)
Raj B Shetty: ಸ್ಟಾರ್ ನಟ ರಾಜ್ ಬಿ ಶೆಟ್ಟಿ ಬಾಲ್ಯದ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ ಹೆಜ್ಜೆಹೆಜ್ಜೆಗೂ ಕಲ್ಲುಮುಳ್ಳಿನ ದಾರಿ. ಒಂದು ಹೊತ್ತಿನ ಊಟಕ್ಕೂ ಪರದಾಡಿದ ಶೆಟ್ರಿಗೆ ಬಾಲ್ಯದಲ್ಲಿ ಒಂದೇ ಒಂದು ಆಸೆ ಇತ್ತು. ಆ ಆಸೆ ಕೇಳಿದ ಶೆಟ್ರ ತಾಯಿ ಇಡೀ ರಾತ್ರಿ ಕಣ್ಣೀರು ಹಾಕುತ್ತಾರೆ. ಏನದು ಆಸೆ ಹೇಳ್ತಿವಿ ನೋಡಿ
ರಾಜ್ ಬಿ. ಶೆಟ್ಟಿ ಕನ್ನಡದ ಅದ್ಭುತ ನಟ , ನಿರ್ದೇಶಕ, ಮತ್ತು ಬರಹಗಾರ. ಅವರು 2017ರಲ್ಲಿ ತೆರೆಕಂಡ 'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ನಟನೆ ಮತ್ತು ನಿರ್ದೇಶನದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು.
ರಾಜ್ ಬಿ ಶೆಟ್ಟಿ ಅದ್ಭುತ ಕಲಾವಿದ ಅನ್ನೋಗಿಂತ ಹೆಚ್ಚಾಗಿ ಅತ್ಯಾದ್ಭುತ ವ್ಯಕ್ತಿತ್ವವಿರೋ ವ್ಯಕ್ತಿ.ಕನ್ನಡ ಅಷ್ಟೇ ಅಲ್ಲದೇ ಬೇರೆ ಭಾಷೆಗಳಲ್ಲೂ ರಾಜ್ ಬಿ ಶೆಟ್ಟಿ ಹವಾ ಜೋರಾಗೆ ಇದೆ. “ಸು ಫ್ರಮ್ ಸೊ“ ಸಿನಿಮಾ ಇಡೀ ಸಿನಿಮಾ ಇಂಡಸ್ಟ್ರಿ ಕನ್ನಡ ಸಿನಿಮಾಗಳತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿ ಭರ್ಜರಿ ಯಶಸ್ಸು ತಂದುಕೊಡ್ತು.
ರಾಜ್ ಬಿ ಶೆಟ್ಟಿ ಅವರ ಜೀವನ ಸುಖದ ಹಾಸಿಗೆ ಆಗಿರಲಿಲ್ಲ. ಬಾಲ್ಯದಿಂದಲೂ ಹೆಜ್ಜೆ ಹೆಜ್ಜೆಗೂ ಸಾವಿರ ಸಾವಿರ ಸವಾಲುಗಳಿತ್ತು. ಒಂದೊತ್ತಿನ ಊಟಕ್ಕೂ ಪರದಾಡಿದ ಪರಿಸ್ಥಿತಿ ಇತ್ತು. ಹಬ್ಬಹರಿದಿನದಲ್ಲೂ ಹಸಿವಿನಿಂದ ಮಲಗಿರೋ ದಿನಗಳಿವೆ
ಕಠಿಣ ಪರಿಸ್ಥಿತಿಯನ್ನ, ಸೋಲು ಅವಮಾನ ಎದುರಿಸಿ ಸ್ಟಾರ್ ಆಗಿ ನಿಂತ ರಾಜ್ ಬಿ ಶೆಟ್ಟಿಗೆ ಕಷ್ಟಪಟ್ಟು ಹಾರ್ಡ್ ವರ್ಕ್ ಮಾಡಿ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾ ಕೊಡಬೇಕು ಅನ್ನೋ ಮಹದಾಸೆ ಸದ್ಯಕ್ಕಿದೆ. ಟೋಬಿ ಸಿನಿಮಾ ಸೋಲು ಎಲ್ಲಾರ ಮುಖವಾಡ ಬಯಲು ಮಾಡಿ ನಮ್ಮವರು ಯಾರು ಅಂತ ಶೆಟ್ರಿಗೆ ತೋರಿಸಿದೆ
ಇಷ್ಟೆಲ್ಲ ಕಷ್ಟಪಡುತ್ತಿರೋ ಪಟ್ಟಿರೋ ಶೆಟ್ರಿಗೆ ಬಾಲ್ಯದಲ್ಲಿ ಒಂದೇ ಒಂದು ಆಸೆ ಇತ್ತು. ಅದೇನಪ್ಪ ಅಂದ್ರೆ ಒಂದು ಇಡೀ ಆಪಲ್ ತಿನ್ನೋದಕ್ಕೆ ಯಾವತ್ತೂ ಸಿಗುತ್ತೋ ಆವತ್ತು ನನ್ನ ಜೀವನ ಸಾರ್ಥಕ ಅಂದುಕೊಂಡು ಅಮ್ಮನ ಬಳಿ ಹೇಳುದ್ರಂತೆ ಅಮ್ಮ ನನ್ನ ಜೀವನದ ಆಸೆ ಒಂದು ಫುಲ್ ಆಪಲ್ ತಿನ್ನೋದು ಅಂತ. ಮಗನ ಈ ಮಾತು ಕೇಳಿದ್ದ ಶೆಟ್ರ ತಾಯಿ ಕಣ್ಣೀರು ಹಾಕಿದ್ರಂತೆ
ಬಾಲ್ಯದ ಬಡತನ, ಹಸಿವು ಏನೆಲ್ಲಾ ಯೋಚಿಸುವಂತೆ ಮಾಡುತ್ತೆ ಅಂತ. ಏನೇ ಆಗಲಿ ಇವತ್ತು ರಾಜ್ ಬಿ ಶೆಟ್ರು ಸ್ಟಾರ್ ನಿಮ್ಮ ಬಣ್ಣದ ಬದುಕು ಯಾವತ್ತೂ ವರ್ಣರಂಜಿತವಾಗಿರಲಿ ಸರ್ ಜೀ ಕನ್ನಡ ನ್ಯೂಸ್ ಕಡೆಯಿಂದಲೂ ನಿಮಗೆ ಅಲ್ ದಿ ಬೆಸ್ಟ್