ಮಾಡೆಲ್ ಜೊತೆ ಮೂರನೇ ಮದುವೆಯಾದ ರಾಹುಲ್!

    

Updated: Nov 23, 2018 , 07:13 PM IST
ಮಾಡೆಲ್ ಜೊತೆ ಮೂರನೇ ಮದುವೆಯಾದ ರಾಹುಲ್!

ನವದೆಹಲಿ: ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ಮಾಜಿ ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಮಂಗಳವಾರದಂದು ಬೆಂಗಳೂರಿನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಕಝಾಕಿಸ್ತಾನ ಬೆಡಗಿ ನಟಾಲಿಯಾ ಇಲಿನಾರನ್ನು ವಿವಾಹವಾಗಿದ್ದಾರೆ

ಬೆಂಗಳೂರಿನ ಮಲಬಿರ್ ಬೆಟ್ಟದ ದೇವಸ್ಥಾನದಲ್ಲಿ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಉಪಸ್ಥಿತಿಯಲ್ಲಿ 43 ವರ್ಷದ ರಾಹುಲ್ 27 ವರ್ಷ ವಯಸ್ಸಿನ ನಟಾಲಿಯಾಳನ್ನು ವಿವಾಹವಾದರು.ಈಗ ತಮ್ಮ ಸರಳ ಮದುವೆಯ ಬಗ್ಗೆ ಮಾತನಾಡಿದ ರಾಹುಲ್, "ನಾನು ಮದುವೆ ಸಣ್ಣ ಪ್ರಮಾಣದಲ್ಲಿರಲು ಬಯಸುತ್ತೇನೆ.ವಾಸ್ತವವಾಗಿ, ನಾನು ಈ ವಿಚಾರವಾಗಿ ಕನಿಷ್ಟ ಒಂದು ವರ್ಷದಿಂದ ಅದರ ಬಗ್ಗೆ ಮಾತನಾಡಲು ಬಯಸಿರಲಿಲ್ಲ, ಇದು ನನ್ನ ಮೂರನೇ ಮದುವೆಯಾಗಿದೆ. ಆದ್ದರಿಂದ ಜನರು ಮತ್ತೊಮ್ಮೆ ಗಾಸಿಪ್ ಮಾಡುವುದನ್ನು ನಾನು ಬಯಸುವುದಿಲ್ಲ ಎಂದು ಅವರು ತಿಳಿಸಿದರು.

ಇದಕ್ಕೂ ಮುಂಚಿತವಾಗಿ, ರಾಹುಲ್ ಮಹಾಜನ್ ಅವರು ಪೈಲಟ್ ಶ್ವೇತಾ ಸಿಂಗ್ ಮತ್ತು ರಿಯಾಲಿಟಿ ಶೋ ಸ್ಪರ್ಧಿ ದಿಮ್ಪಿ ಗಂಗೂಲಿಯವರನ್ನು ಮದುವೆಯಾಗಿದ್ದರು.