)
Priyanka Chopra Nick : ಬಾಲಿವುಡ್ ನಿಂದ ಹಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ನಟಿ ಪ್ರಿಯಾಂಕಾ ಚೋಪ್ರಾ ಈಗ ಜಾಗತಿಕ ತಾರೆಯಾಗಿ ಜಗತ್ತನ್ನು ಆಳುತ್ತಿದ್ದಾರೆ. ಹಾಲಿವುಡ್ ನಲ್ಲಿ ಸರಣಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸುವ ಮೂಲಕ ಅವರು ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ 2018 ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಪ್ರಿಯಾಂಕಾ ನಿಕ್ ಗಿಂತ ಹತ್ತು ವರ್ಷ ದೊಡ್ಡವರು. ಈ ವಿಚಾರವಾಗಿ ಪಿಂಕಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಆದರೂ ಯಾವುದನ್ನು ತಲೆಗೆ ತೆಗೆದುಕೊಳ್ಳಲಿಲ್ಲ..
ಆಗಾಗ ನಿಕ್ ಪ್ರಿಯಾಂಕಾ ತಮ್ಮ ರಜೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಈ ಜೋಡಿ ಬೀಚ್ನಲ್ಲಿ ಲಿಪ್ ಕಿಸ್ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಈ ರೀತಿಯ ವರ್ತನೆ ಸರಿಯಲ್ಲ ಅಂತ ಪಿಂಕಿಗೆ ಬುದ್ದಿವಾದ ಹೇಳುತ್ತಿದ್ದಾರೆ.
ಇನ್ನು ಪ್ರಿಯಾಂಕಾ ಸಿನಿಮಾ ವಿಚಾರವಾಗಿ ಮಾತನಾಡುವುದಾದರೆ, ಪಿಂಕಿ ಪ್ರಸ್ತುತ ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ SSMB29 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. SSMB29 ಸಿನಿಮಾದ ಚಿತ್ರೀಕರಣ ಬಹುತೇಕ ಫಿನಿಷ್ ಆದಂತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಹೊರಬರಬೇಕಿದೆ..