗಳು ಸದ್ಯ ಪುಳಕಿತರಾಗಿದ್ದಾರೆ. ಇದರಲ್ಲಿ ಪ್ರಭಾಸ್ ಅವರ ವಿಂಟೇಜ್ ಲುಕ್ ಖಡಕ್‌ ಆಗಿದೆ. ಮೂವರು ನಾಯಕಿಯರು, ಪ್ರಭಾಸ್ ಅವರ ಎಂಟ್ರಿ, ಕಾಮಿಡಿ ಡೈಲಾಗ್‌ಗಳು, ರೊಮ್ಯಾಂಟಿಕ್ ಟ್ರ್ಯಾಕ್ ಅದ್ಭುತವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್‌ ನಟ ಸಂಜಯ್ ದತ್ ಅವರ ವಿಚಿತ್ರ ಗೆಟಪ್‌, ರಾಜಮನೆತನದ ಸುತ್ತ ನಡೆಯುವ ಕಥೆ ಮತ್ತು ಹಾರರ್ ಅಂಶಗಳು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

ಟೀಸರ್‌ನಲ್ಲಿ, ಪ್ರಭಾಸ್ ಎರಡು ಲುಕ್‌ನಲ್ಲಿ ಕಂಡಿದ್ದಾರೆ. ಒಂದು ಪಕ್ಕಾ ಲವರ್‌ಬಾಯ್‌ ಲುಕ್‌ ಮತ್ತು ಮಾಸ್‌ ಆಕ್ಷನ್‌ ಅವತಾರದಲ್ಲಿ ಎದುರಾದರೆ, ಮತ್ತೊಂದರಲ್ಲಿ ಗಾಢವಾದ, ಅತೀಂದ್ರಿಯ ಶಕ್ತಿಯನ್ನು ಆವಾಹಿಸಿಕೊಂಡಂತೆ ಕಂಡಿದ್ದಾರೆ. ಟೀಸರ್‌ನಲ್ಲಿ ಮಸ್ತ್ ನೃತ್ಯ, ಪಂಚ್‌ ಡೈಲಾಗ್‌ಗಳಿಂದಲೂ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಪ್ರಭಾಸ್‌ ಜತೆಗೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನ್ ಮತ್ತು ರಿದ್ಧಿ ಕುಮಾರ್ ಈ ಚಿತ್ರದ ತ್ರಿವಳಿ ನಾಯಕಿಯರು. ಪ್ರತಿ ಪಾತ್ರವೂ ಶಾಪಗ್ರಸ್ತ ಮಹಲಿನ ಕಥೆಗೆ ನಿಗೂಢತೆಯ ಪದರಗಳನ್ನು ಸೇರಿಸುತ್ತಾ ಹೋಗುತ್ತಾರೆ.

“ದಿ ರಾಜಾಸಾಬ್‌" ಚಿತ್ರದ ಮೂಲಕ ನಾವು ಏನನ್ನಾದರೂ ದೊಡ್ಡದನ್ನೇ ನಿರ್ಮಿಸಲು ಬಯಸಿದ್ದೇವೆ. ಈವರೆಗೂ ನೋಡದ ಸೆಟ್‌ಗಳು ಈ ಸಿನಿಮಾದಲ್ಲಿರಲಿದೆ. ನಮ್ಮ ಈ ಸಿನಿಮಾ ಇದೇ ವರ್ಷದ ಡಿಸೆಂಬರ್ 5ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್. 

ಇದನ್ನೂ ಓದಿ:  ಬಿಳಿ ಕೂದಲು ಕಪ್ಪಾಗಬೇಕೆ... ಮೆಹಂದಿಯಲ್ಲಿ ಇಂದೊಂದು ರಸ ಹಾಕಿ ಹಚ್ಚಿ

"ರಾಜಾಸಾಬ್ ಒಂದು ಪ್ರಕಾರದ ಪ್ರಯಾಣ; ಇದು ಭಯಾನಕ ಮತ್ತು ಫ್ಯಾಂಟಸಿ, ನೈಜ ಮತ್ತು ಅತಿವಾಸ್ತವಿಕತೆಯ ನಡುವೆ ಹರಿಯುತ್ತದೆ. ಥಮನ್ ಅವರ ರೋಮಾಂಚಕಾರಿ ಸಂಗೀತ ಇಡೀ ಸಿನಿಮಾದ ಹೈಲೈಟ್‌ ಎಂದಿದ್ದಾರೆ ನಿರ್ದೇಶಕ ಮಾರುತಿ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News