Rachita Ram Marriage : ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.

Rachita Ram Marriage : ನಟಿ ರಚಿತಾ ರಾಮ್ ಕನ್ನಡ ಸಿನಿರಂಗದ ಟಾಪ್ ನಟಿ. ಇವರಿಗೆ ಅಪಾರ ಅಭಿಮಾನಿ ಬಳಗವಿದೆ. ರಚಿತಾ ರಾಮ್ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿ ಪಡೆದಿದ್ದಾರೆ. 32 ನೇ ವರ್ಷ ಆದರೂ ರಚಿತಾ ರಾಮ್ ಇನ್ನೂ ಮದುವೆಯಾಗಿಲ್ಲ. ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಅದಕ್ಕೆ ರಚಿತಾ, ಯಾವಾಗ ಬೇಕಾದರೂ ಆಗಬಹುದು. ಕಾಲ ಕೂಡಿಬರಬೇಕು ಅಷ್ಟೇ. ಒಳ್ಳೆ ಹುಡುಗ ಸಿಕ್ಕಿದ ತಕ್ಷಣ ಮದುವೆಯಾಗ್ತೀನಿ ಎಂದಿದ್ದರು.
ರಚಿತಾ ರಾಮ್ ಚಂದದ ಮೂಗಿಗೆ ಮೂಗು ಬೊಟ್ಟು ಹಾಕಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆ ಸಮಯದಲ್ಲಿ ಹೆಣ್ಣು ಮಕ್ಕಳು ಮೂಗು ಬೊಟ್ಟು ಹಾಕಲು ಮೂಗು ಚುಚ್ಚಿಸಿಕೊಳ್ಳುವುದು ವಾಡಿಕೆ. ನಟಿ ರಚಿತಾ ರಾಮ್ ತಮ್ಮ ಮೂಗು ಚುಚ್ಚಿದ ಫೋಟೋವನ್ನು ಶೇರ್ ಮಾಡಿದ್ದಾರೆ.
ರಚಿತಾ ರಾಮ್ ಮೂಗು ಬೊಟ್ಟಿನ ಫೋಟೋ ಶೇರ್ ಮಾಡಿದ್ದೇ ತಡ ಅವರ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ. ಮೂಗು ಚುಚ್ಚಿಸಿಕೊಂಡ ಹಿನ್ನೆಲೆ ರಚಿತಾ ಮದುವೆ ಆಗ್ತಿದ್ದಾರಾ ಎಂಬ ಚರ್ಚೆ ಜೋರಾಗಿದೆ.
ಈ ಹಿಂದೆ ನಟಿ ಹರಿಪ್ರಿಯಾ ಸಹ ಮೊದಲು ಮೂಗುಬೊಟ್ಟಿನ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿದ್ದರು. ನಂತರ ಮದುವೆ ಆಗುವ ಸಿಹಿ ಸುದ್ದಿ ಕೊಟ್ಟಿದ್ದರು. ಈಗ ರಚಿತಾ ರಾಂ ಸಹ ಮೂಗುತಿ ಫೋಟೋ ಹಂಚಿಕೊಂಡಿದ್ದು ಶೀಘ್ರದಲ್ಲೇ ಹಸೆಮಣೆ ಏರಬಹುದಾ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.