)
Rajinikanth Brother Sathyanarayana : ಬೆಂಗಳೂರಿನ ಹೊಸಗೆರೆಹಳ್ಳಿಯಲ್ಲಿ ವಾಸಿಸುತ್ತಿರುವ ಸೂಪರ್ಸ್ಟಾರ್ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ತಕ್ಷಣವೇ ಅವರ ಕುಟುಂಬವು ಅವರನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗಾಗಿ ದಾಖಲಿಸಿದೆ. ತೀವ್ರ ನಿಗಾ ಘಟಕದಲ್ಲಿ ಸತ್ಯನಾರಾಯಣ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಸತ್ಯನಾರಾಯಣ ಅವರಿಗೆ ಈಗ 84 ವರ್ಷ. ಇನ್ನು ಈ ಸುದ್ದಿ ಕೇಳುತ್ತಲೇ ನಟ ರಜನಿಕಾಂತ್ ಅವರು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದಾರೆ.. ಅಲ್ಲದೆ, ಸೂಪರ್ಸ್ಟಾರ್ ಅಭಿಮಾನಿಗಳು ಈ ವಿಚಾರ ತಿಳಿದು ಆತಂಕಗೊಂಡಿದ್ದು, ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಸಹೋದರನನ್ನು ಭೇಟಿ ಮಾಡುತ್ತಿರುವ ವಿಡಿಯೋವೊಂದು ಪ್ರಸ್ತುತ ವೈರಲ್ ಆಗುತ್ತಿದೆ. ತಲೈವಾಗೆ ತಮ್ಮ ಅಣ್ಣನ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ಹಲವು ವೇದಿಕೆಗಳಲ್ಲಿ ಸತ್ಯನಾರಾಯಣ ಅವರು ನನಗೆ ಅಣ್ಣನಲ್ಲ ತಂದೆ ಎಂದು ಹೇಳಿಕೊಂಡಿದ್ದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.