Ray Stevenson : ವಿಶ್ವ ಬ್ಲಾಕ್ಬಸ್ಟರ್ ಹಿಟ್ ಚಲನಚಿತ್ರ RRR ನಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ರೇ ಸ್ಟೀವನ್ಸನ್ (58) ನಿಧನರಾಗಿದ್ದಾರೆ. ಅವರ ಸಾವಿಗೆ ಅನಾರೋಗ್ಯವೇ ಕಾರಣ ಎಂದು ಇಟಾಲಿಯನ್ ಸುದ್ದಿ ಪತ್ರಿಕೆ ರಿಪಬ್ಲಿಕಾ ಬಹಿರಂಗಪಡಿಸಿದೆ. ಇಟಲಿಯ ಇಶಿಯಾ ಪೆನಿನ್ಸುಲಾದಲ್ಲಿ 'ಕ್ಯಾಸಿನೊ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅಸ್ವಸ್ಥರಾದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅದ್ರೆ, ಚಿಕಿತ್ಸೆ ಫಲಕಾರಿಯಾಗದೆ ಮೇ 21 ರಂದು ಅವರು ನಿಧನರಾಗಿದ್ದು, ವಿಚಾರ ಈಗ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಈ ಕುರಿತು RRR ತಂಡ ಕೂಡ ಸಂತಾಪ ಸೂಚಿಸಿದೆ. 'ನೀವು ಇನ್ನಿಲ್ಲ ಎಂದು ನಮಗೆ ಆಘಾತವಾಗಿದೆ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ನೆಲೆಸಿರುತ್ತೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ.. ಸರ್ ಸ್ಕಾಟ್..'' ಎಂದು RRR ತಂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದೆ. ಅಲ್ಲದೆ, 'ನಾವು ಈ ನಿರ್ಣಾಯಕ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ 56 ವರ್ಷ. ಆದರೆ ಈ ಸಾಹಸ ಮಾಡಲು ಹಿಂಜರಿಯಲಿಲ್ಲ. ರೇ ಸ್ಟೀವನ್ಸನ್ ನಮ್ಮ ಸಿನಿಮಾದ ಭಾಗವಾಗಿದ್ದನ್ನು ನಾವು ಯಾವಾಗಲೂ ಗೌರವಿಸುತ್ತೇವೆ....' ಎಂದು ಆರ್‌ಆರ್‌ಆರ್ ಸಿನಿಮಾದ ದೃಶ್ಯವೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ `ಪಿಂಕಿ ಎಲ್ಲಿ' ಜೂನ್ 2ರಂದು ತೆರೆಗೆ


ಅಲ್ಲದೆ, ನಿರ್ದೇಶಕ ರಾಜಮೌಳಿ ಸಹ ಟ್ವೀಟ್ ಸಂತಾಪ ಸೂಚಿಸಿದ್ದು, 'ಶಾಕಿಂಗ್.. ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ರೇ ಸಾಕಷ್ಟು ಶಕ್ತಿ ಮತ್ತು ಚೈತನ್ಯವನ್ನು ಸೆಟ್‌ಗೆ ತಂದವರು. ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ. ಇಂತಹ ಸಮಯದಲ್ಲಿ ಅವರ ಕುಟುಂಬದ ಸದಸ್ಯರು ಧೈರ್ಯದಿಂದ ಇರಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿʼ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.  


Rosie Moore : ಪ್ರಪಂಚದ ʼಹಾಟ್‌ ಸೈನ್ಸಿಸ್ಟ್‌ʼ ರೋಸಿ ಮೂರ್‌..! ಕಾಡು ಪ್ರಾಣಿಗಳೇ ಈಕೆಯ ಫೇವರಿಟ್


2000 ರಿಂದ, ಅವರು ಹಾಲಿವುಡ್ ಚಲನಚಿತ್ರಗಳಲ್ಲಿ ಅವಕಾಶಗಳನ್ನು ಪಡೆದರು. ಆಂಟೊಯಿನ್ ಫುಕ್ವಾ ಅವರ 2004 ರ ಸಾಹಸ ಚಿತ್ರ 'ಕಿಂಗ್ ಆರ್ಥರ್' ಅವರ ಮೊದಲ ಪ್ರಮುಖ ಚಲನಚಿತ್ರವಾಗಿದೆ. RRR ಚಿತ್ರದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಸ್ಟೀವ್ ಬಕ್ಸ್‌ಟನ್ ಪಾತ್ರವು ಪ್ರೇಕ್ಷಕರನ್ನು ಮೆಚ್ಚಿಸಿತು. ವಿಲನ್ ಆಗಿ ಅವರ ನಟನೆಯನ್ನು ಪ್ರೇಕ್ಷಕರು ಅಷ್ಟು ಸುಲಭವಾಗಿ ಮರೆಯುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ