)
Raghav juyal on Panval : ಮುಂಬೈನ ಪನ್ವಿಲ್ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ಅವರ ಬೃಹತ್ ಫಾರ್ಮ್ಹೌಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದೀಗ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ವಿಚಾರಗಳು ಬಹಿರಂಗವಾಗಿವೆ. ಇತ್ತೀಚಿಗೆ ಸಲ್ಲು ಭಾಯ್ ಫಾರ್ಮ್ ಹೌಸ್ಗೆ ಭೇಟಿ ನೀಡಿದ್ದ ಬಾಲಿವುಡ್ ನಟ ರಾಘವ್ ಜುಯಲ್ ಅಚ್ಚರಿ ವಿಚಾರಗಳನ್ನು ಬಿಚ್ಚಿಟ್ಟರು.
ಹೌದು.. ಆಗಾಗ ಸಲ್ಮಾನ್ ಖಾನ್ ಫಾರ್ಮ್ಹೌಸ್ ಸುದ್ದಿಯಲ್ಲಿರುತ್ತದೆ. ಜಾಕ್ವೆಲಿನ್ ಮತ್ತು ಇಲಿಯಾನಾ ಅವರಂತಹ ಬಾಲಿವುಡ್ ಸುಂದರಿಯರು ಈ ಫಾರ್ಮ್ಹೌಸ್ನಲ್ಲಿ ರಾತ್ರಿ ಕಳೆದ ಅನುಭವಗಳನ್ನು ಹಂಚಿಕೊಂಡಿದ್ದರು. ಇದೀಗ ನಟ ರಾಘವ್ ಜುವಾಲ್ ಭೇಟಿ ನೀಡಿದ್ದು, ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
ರಾಘವ್ ಪ್ರಕಾರ, ಸಲ್ಮಾನ್ ತುಂಬಾ ಆತಿಥ್ಯ ವಹಿಸುವ ವ್ಯಕ್ತಿ ಅಂತ ಹೇಳಿಕೊಂಡಿದ್ದಾರೆ. ಅವರ ಫಾರ್ಮ್ಹೌಸ್ಗೆ ಭೇಟಿ ನೀಡಲು ಬಂದವರನ್ನು ಅವರು ತುಂಬಾ ಸಂತೋಷದಿಂದ ನೋಡಿಕೊಳ್ಳುತ್ತಾರೆ. ಅವರು ಅತಿಥಿಗಳಿಗಾಗಿ ಇಡೀ ಫಾರ್ಮ್ಹೌಸ್ ಅನ್ನು ಸಹ ಬಿಟ್ಟುಕೊಡುತ್ತಾರೆ. ಅವರೇ ಅತಿಥಿಗಳ ಸೇವೆ ಮಾಡ್ತಾರೆ. ಫಾರ್ಮ್ಹೌಸ್ನಲ್ಲಿ ಅನೇಕ ದೊಡ್ಡ ಕೊಠಡಿಗಳಿವೆ. ಪ್ರತ್ಯೇಕ ಆಟದ ಗ್ರೌಂಡ್ ಇದೆ. ಅಷ್ಟೇ ಅಲ್ಲ, ಫಾರ್ಮ್ಹೌಸ್ ಒಳಗೆ ಒಂದು ಸ್ವೀಮ್ಮಿಂಗ್ ಪೂಲ್, ವಿಶಾಲವಾದ ಕಾಡು ಮತ್ತು ಜೌಗು ಪ್ರದೇಶವಿದೆ. 5 ಸ್ಟಾರ್ ಹೋಟೆಲ್ ಅನ್ನು ಇದು ಮೀರಿಸುತ್ತೆ ಅಂತ ರಾಘವ್ ಹೇಳಿದರು.
ಅಲ್ಲದೆ, ಆಘಾತಕಾರಿ ವಿಚಾರ ಬಿಚ್ಚಿಟ್ಟ ರಾಘವ್, ನಾನು ಸಲ್ಮಾನ್ ಅವರ ಫಾರ್ಮ್ ಹೌಸ್ಗೆ ಹೋದಾಗ, ಬೆಳಗಿನ ಜಾವ ಮೂರು ಗಂಟೆಗೆ ಅವರು ನನ್ನನ್ನು ಎಬ್ಬಿಸಿ ಕೊಟ್ಟಿಗೆಗೆ ಕರೆದೊಯ್ದರು. ಸಲ್ಮಾನ್ ಕೋರಿಕೆಯ ಮೇರೆಗೆ ನಾನು ಕುದುರೆಗಳ ಲೈಂಗಿಕ ಆಟವನ್ನು ನಾನು ನೋಡಬೇಕಾಯಿತು. ನನ್ನ ಕಣ್ಣುಗಳ ಮುಂದೆ ಕುದುರೆಗಳೇ ಅದನ್ನ ಮಾಡಿದವು. ಅದು ವಿಚಿತ್ರ ಅನುಭವ. ಇದುವರೆಗೆ ಅಂತಹ ಅನುಭವ ಆಗಿರಲಿಲ್ಲ ಎಂದು ರಾಘವ್ ಹೇಳಿಕೊಂಡರು.