13ನೇ ವಯಸ್ಸಿನಲ್ಲಿ ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್

ಬಾಲಿವುಡ್‌ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ಮತ್ತು ಗಾಯಕ ನಿಕ್ ಜೋನಾಸ್ 13ನೇ ವಯಸ್ಸಿನಲ್ಲಿ ಟೈಪ್ 1 ಮಧುಮೇಹಕ್ಕೆ ಬಲಿಯಾಗಿದ್ದರು. ನಿಕ್ ತಮ್ಮ ಬಾಲ್ಯದ ಈ ನೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಟೈಪ್ 1 ಮಧುಮೇಹದಲ್ಲಿ ಯಾವ ಲಕ್ಷಣಗಳು ಕಂಡುಬರುತ್ತವೆ ಎಂಬುದನ್ನು ತಿಳಿಯಿರಿ.

Written by - Puttaraj K Alur | Last Updated : Apr 23, 2025, 01:06 PM IST
  • 13ನೇ ವಯಸ್ಸಿನಲ್ಲಿ ಟೈಪ್ 1 ಮಧುಮೇಹಕ್ಕೆ ತುತ್ತಾಗಿದ್ದ ನಿಕ್ ಜೋನಾಸ್
  • ತನಗಾದ ಅನುಭವವನ್ನ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ ಪತಿ
  • ಟೈಪ್ 1 ಮಧುಮೇಹ ಕಾಯಿಲೆಯ ಲಕ್ಷಣಗಳ ಬಗ್ಗೆ ತಿಳಿಯಿರಿ
13ನೇ ವಯಸ್ಸಿನಲ್ಲಿ ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್

Nick Jonas Health Issues: ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಾಸ್ ಕೇವಲ 13ನೇ ವಯಸ್ಸಿನಲ್ಲಿ ಟೈಪ್ 1 ಮಧುಮೇಹಕ್ಕೆ ತುತ್ತಾಗಿದ್ದರು. ಗಾಯಕ ಕಮ್ ನಟ ನಿಕ್‌ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಮೊದಲು ತಿಳಿದಾಗ ತನಗಾದ ಅನುಭವವನ್ನ ನಿಕ್ ಹಂಚಿಕೊಂಡಿದ್ದಾರೆ. 13 ವರ್ಷದ ನನಗೆ ಆಗ ʼಕನಸುಗಳ ಬಾಗಿಲು ಮುಚ್ಚಿದಂತೆ ಭಾಸವಾಯಿತುʼ ಅಂತಾ ಹೇಳಿಕೊಂಡಿದ್ದಾರೆ. ಆದರೆ ನಿಕ್ ಕ್ರಮೇಣ ತನ್ನ ರೋಗದ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಸಂಪೂರ್ಣ ನಿಯಂತ್ರಣ ಮಾಡಿಕೊಂಡರು. ಇಂದು ಅವರು ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿದ್ದಾರೆ.

Add Zee News as a Preferred Source

ನಿಕ್ ಜೊನಾಸ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಸೋಫಾದ ಮೇಲೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಮಧುಮೇಹ ಮೇಲ್ವಿಚಾರಣೆಗಾಗಿ ಪ್ಯಾಚ್ ಅನ್ನು ಸಹ ಧರಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ತಮ್ಮ ಬಾಲ್ಯದ ಅನಾರೋಗ್ಯದ ಬಗ್ಗೆ ಮೊದಲು ತಿಳಿದುಕೊಂಡಾಗಿನ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ನಿಕ್ ತನ್ನ ಸಹೋದರರೊಂದಿಗೆ ಸಂಗೀತ ಪ್ರದರ್ಶನ ನೀಡುತ್ತಿದ್ದರು. ಆಗ ಅವರಿಗೆ ಗಂಭೀರ ಕಾಯಿಲೆಯ ವಿಷಯ ತಿಳಿಯಿತು. ಹಂಚಿಕೊಂಡಿರುವ ಚಿತ್ರಗಳಲ್ಲಿ ಬಾಲ್ಯದ ಅಂದರೆ 13 ವರ್ಷದ ನಿಕ್ ಮತ್ತು ಇಂದಿನ ಯುವ ನಿಕ್ ಜೋನಾಸ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Snake Bite: ಹಾವು ಕಚ್ಚಿದ ವ್ಯಕ್ತಿ ಮಲಗಿದ್ರೆ ಏನಾಗುತ್ತೆ! ನಿದ್ದೆ ಮಾಡಿದ್ರೆ ಜೀವಕ್ಕೆ ಅಪಾಯವಿರುತ್ತಾ?

13ನೇ ವಯಸ್ಸಿನಲ್ಲಿ ಟೈಪ್ 1 ಮಧುಮೇಹ ಪತ್ತೆ

ಈ ಪೋಸ್ಟ್ ಅನ್ನು ಹಂಚಿಕೊಂಡ ನಿಕ್ ಜೋನಾಸ್, ʼ13ನೇ ವಯಸ್ಸಿನಲ್ಲಿ ಟೈಪ್ 1 ಮಧುಮೇಹ ಇರುವುದು ಪತ್ತೆಯಾದ ನಂತರ ನನ್ನ ಕನಸುಗಳಿಗೆ ಯಾರೋ ಬಾಗಿಲು ಮುಚ್ಚುತ್ತಿರುವಂತೆ ಭಾಸವಾಯಿತು' ಎಂದು ಬರೆದಿದ್ದಾರೆ. ʼಈಗ ಎಲ್ಲವೂ ನಾನು ಊಹಿಸಿದ್ದಕ್ಕಿಂತ ಚೆನ್ನಾಗಿ ನಡೆಯುತ್ತಿದೆ ಎಂದು ನಾನು ನನ್ನ ಕಿರಿಯ ಆತ್ಮಕ್ಕೆ ಹೇಳಲು ಬಯಸುತ್ತೇನೆʼ ಅಂತಾ ಹೇಳಿಕೊಂಡಿದ್ದಾರೆ.   

ಪುತ್ರಿಯ ಬಗ್ಗೆ ನಿಕ್‌ ಕಳವಳ

ಇದಕ್ಕೂ ಮೊದಲೇ ನಿಕ್ ಜೊನಸ್ ಮಧುಮೇಹದ ಬಗ್ಗೆ ಮಾತನಾಡಿದ್ದರು. 2023ರಲ್ಲಿ ಪೋಸ್ಟ್ ಹಂಚಿಕೊಂಡಿದ್ದ ನಿಕ್ ಜೋನಾಸ್ ತಮ್ಮ ಮಗಳು ಮಾಲ್ಟಿ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಧುಮೇಹ ಇದ್ದಾಗ ತನಗೆ ಯಾವ ಲಕ್ಷಣಗಳು ಕಂಡುಬಂದಿದ್ದವು ಎಂಬುದನ್ನು ಸಹ ಅವರು ಈ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ:   Diabetes: ಮಧುಮೇಹವನ್ನು ನಿಯಂತ್ರಣ ಮಾಡೋಕೆ ಯಾವುದೇ ಪಥ್ಯ ಬೇಡ! ʻಈʼ ತರಕಾರಿ ಒಣಗಿಸಿ ರುಬ್ಬಿ ಪುಡಿ ಮಾಡಿ ಮೊಸರಿನಲ್ಲಿ ಬೆರೆಸಿ ತಿಂದರೆ ಶುಗರ್‌ ಕಂಟ್ರೋಲ್‌ನಲ್ಲಿರುತ್ತೆ

ಟೈಪ್ 1 ಮಧುಮೇಹದ ಲಕ್ಷಣಗಳು

ಆಗಾಗ್ಗೆ ಮೂತ್ರ ವಿಸರ್ಜನೆ
* ಅತಿಯಾದ ಬಾಯಾರಿಕೆ
* ತುಂಬಾ ಹಸಿವು
* ಗುಣವಾಗದ ಗಾಯ
* ಕಣ್ಣಿನ ದೃಷ್ಟಿ ಕಡಿಮೆಯಾಗುವುದು
* ದಣಿದ ಮತ್ತು ದುರ್ಬಲ ಭಾವನೆ 
* ಯಾವುದೇ ಸ್ಪಷ್ಟ ಕಾರಣವಿಲ್ಲದೆ ತೂಕ ನಷ್ಟ 

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News