23 ವರ್ಷಗಳಾದ್ರೂ ʼಅಪ್ಪುʼ ಸಿನಿಮಾ ಹೌಸ್ ಪುಲ್..! ತೆರೆ ಮೇಲೆ ನಗುಮೊಗದ ದೊರೆ ಕಂಡು ಫ್ಯಾನ್ಸ್‌ ಫುಲ್‌ ಖುಷ್‌

Appu Re-release : ಅಭಿಮಾನಿಗಳಿಗೆ ಅಪ್ಪು ಅವರ ಮೇಲಿರುವ ಪ್ರೀತಿ ಚೂರು ಕಡಿಮೆಯಾಗಿಲ್ಲ.. ಪುನೀತ್‌ ಅವರು ಇಂದು ನಮ್ಮ ನಡುವೆ ಇಲ್ಲಾ ಅಂದ್ರೂ ಅವರ ನೆನೆಪು ಮಾತ್ರ ಅಜರಾಮರ.. ಅಂದಹಾಗೆ.. ಇಂದು ರಿ-ರಿಲೀಸ್‌ ಆದ "ಅಪ್ಪು" ಸಿನಿಮಾ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದ್ದು, ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ..

Written by - Krishna N K | Last Updated : Mar 14, 2025, 01:26 PM IST
    • ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ʼಅಪ್ಪುʼ ರಿ-ರಿಲೀಸ್
    • ಅಭಿಮಾನಿಗಳಿಗೆ ಅಪ್ಪು ಅವರ ಮೇಲಿರುವ ಪ್ರೀತಿ ಚೂರು ಕಡಿಮೆಯಾಗಿಲ್ಲ
    • ತೆರೆ ಮೇಲೆ ಅಪ್ಪು ಕಂಡು ಅಭಿಮಾನಿಗಳ ಪುಳಕಿತರಾದ ಫ್ಯಾನ್ಸ್‌
23 ವರ್ಷಗಳಾದ್ರೂ ʼಅಪ್ಪುʼ ಸಿನಿಮಾ ಹೌಸ್ ಪುಲ್..! ತೆರೆ ಮೇಲೆ ನಗುಮೊಗದ ದೊರೆ ಕಂಡು ಫ್ಯಾನ್ಸ್‌ ಫುಲ್‌ ಖುಷ್‌

Puneeth Rajkumar Appu movie : ಪವರ್‌ ಸ್ಟಾರ್ ನಟ, ಡಾ. ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇಂದು "ಅಪ್ಪು" (Appu) ಸಿನಿಮಾ ರಿ-ರಿಲೀಸ್ ಆಗಿದೆ. ಈಗಾಗಲೇ ಈ ಸಿನಿಮಾ ತೆರೆಕಂಡು 23 ವರ್ಷಗಳಾಗಿದ್ದರೂ ಚಿತ್ರದ ಮೇಲಿನ ಕ್ರೇಜ್‌ ಒಂದಿಷ್ಟು ಕಡಿಮೆ ಆಗಿಲ್ಲ. ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿವೆ. 

Add Zee News as a Preferred Source

ಹೌದು.. ಅಪ್ಪು ಸಿನಿಮಾ ತೆರೆಕಂಡು ಸರಿಸುಮಾರು 2 ದಶಕಗಳಾಗಿವೆ. ಇಂದಿಗೂ ಈ ಚಿತ್ರದ ಮೇಲಿನ ಕ್ರೇಜ್‌ ಕೊಂಚವೂ ಕಡಿಮೆಯಾಗಿಲ್ಲ.. ಕನ್ನಡ ಸಿನಿರಂಗಕ್ಕೆ "ವೀರ ಕನ್ನಡಿಗನ" ಕೊಡುಗೆ ಅಷ್ಟಿಷ್ಟಲ್ಲ. ಸ್ಯಾಂಡಲ್ ವುಡ್‌ ಬೆಳವಣಿಗೆಗೆ ರಾಜ್‌ ಕುಟುಂಬ ಅಗಾಧ ಕೊಡುಗೆ ನೀಡಿದೆ. 

ಇದನ್ನೂ ಓದಿ:ಕೊನೆಗೂ ಪ್ರಭಾಸ್-ಅನುಷ್ಕಾ ಲವ್‌ ಮ್ಯಾಟರ್‌ಗೆ ಸಿಕ್ತು ಸ್ಪಷ್ಟತೆ..! ಡಾರ್ಲಿಂಗ್-ಸ್ವೀಟಿ ಮದುವೆ..

ಪುನಿತ್‌ ರವರು ಕೂಡ ಇದೆ ಮಾರ್ಗದಲ್ಲಿ ನಡೆದು ಸಿನಿಮಾ ರಂಗದಲ್ಲಿ ಅನನ್ಯ ಸೇವೆಯನ್ನು ಸಲ್ಲಿಸಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಭಿಮಾನಿಗಳಿಗೆ ಅಪ್ಪು ಅವರ ಮೇಲಿರುವ ಪ್ರೀತಿ ಇಂದಿಗೂ ಚೂರು ಕಡಿಮೆಯಾಗಿಲ್ಲ, ಹಾಗಾಗಿ ಅವರ ಅಗಲಿಕೆಯ ನಂತರವು ಮರು ಬಿಡುಗಡೆಯಾಗುವ ಸಿನಿಮಾಗಳು ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಇದಕ್ಕೆ ಅಪ್ಪು ಸಿನಿಮಾನೇ ಸಾಕ್ಷಿ.

23 ವರ್ಷದ ಬಳಿಕ ಮರು ಬಿಡುಗಡೆಯಾಗಿರುವ "ಅಪ್ಪು" ಸಿನಿಮಾದ ಕ್ರೇಜ್ ಮುಗಲೆತ್ತರಕ್ಕೆ ಏರಿದೆ. ರಾಜ್ಯದ ಹಲವೆಡೆ ಈ ಸಿನಿಮಾದ ಪೋಸ್ಟರ್‌ ಮತ್ತು ಕಟ್ಟೌಟ್‌ಗಳಿಗೆ ಹಾಲಿನ ಅಭಿಷೇಕ ಮತ್ತು ಮೆರವಣಿಗೆ ಭರ್ಜರಿಯಾಗಿ ನಡೆಯುತ್ತಿದ್ದು, ಮೊದಲ ದಿನದ ಟಿಕೆಟ್ ಇಗಾಗಲೇ ಸೋಲ್ಡ್ಔಟ್ ಆಗಿದೆ ಎನ್ನಲಾಗುತ್ತಿದೆ.  

ಇದನ್ನೂ ಓದಿ:ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನ ಕಿಂಗ್‌ ಪಿನ್‌ ಈ "ತೆಲುಗು ಸ್ಟಾರ್‌ ನಟ"..! ಕೆಲ ನಟಿಯರೂ ಭಾಗಿ ಶಂಕೆ..

ರಾಜಧಾನಿಯಲ್ಲೂ ಸಹ ಅಪ್ಪು ರಿ-ರಿಲೀಸ್‌ ಗೆ ಒಳ್ಳೆಯ ಬೆಂಬಲ ಸಿಕ್ಕಿದೆ. ಬೆಂಗಳೂರಿನ ನರ್ತಕಿ, ವಿರೇಶ್ ಹಾಗೂ ಶ್ರೀನಿವಾಸ, ಸಿದ್ದೇಶ್ವರ ಸೇರಿದಂತೆ ಇನ್ನು ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ.  ಈಗಾಗಲೇ ಮಾರ್ನಿಂಗ್‌ ಶೋ ಶುರುವಾಗಿದ್ದು, ಬಹಳ ದಿನಗಳ ನಂತರ ತೆರೆ ಮೇಲೆ ಪವರ್‌ಸ್ಟಾರ್‌ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲ, ರಾಜ್‌ ಕುಟುಂಬವೂ ಸಹ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಈ ಸಿನಿಮಾ ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News