ಆ ರಾತ್ರಿ ನಟಿ ಶ್ರೀದೇವಿ ಮನೆಗೆ 'I Love You' ಎಂದು ಪ್ರೊಪೋಸ್ ಮಾಡಲು ಹೋಗಿದ್ದ ರಜನಿಕಾಂತ್ ವಾಪಸ್ ಬಂದಿದ್ದೇಕೆ?

ಶ್ರೀದೇವಿ 80 ರ ದಶಕದಲ್ಲಿ ತಮ್ಮ ಅಭಿನಯ, ನೃತ್ಯ, ಸೌಂದರ್ಯದಿಂದ ಎಲ್ಲರನ್ನು ಮೋಡಿ ಮಾಡಿದ್ದರು, ಹೀಗಾಗಿ ಖ್ಯಾತ ನಟರು ಸಹ ಆಕೆಯ ಜೊತೆ ನಟಿಸಲು ಹಾತೊರೆಯುತ್ತಿದ್ದರು. ಅದರಲ್ಲೂ ಶ್ರೀದೇವಿ ಮತ್ತು ರಜನಿಕಾಂತ್ ಜೋಡಿಯಂತೂ ಬೆಳ್ಳಿ ಪರದೆ ಮೇಲೆ ಹಿಟ್ ಜೋಡಿ ಎಂದೇ ಖ್ಯಾತಿಯಾಗಿತ್ತು. 

Written by - Manjunath Naragund | Last Updated : Mar 3, 2025, 09:11 AM IST
  • ಇಬ್ಬರು ನಟ ನಟಿಯರ ಪ್ರೀತಿ ಕಡಿಮೆಯಾದರೂ ಸಹ ಅವರ ಸ್ನೇಹ ಮಾತ್ರ ಹಾಗೆ ಉಳಿಯಿತು,
  • ರಜನಿಕಾಂತ್ ತಮ್ಮ ವೈಯಕ್ತಿಕ ಫೋನ್ ಸಂಖ್ಯೆಯನ್ನು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ.
  • ಅವರ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದ ಅದೃಷ್ಟವಂತರಲ್ಲಿ ಶ್ರೀದೇವಿ ಕೂಡ ಒಬ್ಬರು
ಆ ರಾತ್ರಿ ನಟಿ ಶ್ರೀದೇವಿ ಮನೆಗೆ 'I Love You' ಎಂದು ಪ್ರೊಪೋಸ್ ಮಾಡಲು ಹೋಗಿದ್ದ ರಜನಿಕಾಂತ್ ವಾಪಸ್ ಬಂದಿದ್ದೇಕೆ?

ಭಾರತೀಯ ಚಿತ್ರರಂಗದಲ್ಲಿ ರಜನಿಕಾಂತ್ ಮತ್ತು ಶ್ರೀದೇವಿ ತಮ್ಮ ವಿಭಿನ್ನ ನಟನೆಯಿಂದ ಸೂಪರ್ ಸ್ಟಾರ್ ಪಟ್ಟವನ್ನು ಗಳಿಸಿಕೊಂಡ ನಟ ನಟಿಯರು, ಅದರಲ್ಲಿ ನಟಿ ಶ್ರೀದೇವಿಯವರ ಕಾಲ್ ಶೀಟ್ ಸಿಗುವುದು ನಿಜಕ್ಕೂ ಅಷ್ಟು ಸುಲಭವಾಗಿರಲಿಲ್ಲ, ಅಷ್ಟರ ಮಟ್ಟಿಗೆ ಅವರು ಲೇಡಿ ಸೂಪರ್ ಸ್ಟಾರ್ ಆಗಿ ಬೆಳ್ಳಿ ಪರದೆಯ ಮೇಲೆ ಮಿಂಚಿದ್ದರು.ಆದರೆ ಇಂತಹ ನಟಿ ಕೇವಲ 54 ನೇ ವಯಸ್ಸಿನಲ್ಲಿ ದುಬೈ ನಲ್ಲಿ ಅನುಮಾಸ್ಪಾದ ಸಾವಿಗೆ ಕಾರಣವಾಗಿದ್ದು ದುರಂತದ ಸಂಗತಿ ಎಂದು ಹೇಳಬಹುದು.

Add Zee News as a Preferred Source

ಶ್ರೀದೇವಿ 80 ರ ದಶಕದಲ್ಲಿ ತಮ್ಮ ಅಭಿನಯ, ನೃತ್ಯ, ಸೌಂದರ್ಯದಿಂದ ಎಲ್ಲರನ್ನು ಮೋಡಿ ಮಾಡಿದ್ದರು, ಹೀಗಾಗಿ ಖ್ಯಾತ ನಟರು ಸಹ ಆಕೆಯ ಜೊತೆ ನಟಿಸಲು ಹಾತೊರೆಯುತ್ತಿದ್ದರು. ಅದರಲ್ಲೂ ಶ್ರೀದೇವಿ ಮತ್ತು ರಜನಿಕಾಂತ್ ಜೋಡಿಯಂತೂ ಬೆಳ್ಳಿ ಪರದೆ ಮೇಲೆ ಹಿಟ್ ಜೋಡಿ ಎಂದೇ ಖ್ಯಾತಿಯಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಅವರಿಬ್ಬರು 19 ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದೆ ಇದಕ್ಕೆ ಸಾಕ್ಷಿ ಎಂದು ಹೇಳಬಹುದು.

ರಜನಿಕಾಂತ್-ಶ್ರೀದೇವಿ ಪ್ರೇಮ ಕಥೆ:

1976 ರಲ್ಲಿ ಕೆ. ಬಾಲಚಂದರ್  ನಿರ್ದೇಶನದ ಮೂಂಡ್ರು ಮುಡಿಚು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ ರಜನಿಕಾಂತ್ ಮತ್ತು ಶ್ರೀದೇವಿ ಸಿನಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.ಅಚ್ಚರಿ ಏನೆಂದರೆ ಈ ಚಿತ್ರದಲ್ಲಿ  ಶ್ರೀದೇವಿ ರಜನಿಕಾಂತ್ ಅವರ ಮಲತಾಯಿಯಾಗಿ ನಟಿಸಿದ್ದಾರೆ. ಶ್ರೀದೇವಿ ರಜನಿಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವರು. ಇದೆ ವೇಳೆ ಶ್ರೀದೇವಿ ಚಿಕ್ಕವಳಿದ್ದಾಗ ರಜನಿ ತುಂಬಾ ಕಾಳಜಿ ವಹಿಸುತ್ತಿದ್ದರು.ಇನ್ನೊಂದೆಡೆ ಇವರಿಬ್ಬರ ಕೆಮಿಸ್ಟ್ರಿಯಲ್ಲಿ ಬಿಡುಗಡೆಯಾದ 19 ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿದ್ದವು. ಕಾಲಾಂತರದಲ್ಲಿ ರಜನಿಕಾಂತ್ ನಟಿ ಶ್ರೀದೇವಿ ಅವರನ್ನು ಮೌನವಾಗಿ ಪ್ರೀತಿಸತೋಡಗಿದರು.ಅಷ್ಟೇ ಅಲ್ಲದೆ ಶ್ರೀದೇವಿಯನ್ನು ಅವರು ಮದುವೆಯಾಗಲು ಸಹ ಇಚ್ಚಿಸಿದ್ದರು.ಒಂದು ದಿನ ಅವರ ಮನೆಗೆ ಗೃಹ ಪ್ರವೇಶ ಸಮಾರಂಭ ಇದ್ದಾಗ ಅವರಿಗೆ ಪ್ರೊಪೋಸ್ ಮಾಡಲು ಹೋಗಿದ್ದರು, ಆಗ ಅವರು ಅಲ್ಲಿಗೆ ಹೋಗುತ್ತಿದ್ದಂತೆ, ವಿದ್ಯುತ್ ಇದ್ದಕ್ಕಿದ್ದಂತೆ ಕಡಿತಗೊಂಡಿತು. ಆಗೆಲ್ಲಾ ಕತ್ತಲೆಯಾಗಿತ್ತು. ಈ ಸಂದರ್ಭವನ್ನು ರಜನಿಕಾಂತ್ ಕೆಟ್ಟ ಶಕುನ ಎಂದು ಭಾವಿಸಿ ತಮ್ಮ ಮದುವೆ ಪ್ರಸ್ತಾಪ ಮಾಡದೆ ಹಾಗೆಯೇ ಹಿಂತಿರುಗಿದರು.

ಇಬ್ಬರು ನಟ ನಟಿಯರ ಪ್ರೀತಿ ಕಡಿಮೆಯಾದರೂ ಸಹ ಅವರ ಸ್ನೇಹ ಮಾತ್ರ ಹಾಗೆ ಉಳಿಯಿತು, ರಜನಿಕಾಂತ್ ತಮ್ಮ ವೈಯಕ್ತಿಕ ಫೋನ್ ಸಂಖ್ಯೆಯನ್ನು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಅವರ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದ ಅದೃಷ್ಟವಂತರಲ್ಲಿ ಶ್ರೀದೇವಿ ಕೂಡ ಒಬ್ಬರು.ರಾಣಾ ಚಿತ್ರೀಕರಣದ ಸಮಯದಲ್ಲಿ ರಜನಿಕಾಂತ್ ಅನಾರೋಗ್ಯಕ್ಕೆ ಒಳಗಾದಾಗ ಅವರು ಏಳು ದಿನಗಳ ಕಾಲ ಅವರಿಗಾಗಿ ಉಪವಾಸ ಮಾಡಿದರು. ಅಷ್ಟೇ ಅಲ್ಲದೆ ಅವರು ಗುಣಮುಖರಾಗಲು ಶಿರಡಿ ಸಾಯಿಬಾಬಾ ಬಳಿ ಪ್ರಾರ್ಥಿಸಿದರು.

ಇಂತಹ ನಟ ತಮ್ಮ ನೆಚ್ಚಿನ ಗೆಳತಿ ಅಕಾಲಿಕವಾಗಿ ನಿಧನರಾದಾಗ ಪತ್ನಿ ಲತಾ ರಂಗಾಚಾರಿ ಅವರೊಂದಿಗೆ ಅವರ ವಿವಾಹ ವಾರ್ಷಿಕೋತ್ಸವವಿತ್ತು, ಪ್ರತಿ ವರ್ಷ ಅವರು ಈ ಸಂದರ್ಭವನ್ನು ಒಟ್ಟಿಗೆ ಆಚರಿಸುತ್ತಿದ್ದರು. ಆದರೆ ಗೆಳತಿ ಶ್ರೀದೇವಿಗಾಗಿ ಅವರು ತಮ್ಮ ಹಳೆಯ ಸಂಪ್ರದಾಯವನ್ನು ತ್ಯಜಿಸಿದರು.ಈ ನಡೆ ಕೊನೆವರೆಗೂ ರಜನಿಕಾಂತ್ ಮತ್ತು ಶ್ರೀದೇವಿ ನಡುವೆ ಇದ್ದ ಪರಸ್ಪರ ಗೌರವ ಪ್ರೀತಿಯನ್ನು ಸಾರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

About the Author

Trending News