Unheard Love Story: ಈ ಕನ್ನಡ ನಟಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ರಾಜ್ ಠಾಕ್ರೆ..! 30 ವರ್ಷಗಳ ಬಳಿಕ ಭೇಟಿ,! ಹೇಗಿತ್ತು ಆ ಸುಮಧುರ ಕ್ಷಣ..?

ಮರಾಠಿ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಇಬ್ಬರೂ ಆಗಮಿಸುತ್ತಿದ್ದಾರೆ.ಇದರಲ್ಲಿ ನಟಿ ಸೊನಾಲಿ ಬೇಂದ್ರೆ ಮುಂದೆ ಸಾಗುತ್ತಿದ್ದಾರೆ, ಅವರ ಹಿಂದೆ ಬರುತ್ತಿದ್ದ ರಾಜ್ ಠಾಕ್ರೆ ಅವರಿಗೆ ಬೇಗ ಬೇಗ ಬರುವಂತೆ ಸೊನಾಲಿ ಕಣ್ಣು ಸನ್ನೆ ಮಾಡುತ್ತಿರುವ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ.

Written by - Manjunath Naragund | Last Updated : Mar 5, 2025, 02:24 PM IST
  • ಸುಮಾರು 30 ವರ್ಷಗಳ ನಂತರ ಮರಾಠಿ ಭಾಷಾ ದಿನಾಚರಣೆಯಂದು ಪರಸ್ಪರ ಭೇಟಿಯಾದ ರಾಜ್ ಠಾಕ್ರೆ-ಸೊನಾಲಿ ಬೇಂದ್ರೆ ಅವರ ಭೇಟಿಯ ಕ್ಷಣ ನಿಜಕ್ಕೂ ಮಧುರಮಯವಾಗಿತ್ತು,
  • ಇಬ್ಬರೂ ಕಣ್ಣುಗಳಲ್ಲೇ ಮಾತನಾಡುವ ಪರಿ ವಿಡಿಯೋ ದಲ್ಲಿ ಸೆರೆಯಾಗಿದೆ.
  • ಈಗ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಸೊನಾಲಿ ಬೇಂದ್ರೆ ರಾಜ್ ಠಾಕ್ರೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
Unheard Love Story: ಈ ಕನ್ನಡ ನಟಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ರಾಜ್ ಠಾಕ್ರೆ..! 30 ವರ್ಷಗಳ ಬಳಿಕ ಭೇಟಿ,! ಹೇಗಿತ್ತು ಆ ಸುಮಧುರ ಕ್ಷಣ..?

ಮುಂಬೈ: ಕನ್ನಡದಲ್ಲಿ ಪ್ರೀತ್ಸೆ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಸೋನಾಲಿ ಬೇಂದ್ರೆ ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನಾ ನಾಯಕ ರಾಜ್ ಠಾಕ್ರೆ ಈಗ 30 ವರ್ಷಗಳ ನಂತರ ಮರಾಠಿ ಭಾಷಾ ದಿನಾಚರಣೆಯಂದು ಪರಸ್ಪರ ಭೇಟಿಯಾಗಿದ್ದಾರೆ.ಈಗ ಅವರ ಈ ಭೇಟಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Add Zee News as a Preferred Source

ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದೇನು? 

ಮರಾಠಿ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಇಬ್ಬರೂ ಆಗಮಿಸುತ್ತಿದ್ದಾರೆ.ಇದರಲ್ಲಿ ನಟಿ ಸೊನಾಲಿ ಬೇಂದ್ರೆ ಮುಂದೆ ಸಾಗುತ್ತಿದ್ದಾರೆ, ಅವರ ಹಿಂದೆ ಬರುತ್ತಿದ್ದ ರಾಜ್ ಠಾಕ್ರೆ ಅವರಿಗೆ ಬೇಗ ಬೇಗ ಬರುವಂತೆ ಸೊನಾಲಿ ಕಣ್ಣು ಸನ್ನೆ ಮಾಡುತ್ತಿರುವ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ.

ಹುಚ್ಚು ಪ್ರೇಮಿಗಳಾಗಿದ್ದ ಸೊನಾಲಿ ಬೇಂದ್ರೆ-ರಾಜ್ ಠಾಕ್ರೆ..!

ಬಹುತೇಕ ಜನರಿಗೆ ಸೊನಾಲಿ ಬೇಂದ್ರೆ ಹಾಗೂ ರಾಜ್ ಠಾಕ್ರೆ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ಸಂಗತಿ ತಿಳಿದಿರಲಿಕ್ಕಿಲ್ಲ, ಆದರೆ ಇಬ್ಬರೂ ಮದುವೆಯಾಗಲು ಸಹ ಬಯಸಿದ್ದರು ಎನ್ನಲಾಗಿದೆ.ಬಾಲಿವುಡ್ ನಲ್ಲಿ ಸೊನಾಲಿ ಕರಿಯರ್ ಬೆಳೆಯಲು ರಾಜ್ ಠಾಕ್ರೆ ಸಾಕಷ್ಟು ಸಹಾಯ ಮಾಡಿದ್ದರು.ಯಾವಾಗ ಇವರಿಬ್ಬರ ಪ್ರೀತಿಯ ವಿಷಯ ರಾಜ್ ಅವರ ಚಿಕ್ಕಪ್ಪ ಬಾಳ್ ಠಾಕ್ರೆ ಅವರಿಗೆ ತಲುಪಿತೋ ಆಗ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸೊನಾಲಿ ಬೇಂದ್ರೆಯಿನ ದೂರವಿರಲು ಮನವಿ ಮಾಡಿದರು.ರಾಜ್ ಠಾಕ್ರೆ ಆಗಲೇ ಶರ್ಮಿಳಾ ಅವರನ್ನು ಮದುವೆಯಾಗಿದ್ದರಿಂದ ಇನ್ನೊಂದು ಮದುವೆ ರಾಜಕೀಯ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಬಾಳ್ ಠಾಕ್ರೆಯವರ ನಿಲುವಾಗಿತ್ತು. ಹಾಗಾಗಿ ಅನಿವಾರ್ಯವಾಗಿ ಅವರು ಸೊನಾಲಿ ಬೇಂದ್ರೆಯಿಂದ ದೂರಾದರು.

ಸುಮಾರು 30 ವರ್ಷಗಳ ಕಾಲ ಭೇಟಿಯಾಗದ ಸೊನಾಲಿ ಬೇಂದ್ರೆ-ರಾಜ್ ಠಾಕ್ರೆ..!

ಸುಮಾರು 30 ವರ್ಷಗಳ ನಂತರ ಮರಾಠಿ ಭಾಷಾ ದಿನಾಚರಣೆಯಂದು ಪರಸ್ಪರ ಭೇಟಿಯಾದ ರಾಜ್ ಠಾಕ್ರೆ-ಸೊನಾಲಿ ಬೇಂದ್ರೆ ಅವರ ಭೇಟಿಯ ಕ್ಷಣ ನಿಜಕ್ಕೂ ಮಧುರಮಯವಾಗಿತ್ತು, ಇಬ್ಬರೂ ಕಣ್ಣುಗಳಲ್ಲೇ ಮಾತನಾಡುವ ಪರಿ ವಿಡಿಯೋ ದಲ್ಲಿ ಸೆರೆಯಾಗಿದೆ. ಈ ಮಧುರ ಕ್ಷಣವನ್ನು ನೋಡಿದ ನೆಟ್ಟಿಗರು ನಿಜಕ್ಕೂ ಫಿದಾ ಆಗಿದ್ದಾರೆ.ಈಗ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಸೊನಾಲಿ ಬೇಂದ್ರೆ ರಾಜ್ ಠಾಕ್ರೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಅಷ್ಟೇ ಅಲ್ಲದೆ ಅವರು ಕಾರ್ಯಕ್ರಮದ ಕೆಲವು ಫೋಟೋಗಳನ್ನು ಹಂಚಿಕೊಂಡು 'ಮರಾಠಿ ಜಗತ್ತಿನ ಮಹಾನ್ ವ್ಯಕ್ತಿಗಳೊಂದಿಗೆ ಈ ವಿಶೇಷ ಕ್ಷಣವನ್ನು ಹಂಚಿಕೊಳ್ಳಲು ನನಗೆ ಅವಕಾಶ ನೀಡಿದಕ್ಕಾಗಿ ರಾಜ್ ಠಾಕ್ರೆ ಅವರಿಗೆ ಧನ್ಯವಾದಗಳು.ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ, ಮರಾಠಿ ಸಾಹಿತ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ.ಮರಾಠಿ ಪುಸ್ತಕ ಪ್ರದರ್ಶನಕ್ಕೆ ಭೇಟಿ ನೀಡಿ ಮತ್ತು ಭಾಷೆಯ ಶ್ರೀಮಂತಿಕೆಯನ್ನು ಅನುಭವಿಸಿ' ಎಂದು ಅವರು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Trending News