)
Prasanth Varma Mahakali movie : ಪ್ರಶಾಂತ್ ವರ್ಮಾ 'ಜೈ ಹನುಮಾನ್' ಮುಂದುವರಿದ ಭಾಗದ ಬಗ್ಗೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಈಗ, ಆ ನಿರೀಕ್ಷೆಗಳನ್ನು ಹತ್ತು ಪಟ್ಟು ಹೆಚ್ಚಿಸಿ.. ಇದೀಗ ಪಿವಿಸಿ ಯೂನಿವರ್ಸ್ (Prasanth Varma Cinematic Universe) ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.. ಭಾರತದ ಮೊದಲ ಮಹಿಳಾ ಸೂಪರ್ಹೀರೋ ಚಿತ್ರವಾಗಿ 'ಮಹಾಕಾಳಿ' ತೆರೆಗೆ ಬರಲು ಸಿದ್ಧವಾಗುತ್ತಿದೆ... ಈ ಕುರಿತು ಬಿಗ್ ಅಪ್ಡೆಟ್ ಹೊರ ಬಿದ್ದಿದೆ.
ಹೌದು.. 'ಮಹಾಕಾಳಿ' ಚಿತ್ರವು ಭಾರತೀಯ ಚಲನಚಿತ್ರೋದ್ಯಮದಲ್ಲಿ ಮಹಿಳಾ ಸೂಪರ್ಹೀರೋಗಳಿಗೆ ಹೊಸ ಮಾರ್ಗ ತೋರಲಿದೆ. ಇಲ್ಲಿಯವರೆಗೆ, ಸೂಪರ್ಹೀರೋಗಳ ಹಾವಳಿಯೇ ಹೆಚ್ಚಾಗಿತ್ತು. ಆದರೆ, ಈ ಚಿತ್ರ, ಭಾರತದಲ್ಲಿ ಸೂಪರ್ ವುಮೆನ್ಗಳ ಸಿನಿಮಾಗೆ ಮುನ್ನುಡಿ ಬರೆಯಲಿದೆ..
ಅಂದಹಾಗೆ, ಈ ಚಿತ್ರವನ್ನು ಪ್ರತಿಭಾನ್ವಿತ ನಿರ್ದೇಶಕಿ ಪೂಜಾ ಅಪರ್ಣ ಕೊಲ್ಲೂರು ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ರಮೇಶ್ ದುಗ್ಗಲ್ (ಆರ್ಕೆಡಿ ಸ್ಟುಡಿಯೋಸ್) ಈ ಬೃಹತ್ ಯೋಜನೆಯನ್ನು ನಿರ್ಮಿಸುತ್ತಿದ್ದಾರೆ. ಕನ್ನಡ ನಟಿ ಭೂಮಿಶೆಟ್ಟಿ ಮಹಾಕಾಳಿ ಪಾತ್ರದಲ್ಲಿ ಪ್ರಬಲ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಯಾರಕರು ಬಿಡುಗಡೆ ಮಾಡಿದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದೆ.
From the cosmic womb of creation awakens the most FEROCIOUS SUPERHERO of the universe!
Introducing #BhoomiShetty as MAHA ❤️🔥 #Mahakali 🔱 @RKDStudios #RKDuggal @PujaKolluru #AkshayeKhanna#RiwazRameshDuggal @ThePVCU pic.twitter.com/MSyyW1oUK2
— Prasanth Varma (@PrasanthVarma) October 30, 2025
ಪೋಸ್ಟರ್ನಲ್ಲಿ, ಭೂಮಿ ಶೆಟ್ಟಿ ಧೈರ್ಯ, ಶಕ್ತಿ ಮತ್ತು ಸಾಮರ್ಥ್ಯವನ್ನು ಸಂಕೇತಿಸುವ ತಾಯಿ ದುರ್ಗಾಮಾತೆಯ ಉಗ್ರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವು ಭಾರತೀಯ ಮಹಿಳಾ ಸಬಲೀಕರಣ, ಧೈರ್ಯ ಮತ್ತು ಆತ್ಮವಿಶ್ವಾಸದ ಪ್ರತಿಬಿಂಬವಾಗಿರುತ್ತದೆ ಎಂದು ತಯಾರಕರು ಹೇಳಿದ್ದಾರೆ.
ಬಾಲಿವುಡ್ನ ಟಾಪ್ ನಟ ಅಕ್ಷಯ್ ಖನ್ನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರವು ಚಿತ್ರಕ್ಕೆ ಹೆಚ್ಚಿನ ತೂಕ ಮತ್ತು ಕ್ರೇಜ್ ಅನ್ನು ಸೇರಿಸುತ್ತದೆ. 'ಮಹಾಕಾಳಿ' ಚಿತ್ರದ ಕಥೆಯು ಮುಖ್ಯವಾಗಿ ಬಂಗಾಳದ ಹಿನ್ನೆಲೆಯಲ್ಲಿ ನಡೆಯುತ್ತದೆ ಎಂದು ತಯಾರಕರು ಬಹಿರಂಗಪಡಿಸಿದ್ದಾರೆ. ಈ ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.