VIRAL VIDEO: ಅರೆನಗ್ನ ಸ್ಥಿತಿಯಲ್ಲಿ ಕುಣಿದು ಕುಪ್ಪಳಿಸಿದೆ ಪ್ರಿಯಾಂಕಾ-ನಿಕ್

ವಿಡಿಯೋದಲ್ಲಿ ಉಭಯರು ಬಿಳಿ ಬಣ್ಣದ ಶರ್ಟ್, ಸಾಕ್ಸ್ ಧರಿಸಿದ್ದು ಪ್ಯಾಂಟ್ ಧರಿಸಿಲ್ಲ.

Last Updated : Jan 17, 2020, 04:34 PM IST
VIRAL VIDEO: ಅರೆನಗ್ನ ಸ್ಥಿತಿಯಲ್ಲಿ ಕುಣಿದು ಕುಪ್ಪಳಿಸಿದೆ ಪ್ರಿಯಾಂಕಾ-ನಿಕ್ title=

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಸತತ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಟ್ಟು ಸುದ್ದಿ ಮಾಡುತ್ತಲೇ ಇರುತ್ತಾರೆ. ಸದ್ಯ ಈ ಉಭಯರ ವಿಡಿಯೋ ಹಾಡೊಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಪ್ರಿಯಾಂಕಾ ನಿಕ್ ಜೊತೆಗೆ ಪ್ಯಾಂಟ್ ಧರಿಸದೆ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಈ ಇಬ್ಬರ ಕೆಮೆಸ್ಟ್ರಿ ಸಕ್ಕತ್ತಾಗಿ ಮೂಡಿಬಂದಿದೆ. ವಿಡಿಯೋದಲ್ಲಿ ಇಬ್ಬರು ವೈಟ್ ಶರ್ಟ್ ಧರಿಸಿದ್ದಾರೆ. ಅಷ್ಟೇ ಅಲ್ಲ ಸಾಕ್ಸ್ ಕೂಡ ಧರಿಸಿದ್ದಾರೆ. ಆದರೆ, ಪ್ಯಾಂಟ್ ಮಾತ್ರ ಧರಿಸಿಲ್ಲ. ಈ ಹಾಡಿನಲ್ಲಿ ಪ್ರಿಯಾಂಕಾ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು1980 ರಲ್ಲಿ ಬಿಡುಗಡೆಯಾಗಿದ್ದ 'ವಾಟ್ ಎ ಮ್ಯಾನ್ ಗೋಟಾ ಡೂ' ಹಾಡಿನ ಎರಡನೇ ಆವೃತ್ತಿಯಾಗಿದೆ.  ಇದಕ್ಕೂ ಮೊದಲು ನಿಕ್ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಈ ಹಾಡಿನ ಫಸ್ಟ್ ಲುಕ್ ಜಾರಿಗೊಳಿಸಿದ್ದರು. ಹಾಡುಬಿಡುಗಡೆಗೊಂಡ ಬಳಿಕ ಲಕ್ಷಾಂತರ ಜನರು ಈ ಹಾಡನ್ನು ವಿಕ್ಷೀಸಿದ್ದಾರೆ . ಅಷ್ಟೇ ಅಲ್ಲ ಪ್ರಿಯಾಂಕಾ ಹಾಗೂ ನಿಕ್ ಕುರಿತು ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿದ್ದಾರೆ.

 
 
 
 

 
 
 
 
 
 
 
 
 

OUT NOW 🤍 #WhatAManGottaDoVideo @nickjonas @jonasbrothers

A post shared by Priyanka Chopra Jonas (@priyankachopra) on

ಸದ್ಯ ವೈರಲ್ ಆಗುತ್ತಿದೆ ಈ ವಿಡಿಯೋ
ಇದಕ್ಕೂ ಮೊದಲು ಪ್ರಿಯಾಂಕಾ ಹಾಗೂ ಅವರ ಪತಿ ನಿಕ್ ಜೋನಾಸ್ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ನ ಒಂದು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಈ ಅವಾರ್ಡ್ ಕಾರ್ಯಕ್ರಮದಲ್ಲಿ ಪಿಯಾನ್ಕಾ ಪಿಂಕ್ ಕಲರ್ ಡ್ರೆಸ್ ಹಾಗೂ ಡೈಮಂಡ್ ನೆಕ್ಸ್ಲೆಸ್ ಧರಿಸಿದ್ದರೆ, ನಿಕ್ ಕೂಡ ಕಪ್ಪುಬಣ್ಣದ ಪ್ಯಾಂಟ್ ಮತ್ತು ಬ್ಲೆಜರ್ ನಲ್ಲಿ ತುಂಬಾ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ-ನಿಕ್ ಪರಸ್ಪರ ಕಿಸ್ ಮಾಡಿದ್ದು, ಬಳಿಕ ಪ್ರಿಯಾಂಕಾ ನಿಕ್ ಅವರ ತುಟಿಗಳ ಮೇಲಿಂದ ತನ್ನ ಲಿಪ್ಸ್ಟಿಕ್ ಕಲೆಯನ್ನು ಅಳಿಸಿ ಹಾಕುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಇಬ್ಬರು ಪರಸ್ಪರರ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಾರೆ ಎಂಬುದು ಈ ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಪ್ರಿಯಾಂಕಾ-ನಿಕ್ ನಡುವಿನ ಪ್ರೀತಿಗೆ ಸಾಕ್ಷಿಯಾಗಿದ್ದ ಈ ವಿಡಿಯೋವನ್ನು ಅವರ ಅಭಿಮಾನಿಗಳು ತುಂಬಾ ಮೆಚ್ಚಿಕೊಂಡಿದ್ದರು.

ಈ ಇಬ್ಬರು ಮದುವೆಯಾಗಿ ಒಂದು ವರ್ಷ ಗತಿಸಿದೆ, ಆದರೂ, ಇಬ್ಬರೂ ಕೂಡ ಪರಸ್ಪರ ಕಣ್ಣುಮುಚ್ಚಾಲೆ ಆಡುತ್ತಲೇ ಇದ್ದಾರೆ. ಇದೆ ಕಾರಣದಿಂದ ಈ ಇಬ್ಬರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದಕ್ಕೂ ಮೊದಲು ಹೊಸ ವರ್ಷಾಚರಣೆ ಆಚರಿಸಲು ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಪ್ರಿಯಾಂಕಾ-ನಿಕ್ ವೇದಿಕೆಯ ಮೇಲೆ ಬರುತ್ತಿದ್ದಂತೆ ಮುತ್ತಿಕ್ಕಿ ಪರಸ್ಪರ ಶುಭಾಷಯ ಹಂಚಿಕೊಂಡಿದ್ದರು.

Trending News