pravasthi aaradhya allegations: ಅದೆಷ್ಟೋ ಜನರು ಸಾಧನೆ ಮಾಡಬೇಕು ಎಂಬ ಆಸೆಯನ್ನು ಹೊತ್ತುಕೊಂಡು, ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಬಣ್ಣದ ಲೋಕಕ್ಕೆ ಬರುತ್ತಾರೆ. ಹೀಗೆ ಕೆಲವೊಬ್ಬರು ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶಗಳನ್ನು ಹರಸಿ ಬಂದರೆ, ಇನ್ನೂ ಕೆಲವರು ಹಾಡುಗಲ ಮೂಲಕ ತಮ್ಮ ಕಲೆಯನ್ನು ಸಾಭೀತು ಪಡಿಸಲು ರಿಯಾಲಿಟಿ ಶೋಗಳಲಿ ಚ್ಯಾನ್ಸ್ ಗಿಟ್ಟಿಸಿಕೊಳ್ಳೋಕೆ, ಅದೆಷ್ಟೋ ಕಷ್ಟ ಪಡುತ್ತಾರೆ. ಹೀಗೆ ಕಿರುತೆರೆಯಲ್ಲಿ ಇಂತಹ ಪ್ರತಿಭೆಗಳಿಗೆ ವೇದಿಕೆ ಕಲ್ಪಸುವ ಹಲವಾರು ಕಾರ್ಯಕ್ರಮಗಳಿವೆ.
ಕಿರುತೆರೆಯಲ್ಲಿ ಪ್ರಸಾರವಾಗುವ ಸಂಗೀತ ಸ್ಪರ್ಧೇಯ ರಿಯಾಲಿಟಿ ಶೋಗಳ ಪೈಕಿ ಪಕ್ಷಪಾತದ ದೂರುಗಳು ಕೇಳಿ ಬರುವುದು ಹೆಚ್ಚು. ಆದರೆ ಇದೀಗ ತೆಲುಗು ರಿಯಾಲಿಟಿ ಶೋ ಮೇಲೆ ಸ್ಪರ್ಧಿ ಒಬ್ಬರು ಆರೋಪ ಮಾಡಿದ್ದು, ಇದು ಕಿರುತೆರೆಯಲ್ಲಿನ ರಿಯಾಲಿಟಿ ಶೋಗಳ ಕರಾಳ ಮುಖವನ್ನು ಬಿಚ್ಚಿಡುತ್ತಿದೆ. ತೆಲುಗಿನಲ್ಲಿ ʻಪಾಡುತಾ ತೀಯಗಾʼ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿದೆ, ಇದು ಪ್ರಸಿದ್ದಿಯೂ ಹೌದು, ಹೀಗಿರುವಾಗ ಸ್ಪರ್ಧಿಯೊಬ್ಬರು ಈ ಕಾರ್ಯಕ್ರಮದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಕಾರ್ಯಕ್ರಮದ ವಿರುದ್ಧ ಆರೋಪ ಮಾಡಿ, ಸ್ಪರ್ಧಿಯೊಬ್ಬರು ಹಂಚಿಕೊಂಡಿರುವ ವಿಡಿಯೋ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಐಶ್ವರ್ಯಾ ರೈ ನೋಡುತ್ತಿದ್ದಂತೆ ಕಣ್ಣೀರಿಟ್ಟ ಅಮಿತಾಬ್ ಬಚ್ಚನ್!? - Throwback Tuesday
ಖಾಸಗಿ ವಾಹಿನಿಯಲ್ಲಿನ ಈ ಕಾರ್ಯಕ್ರಮ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ತೆಲುಗಿನಲ್ಲಿ ಎಸ್.ಪಿ. ಬಾಲಸುಬ್ರಮಣ್ಯ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆರಂಭವಾಗಿದ್ದು, ಸದ್ಯ ಇದು 20 ಕ್ಕೂ ಹೆಚ್ಚು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇತ್ತೀಚೆಗೆ ಈ ಕಾರ್ಯಕ್ರಮದ ಹೊಸ ಸೀಸನ್ ಆರಂಭಗೊಂಡಿದ್ದು, ಇದರಲ್ಲಿ ಪ್ರವಸ್ತಿ ಆರಾಧ್ಯ ಕೂಡ ಸ್ಪರ್ಧಿಯಾಗಿ ಭಾಗವಹಿಸಿದಗದರು. ಇದೀಗ ಇವರು ಶೋನ ವಿರುದ್ದ ಹಾಗೂ ಶೋನ ತೀರ್ಪುಗಾರರ ವಿರುದ್ಧ ಮಾಡಿರುವ ದೂರು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
"ನಾನು ಸಂಗೀತ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದೆ, ನನ್ನನ್ನು ಈ ಶೋದ ಜಡ್ಜ್‌ಗಳು ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದರು, ಬೇಕಂತಲೇ ನೆಗೆಟಿವ್ ಕಾಮೆಂಟ್ಸ್ ಕೊಡುತ್ತಿದ್ದರು. ಜಡ್ಜ್‌ಗಳು ಅಷ್ಟೇ ಅಲ್ಲ ಆ ಶೋದ ಪ್ರೊಡಕ್ಷನ್‌ನವರು ಹಾಗೂ ಕಾಸ್ಟ್ಯೂಮ್ ವರ್ಕರ್ಸ್ ಕೂಡ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು, ಒಂದು ವೇಳೆ ನನಗೇನಾದರು ಆದರೆ, ಅದಕ್ಕೆ ನೇರ ಕಾರಣ ಈ ಕಾರ್ಯಕ್ರಮದ ತೀರ್ಪುಗಾರರಾಗಿರುವ ಕೀರವಾಣಿ ಹಾಗೂ ಸುನಿತಾ" ಎಂದು ಸದ್ಯ ಪ್ರವಸ್ತಿ ಆರೋಪ ಮಾಡಿದ್ದು, ಈ ವಿಡಿಯೋ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಇದನ್ನೂ ಓದಿ: ʻಮೊದಲು ಇಡೀ ದೇಹ ಮುಟ್ಟುತ್ತಾರೆ.. ನಂತರ ಅದನ್ನು ಡಿನ್ನರ್ ಎನ್ನುತ್ತಾರೆʼ : ಖ್ಯಾತ ಟಾಲಿವುಡ್ ನಟಿಯ ಸೆನ್ಸೇಷನಲ್ ಹೇಳಿಕೆ
ಇನ್ನೂ, ಕೀರವಾಣಿ ಬಗ್ಗೆ ಮಾತನಾಡಿರುವ ಪ್ರವಸ್ತಿ, "ಹಾಡುಗಳ ಬಗ್ಗೆ ಕೀರಾವಣಿ ಅವರು ನನಗೆ ಯಾವುದೇ ನೆಗೆಟಿವ್ ಕಾಮೆಂಟ್‌ಗಳನ್ನು ಕೊಟ್ಟಿಲ್ಲ ಆದರೆ, ನಾನು ಅವರಿಗೆ ಮದುವೆ ಸಮಾರಂಭಗಳಲ್ಲಿ ನಾನು ಹಾಡುಗಳನ್ನು ಹಾಡಿ ದುಡ್ಡು ಸಂಪಾದಿಸುತ್ತೇನೆ, ನನ್ನದು ಬಡ ಕುಟುಂಬ ಎಂದು ಹೇಳಿದ್ದಕ್ಕೆ, ಅವರು ಮದುವೆ ಹಾದಿ ಬೀದಿಯಲ್ಲಿ ಹಾಡುವವರೆಲ್ಲಾ ನನ್ನ ಪ್ರಕಾರ ಗಾಯಕರು ಅಲ್ಲವೇ ಅಲ್ಲ, ಇವೆಲ್ಲಾ ಅಸಹ್ಯ ಎಂದಿದ್ದರು, ಇದನ್ನೆಲ್ಲಾ ಕೇಳಿ ನನ್ನ ಮನಸ್ಸಿಗೆ ತುಂಬಾ ಬೇಸರವಾಗಿತ್ತು" ಎಂದಿದ್ದಾರೆ.
ಗಾಯಕಿ ಸಂಗೀತಾ ಅವರ ಬಗ್ಗೆ ಮಾತನಾಡಿರುವ ಪ್ರವಸ್ತಿ, "ಸಂಗೀತಾ ಅವರು ಅವರ ಹಾಡುಗಳನ್ನು ಹಾಡಿದಾಗ ಮಾತ್ರವಷ್ಟೇ ಒಳ್ಳೆಯ ಅಂಕಗಳನ್ನು ಕೊಡುತ್ತಿದ್ದರು, ಗೆಲ್ಲುವ ಕೆಲವರನ್ನಷ್ಟೆ ಅವರ ತಂಡಕ್ಕೆ ಸೇರಿಸಿಕೊಂಡು ನನ್ನನ್ನು ಕಡೆಗಣಿಸಿದ್ದರು, ಎಸ್‌ಪಿಬಿ ಸರ್ ಅವರು ಇದ್ದಾಗ ಈ ಕಾರ್ಯಕ್ರಮದಲ್ಲಿ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ, ಯಾರೂ ಸಹ ಸ್ಪರ್ಧಿಗಳ ಕುರಿತು ಹೀಗೆಲ್ಲಾ ಮಾತನಾಡಿರಲಿಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ದೂರ ತೀರ ಯಾನ'ದ ಮೊದಲ ಪ್ರೇಮಗೀತೆಗೆ ಮೆಚ್ಚುಗೆಯ ಸುರಿಮಳೆ
ಇನ್ನೂ, ಪ್ರೊಡಕ್ಷನ್ ಹಾಗೂ ಕಾಸ್ಟ್ಯೂಮ್ ಡಿಸೈನರ್ ಅವರ ಕುರಿತು ಮಾತನಾಡಿರುವ ಪ್ರವಸ್ತಿ, "ಹೊಕ್ಕಳು ಕಾಣಿಸುವಂತೆ ಸೀರೆ ಉಡಬೇಕು, ಎಕ್ಸ್‌ಪೋಸ್ ಮಾಡಬೇಕು ಎನ್ನುತ್ತಾರೆ. ನಿನ್ನ ದೇಹಕ್ಕೆ ಇನ್ನೇನು ಕೊಡೋಕೆ ಸಾಧ್ಯ, ನಾವು ಕೊಟ್ಟಿದನ್ನು ಹಾಕೋ ಎನ್ನುತ್ತಾರೆ, ಇವೆಲ್ಲಾ ನನ್ನನ್ನು ಮಾನಸೀಕವಾಗಿ ಕುಗ್ಗಿಸಿವೆ" ಎಂದು ಪ್ರವಸ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









