PHOTO: ಪ್ರಿಯಾಂಕಾ ಚೋಪ್ರಾ-ನಿಕ್ ಜೊನಸ್ ರಿಸೆಪ್ಷನ್'ನಲ್ಲಿ ಪ್ರಧಾನಿ ಮೋದಿ

ನಿಕ್ ಪೋಷಕರು ಮತ್ತು ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಕೂಡ ಇಂಡೋ ಪಾಶ್ಚಾತ್ಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.  

Updated: Dec 5, 2018 , 10:44 AM IST
PHOTO: ಪ್ರಿಯಾಂಕಾ ಚೋಪ್ರಾ-ನಿಕ್ ಜೊನಸ್ ರಿಸೆಪ್ಷನ್'ನಲ್ಲಿ ಪ್ರಧಾನಿ ಮೋದಿ
Photo : Yogen Shah

ನವದೆಹಲಿ: ರಾಷ್ಟ್ರ ರಾಜಧಾನಿಯ ತಾಜ್ ಪ್ಯಾಲೇಸ್ ನಲ್ಲಿ ನಡೆದ ದೇಸಿ ಗರ್ಲ್ ಪ್ರಿಯಾಂಕ ಚೋಪ್ರ ಮತ್ತು ನಿಕ್ ಜೊನಸ್ ರಿಸೆಪ್ಷನ್'ಗೆ ತೆರಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನವದಂಪತಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.

ದೆಹಲಿ ರಿಸೆಪ್ಷನ್'ನಲ್ಲಿ ಪ್ರಿಯಾಂಕ ಚೋಪ್ರಾ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದರೆ, ನಿಕ್ ಜೋನಾಸ್ ಪಾಶ್ಚಾತ್ಯ ಲುಕ್ನಲ್ಲಿ ಮಿಂಚುತ್ತಿದ್ದರು.

Photo : Yogen Shah

ನಿಕ್ ಪೋಷಕರು ಮತ್ತು ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಕೂಡ ಇಂಡೋ ಪಾಶ್ಚಾತ್ಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.

Photo : Yogen Shah

ಜೋಧಪುರ್ ನಲ್ಲಿರುವ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ಕ್ರೈಸ್ತ ಹಾಗೂ ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾದ ನಿಕ್ಯಾಂಕಾ ಜೋಡಿ ಭಿನ್ನ ಭಿನ್ನ ಮದುವೆ ಉಡುಪಿನಲ್ಲಿ ಕಂಗೊಳಿಸುತ್ತಿದ್ದರು. ಭಾರತೀಯ ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ಪ್ರಿಯಾಂಕ ಕೆಂಪು ವರ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿದ ವಿವಾಹದಲಿ ಬಿಳಿ ಗೌನ್ ನಲ್ಲಿ ಉಡುಪಿನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.