ಶೀಘ್ರದಲ್ಲಿಯೇ ಪ್ರಿಯಾಂಕಾ-ನಿಕ್ ಅವರಿಂದ 'ಸಂಗೀತ ಡಾನ್ಸ್ ಷೋ'!

ತಮ್ಮ ಮದುವೆಯ ಸಂದರ್ಭದಲ್ಲಿ ನಡೆದ ಸಂಗೀತ ಕಾರ್ಯಕ್ರಮವನ್ನು ಪ್ರೇರಣೆಯಾಗಿ ತೆಗೆದುಕೊಂಡ ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ತಮ್ಮ ಪತಿ ನಿಕ್ ಜೋನಾಸ್ ಜೊತೆ ಸೇರಿಕೊಂಡು ಒಂದು ಡಾನ್ಸ್ ಷೋ ಸರಣಿಯನ್ನು ನಿರ್ಮಿಸಲಿದ್ದಾರೆ. 

Updated: Dec 12, 2019 , 08:29 PM IST
ಶೀಘ್ರದಲ್ಲಿಯೇ ಪ್ರಿಯಾಂಕಾ-ನಿಕ್ ಅವರಿಂದ 'ಸಂಗೀತ ಡಾನ್ಸ್ ಷೋ'!

ನವದೆಹಲಿ:ತಮ್ಮ ಮದುವೆಯ ಸಂದರ್ಭದಲ್ಲಿ ನಡೆದ ಸಂಗೀತ ಕಾರ್ಯಕ್ರಮವನ್ನು ಪ್ರೇರಣೆಯಾಗಿ ತೆಗೆದುಕೊಂಡ ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ತಮ್ಮ ಪತಿ ನಿಕ್ ಜೋನಾಸ್ ಜೊತೆ ಸೇರಿಕೊಂಡು ಒಂದು ಡಾನ್ಸ್ ಷೋ ಸರಣಿಯನ್ನು ನಿರ್ಮಿಸಲಿದ್ದಾರೆ. ಗುರುವಾರ ಈ ಕುರಿತು ಘೋಷಣೆ ಮಾಡಲಾಗಿದ್ದು, ಪ್ರಿಯಾಂಕಾ ಚೋಪ್ರಾ-ಜೋನಾಸ್ ಹಾಗೂ ನಿಕ್ ಜೋನಾ ಅವರು ಪ್ರಸ್ತುತಪಡಿಸಲಿರುವ ಮತ್ತು ಡಾನ್ಸ್ ಹಾಗೂ ಸಂಗೀತ ಆಧಾರಿತ ಈ ಸ್ಪರ್ಧಾತ್ಮಕ ಸೀರಿಸ್ ಗೆ ಹಸಿರು ನಿಶಾನೆ ಸಿಕ್ಕಿದೆ. 

ಈ 'ಡಾನ್ಸ್-ಸಂಗೀತ' ಸರಣಿಗೆ ಭಾರತೀಯ ವಿವಾಹಗಳಲ್ಲಿ ನಡೆಯುವ 'ಪಾರಂಪರಿಕ ಸಂಗೀತ ಕಾರ್ಯಕ್ರಮ' ಪ್ರೇರಣೆಯಾಗಿದೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, "ನಮ್ಮ ವಿವಾಹದ ಮೊದಲ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾವು ನಮ್ಮ ವಿವಾಹದ ವೇಳೆ ನಡೆದ 'ಸಂಗೀತ ಕಾರ್ಯಕ್ರಮ'ದ ವಿಡಿಯೋವನ್ನು ಮತ್ತೊಮ್ಮೆ ವಿಕ್ಷೀಸಿದ್ದು, ತಮ್ಮ ಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಕ್ರಮಕ್ಕೆ ಅತೀವ ಶೋಭೆ ತಂದಿತ್ತು ಹಾಗೂ ವಿವಾಹದ ಒಂದು ವರ್ಷದ ಬಳಿಕವೂ ಕೂಡ ಅದನ್ನು ನಾವು ಫೀಲ್ ಮಾಡಿದ್ದೇವೆ" ಎಂದು ಹೇಳಿದ್ದಾರೆ.

ಆದರೆ ಈ ಸರಣಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಕಾಸ್ಟಿಂಗ್ ನಡೆಸಲಾಗಿಲ್ಲ. ಇದರ ಚಿತ್ರೀಕರಣ ಕೂಡ ಮುಂದಿನ ವರ್ಷ ಆರಂಭಗೊಳ್ಳಲಿದೆ. 

ಇನ್ನೊಂದೆಡೆ ವರ್ಕ್ ಫ್ರಂಟ್ ಕುರಿತು ಮಾತನಾಡುವುದಾದರೆ, ಪ್ರಿಯಾಂಕಾ ಕೆಲದಿನಗಳಿಂದ ತಮ್ಮ ಮುಂಬರುವ ಚಿತ್ರ 'ವೈಟ್ ಟೈಗರ್' ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಅತ್ತ ನಿಕ್ ಜೋನಾಸ್ ಅವರು ತಮ್ಮ ಅತಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ 'ಜುಮಾಂಜಿ ದಿ ನೆಕ್ಸ್ಟ್ ಲೆವಲ್' ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ತೊಡಗಿದ್ದಾರೆ.