ಪ್ರಭಾಸ್ ಮದುವೆ ಆಗದಿರಲು ಈ ನಟಿಯೇ ಕಾರಣನಾ! ಮದುವೆಯಾಗಿ ಹಾಯಾಗಿರುವ ಈಕೆಯನ್ನೇ ಮನಸಾರೆ ಪ್ರೀತಿಸಿದ್ರಾ?

Prabhas Love Story : ನಟ ಪ್ರಭಾಸ್ 45 ವರ್ಷವಾದರೂ ಮದುವೆ ಆಗದಿರಲು ಈ ನಟಿಯೇ ಕಾರಣ ಎಂಬ ವರದಿಯಂದು ಹರಿದಾಡುತ್ತಿದೆ. 

Written by - Chetana Devarmani | Last Updated : Nov 6, 2025, 11:05 PM IST
  • ನಟ ಪ್ರಭಾಸ್ ತೆಲುಗು ಚಿತ್ರರಂಗದ ಸ್ಟಾರ್‌ ನಟ
  • ಪ್ರಭಾಸ್ 45 ವರ್ಷವಾದರೂ ಮದುವೆ ಆಗದಿರಲು ಕಾರಣನಾ?
  • ಮದುವೆಯಾದ ಈ ನಟಿಯನ್ನು ಮನಸಾರೆ ಪ್ರೀತಿಸಿದ್ದರಾ?
ಪ್ರಭಾಸ್ ಮದುವೆ ಆಗದಿರಲು ಈ ನಟಿಯೇ ಕಾರಣನಾ! ಮದುವೆಯಾಗಿ ಹಾಯಾಗಿರುವ ಈಕೆಯನ್ನೇ ಮನಸಾರೆ ಪ್ರೀತಿಸಿದ್ರಾ?

Prabhas Love Story : ನಟ ಪ್ರಭಾಸ್ ತೆಲುಗು ಚಿತ್ರರಂಗದ ಸ್ಟಾರ್‌ ನಟ. ಸತತ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಜಗತ್ತಿನ ಗಮನವನ್ನು ಟಾಲಿವುಡ್‌ನತ್ತ ತಿರುಗಿಸಿದ ಕೀರ್ತಿ ಪ್ರಭಾಸ್‌ಗೆ ಸಲ್ಲುತ್ತದೆ. ಪ್ರಭಾಸ್ ಎಂದೇ ಎಲ್ಲರಿಗೂ ಚಿರಪರಿಚಿತರಾಗಿರುವ ಉಪ್ಪಲಪತಿ ಪ್ರಭಾಸ್ ರಾಜು, ಪ್ರಸ್ತುತ ತೆಲುಗು ಚಲನಚಿತ್ರೋದ್ಯಮದ ದೊಡ್ಡ ಸ್ಟಾರ‌ ನಟರಲ್ಲಿ ಒಬ್ಬರು.

Add Zee News as a Preferred Source

ಕಲ್ಕಿ 2898 AD ಚಿತ್ರದ ಮೂಲಕ ಮತ್ತೊಂದು ಬ್ಲಾಕ್‌ಬಸ್ಟರ್ ಹಿಟ್ ಗಳಿಸಿದ ಪ್ರಭಾಸ್, ಈಗ ಸರಣಿ ಚಿತ್ರಗಳಲ್ಲಿ ನಟಿಸುವುದರಲ್ಲಿ ನಿರತರಾಗಿದ್ದಾರೆ.  ಪ್ರಭಾಸ್ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಏಕೆಂದರೆ ಪ್ರಭಾಸ್ ಹಲವು ಕೋಟಿ ಮೌಲ್ಯದ ಆಸ್ತಿಗಳ ಒಡೆಯ. ಪ್ರಭಾಸ್ 45 ವರ್ಷವಾದರೂ ಮದುವೆ ಆಗಲ್ಲ. ಇದಕ್ಕೆ ಕಾರಣ ಏನು ಎಂಬುದು ಅರ ಅಭಿಮಾನಿಳನ್ನು ಕಾಡುತ್ತಿದೆ. ಕೆಲವು ವರದಿಗಳ ಪ್ರಕಾರ, ಪ್ರಭಾಸ್‌ ಮದುವೆ ಆಗದಿರಲು ಕಾರಣ ಈ ನಟಿ ಎಂದು ಹೇಳಲಾಗಿದೆ. 

ಇದನ್ನೂ ಓದಿ: ನಯನತಾರಾ - ತ್ರಿಶಾ ನಡುವೆ ಪೈಪೋಟಿ ಏಕಿದೆ ಗೊತ್ತೆ? ಸ್ನೇಹಿತರಂತೆ ಇದ್ದ ಸುಂದರಿಯರು ನಡುವೆ ಅದು ಆಗ್ಬಾರದಿತ್ತು

ಪ್ರಭಾಸ್ ಕೋಟ್ಯಂತರ ರೂಪಾಯಿಗಳ ಆಸ್ತಿಗೆ ಒಡೆಯ. ವರದಿಗಳ ಪ್ರಕಾರ, ಹೈದರಾಬಾದ್‌ನ ಅತ್ಯಂತ ದುಬಾರಿ ಪ್ರದೇಶವಾದ ಜುಬಿಲಿ ಹಿಲ್ಸ್‌ನಲ್ಲಿ ಕೋಟ್ಯಂತರ ಮೌಲ್ಯದ ತೋಟದ ಮನೆ ಇದೆ. ಈ ಫಾರ್ಮ್‌ಹೌಸ್‌ನಲ್ಲಿ 60 ಕೋಟಿ ಮೌಲ್ಯದ ಬಂಗಲೆ ಕೂಡ ಇದೆ. ಅಭಿಮಾನಿಗಳು ಪ್ರಭಾಸ್ ಅವರನ್ನು ಭೇಟಿಯಾಗುವುದು ಇಲ್ಲೇ. ಪ್ರಭಾಸ್ ಈ ಐಷಾರಾಮಿ ಬಂಗಲೆಯನ್ನು 2014 ರಲ್ಲಿ ಖರೀದಿಸಿದ್ದಾರೆಂದು ವರದಿಯಾಗಿದೆ. ಇದು ಈಜುಕೊಳ ಮತ್ತು ಜಿಮ್ ಅನ್ನು ಸಹ ಹೊಂದಿದೆ. ಜಿಮ್ ಉಪಕರಣಗಳೇ ರೂ. 1.5 ಕೋಟಿ. ಅವರು ವಿದೇಶದಿಂದ ಜಿಮ್ ಉಪಕರಣಗಳನ್ನು ತಂದು ಅಳವಡಿಸಿದ್ದರು.

ಪ್ರಭಾಸ್ ಇಟಲಿಯಲ್ಲಿ 40 ಕೋಟಿ ಮೌಲ್ಯದ ಒಂದು ಐಷಾರಾಮಿ ವಿಲ್ಲಾವನ್ನು ಖರೀದಿಸಿದ್ದಾರೆ. ಪ್ರಭಾಸ್ ಸಿನಿಮಾ ಚಿತ್ರೀಕರಣದಿಂದ ಸ್ವಲ್ಪ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ, ಅವರು ಇಟಾಲಿಯನ್ ವಿಲ್ಲಾದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಈಗ, ಅವರು ಶೂಟಿಂಗ್‌ನಲ್ಲಿ ನಿರತರಾಗಿರುವಾಗ ಈ ವಿಲ್ಲಾವನ್ನು ಬಾಡಿಗೆಗೆ ನೀಡಲಾಗುತ್ತದೆ. ಈ ವಿಲ್ಲಾದ ಪ್ರಸ್ತುತ ಬೆಲೆ 80 ಮತ್ತು 85 ಕೋಟಿ ಎಂದು ಅಂದಾಜಿಸಲಾಗಿದೆ.

ಪ್ರಭಾಸ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಲ್ಯಾಂಬೋರ್ಘಿನಿ, ರೋಲ್ಸ್ ರಾಯ್ಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ದುಬಾರಿ ಕಾರುಗಳಿವೆ. ಪ್ರಭಾಸ್ ಅವರ ಹೆಸರಲ್ಲಿರುವ ಒಟ್ಟು ಆಸ್ತಿ 250 ಕೋಟಿ ರೂಪಾಯಿ.

ಪ್ರಭಾಸ್ 45 ವರ್ಷವಾದರೂ ಇನ್ನೂ ಮದುವೆ ಆಗಿಲ್ಲ. ಆಗಾಗ ಕೆಲವು ನಟಿಯರ ಜೊತೆ ಪ್ರಭಾಸ್ ಹೆಸರು ತಳಕು ಹಾಕಿಕೊಳ್ಳುತ್ತದೆ. ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆ ವದಂತಿ ಆಗಾಗ ಮುನ್ನೆಲೆಗೆ ಬರುತ್ತದೆ. ಇದಲ್ಲದೇ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿರುವ ಈ ನಟಿಯ ಜೊತೆಯೂ ಹಿಂದೊಮ್ಮೆ ಪ್ರಭಾಸ್ ಡೇಟಿಂಗ್‌ವದಂತಿ ಹಬ್ಬಿತ್ತು. ಆದರೆ ಪ್ರಭಾಸ್ ಈ ಹಿಂದೆ ಕಾಜಲ್ ಅಗರ್ವಾಲ್‌ ಅವರನ್ನು ಪ್ರೀತಿಸುತ್ತಿದ್ದರು ಎಂಬ ಬಹುದೊಡ್ಡ ವದಂತಿ ಇತ್ತು. ಆದರೆ ಕೆಲವು ಕಾರಣಗಳಿಂದ ಅವರ ಮದುವೆ ನಡೆಯಲಿಲ್ಲ ಎಂಬ ಅನೇಕ ವರದಿಗಳು ಆಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. 

ಇದನ್ನೂ ಓದಿ: ಖ್ಯಾತ ನಟಿಗೆ ಎರಡನೇ ಹಂತದ ಕ್ಯಾನ್ಸರ್!‌ 2 ವರ್ಷದ ಮಗುವನ್ನ ಆರೈಕೆ ಮಾಡಬೇಕಿರೋ ತಾಯಿ ಜೀವಕ್ಕೆ ಆಪತ್ತು

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News