Rajinikanth Aishwarya Rai: 90ರ ದಶಕದ ಬ್ಲಾಕ್‌ಬಸ್ಟರ್ ಚಿತ್ರ ಪಡಯಪ್ಪದ ಇದೇ ಡಿಸೆಂಬರ್ ೧೨ರಂದು ಅದ್ಧೂರಿಯಾಗಿ ತೆರೆಕಾಣಲು ಸಿದ್ಧವಾಗಿದೆ. ಪಡಯಪ್ಪ ಸಿನಿಮಾದಲ್ಲಿ ನೀಲಾಂಬರಿ ಪಾತ್ರ ಬಹಳ ವಿಶಿಷ್ಟವಾದುದು. ಕಣ್ಣಿನಲ್ಲೇ ಶಕ್ತಿ ತೋರಬೇಕಾದ, ಗತ್ತು ಗೈರತ್ತುಗಳನ್ನು ಎತ್ತೆತ್ತಿ ತೋರಬೇಕಾದ ಪಾತ್ರ. ಈ ಪಾತ್ರ ಕ್ಲಿಕ್ ಆದರೆ ಸಿನಿಮಾ ಹಿಟ್ ಆಗುತ್ತೆ ಎನ್ನುವ ಭರವಸೆ ಇತ್ತು. ಅದರಿಂದಾಗಿ ಯಾರನ್ನು ಹೀರೋಯಿನ್ ಮಾಡಬೇಕು ಎಂಬ ಬಗ್ಗೆ ಚಿತ್ರತಂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿತ್ತಂತೆ. ಈ ಬಗ್ಗೆ ಮಾತನಾಡಿರುವ ಸೂಪರ್‌ಸ್ಟಾರ್ ರಜನಿಕಾಂತ್ ಈ ಚಿತ್ರಕ್ಕೆ ರಮ್ಯಾ ಕೃಷ್ಣನ್ ಮೊದಲ ಆಯ್ಕೆಯಾಗಿರಲಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಮೊದಲಿಗೆ ಒಪ್ಪಿಕೊಂಡಿದ್ದ ಐಶ್ವರ್ಯ ರೈ ನಂತರ ಯದ್ವಾತದ್ವ ಬ್ಯುಸಿ ಇದ್ದುದ್ದರಿಂದ ಆಗಲ್ಲ ಎಂದು ಬಿಟ್ಟರು. ಐಶ್ವರ್ಯ ರೈಗಾಗಿ ಎರಡು ವರ್ಷ ಬೇಕಾದರೂ ಕಾಯಲು ಚಿತ್ರತಂಡ ಸಿದ್ಧವಿತ್ತು. ಅದಕ್ಕೂ ಮೊದಲು ಅತಿಲೋಕ ಸುಂದರಿ ಶ್ರೀದೇವಿಯಿಂದ ಹಿಡಿದು ಮೋಹಕ ನಟಿ ಮಾಧುರಿ ದೀಕ್ಷಿತ್‌ವರೆಗೆ ಹಲವರ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದರೆ ಕಡೆಗೂ ಐಶ್ವರ್ಯ ರೈ ಪಡೆಯಪ್ಪದಲ್ಲಿ ನಾಯಕಿಯಾಗಲು ಒಪ್ಪಲಿಲ್ಲ ಎಂದು ರಜನಿಕಾಂತ್ ತಿಳಿಸಿದ್ದಾರೆ.
ಐಶ್ವರ್ಯ ರೈ ಜಾಗಕ್ಕೆ ಯಾರನ್ನು ತರಬೇಕು ಎಂಬ ಜಿಜ್ಞಾಸೆ ಶುರುವಾಯಿತು. ಮತ್ತೆ ನಟಿಯರ ತಲಾಶ್ ನಡೆಯಿತು. ಆಗ ಆಯ್ಕೆಯಾದವರೇ ಮೊತ್ತೊಬ್ಬ ಸೂಪರ್ ಡೂಪರ್ ಹಿಟ್ ನಟಿ ರಮ್ಯಾ ಕೃಷ್ಣನ್. ರಮ್ಯಾ ಕೃಷ್ಣನ್ ಹೆಸರು ಸೂಚಿಸಿದವರು ನಿರ್ದೇಶಕ ಕೆ.ಎಸ್. ರವಿಕುಮಾರ್. ಅದಾದ ಮೇಲೆ ರಮ್ಯಾ ಕೃಷ್ಣನ್ ನೀಲಾಂಬರಿ ಪಾತ್ರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು ಎಂದು ರಜನಿಕಾಂತ್ ಕೊಂಡಾಡಿದ್ದಾರೆ.
ಇದನ್ನೂ ಓದಿ- ಡಿಸೆಂಬರ್ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ತೆರೆಗೆ.
ನಟ ರಜನಿಕಾಂತ್ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕರು ಕೂಡ ನೀಲಾಂಬರಿ ಪಾತ್ರ ಹಿಟ್ ಆದರೆ ಸಿನಿಮಾವೂ ಹಿಟ್ ಆಗುತ್ತದೆ ಎಂದುಕೊಂಡಿದ್ದು ಕಡೆಗೂ ಸುಳ್ಳಾಗಲಿಲ್ಲ. ನೀಲಾಂಬರಿ ಪಾತ್ರವೂ ಹಿಟ್ ಆಯಿತು, ಪಡೆಯಪ್ಪವೂ ಹಿಟ್ ಆಯಿತು. ಐಶ್ವರ್ಯ ರೈ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ರಜನಿಕಾಂತ್ ನಂತರ ವೈಜ್ಞಾನಿಕ ಕಾಲ್ಪನಿಕ ಚಿತ್ರ ಎಂಧಿರನ್ ನಲ್ಲಿ ಒಟ್ಟಾಗಿ ನಟಿಸಿದರು.









