ತಮ್ಮ ಹೆಸರು ಬದಲಾಯಿಸಿಕೊಂಡರೆ ಅದೃಷ್ಟ ಬದಲಾಗುತ್ತದೆ ಎನ್ನುವ ನಂಬಿಕೆ ಸಿನಿರಂಗದಲ್ಲಿ ಸಾಮಾನ್ಯವಾಗಿದೆ. ಹೀಗೆ ಅನೇಕ ಹೆಸರಾಂತ ನಟ-ನಟಿಯರು ತಮ್ಮ ಹೆಸರುಗಳನ್ನು ಬದಲಿಸಿಕೊಂಡ ಉದಾಹರಣೆಗಳಿವೆ. ಅದೇ ರೀತಿ ಡಾ.ರಾಜ್‌ ಕುಟುಂಬದಲ್ಲಿಯೂ ಕೂಡ ಈ ಪದ್ಧತಿಯನ್ನು ನಾವು ಕಾಣಬಹುದು. ನಟ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ ಯುವ ರಾಜ್‌ಕುಮಾರ್ ಅವರ ಬಾಲ್ಯದ ಹೆಸರು ಗುರು ರಾಜ್‌ಕುಮಾರ್‌. ಅಷ್ಟಕ್ಕೂ ಗುರು ಇದ್ದ ಜಾಗಕ್ಕೆ ಯುವ ಅನ್ನೋ ಹೆಸರು ಎಂಟ್ರಿಯಾಗಿದ್ದೇಕೆ ಗೊತ್ತಾ? ಆ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಅಪ್ಪು ಅವರ ನಿನ್ನೆಂದಲೇ ಸಿನಿಮಾದ ಮೂಲಕ ಹೊಂಬಾಳೆ ಫಿಲ್ಮ್ಸ್ ಲಾಂಚ್ ಆಗಿತ್ತು. ಇದೀಗ ಪುನೀತ್ ಅಣ್ಣನ ಮಗ ಯುವ ರಾಜ್‌ಕುಮಾರ್ ಲಾಂಚ್ ಮಾಡುವ ಮೂಲಕ ಅರ್ಥಪೂರ್ಣ ಮುನ್ನುಡಿ ಬರೆದಿದೆ. ಪುನೀತ್ ರಾಜ್​ಕುಮಾರ್​ ಮತ್ತು ಸಂತೋಷ್​ ಆನಂದ್ ರಾಮ್​ ಅವರು ಕಾಂಬಿನೇಷನ್​ನಲ್ಲಿ ರಾಜಕುಮಾರ, ಯುವರತ್ನ ಸಿನಿಮಾ ಮೂಡಿಬಂದಿದ್ದವು. ಆ ಎರಡೂ ಸಿನಿಮಾಗಳಿಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿತ್ತು. ಇದೀಗ ಅಪ್ಪು ಸೋದರ ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರನಿಗೆ ಸಿನಿಮಾ ಮಾಡಲು ವಿಜಯ್‌ ಕಿರಗಂದೂರು ಸಜ್ಜಾಗಿದ್ದಾರೆ. ಈ ಬೆನ್ನಲ್ಲೇ ದೊಡ್ಮನೆಯ ಮತ್ತೊಂದು ಕುಡಿಯ ವಿಚಾರ ಮುನ್ನೆಲೆಗೆ ಬಂದಿದೆ. 


ಇದನ್ನೂ ಓದಿ: ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌! ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?


ರಾಜ್ ಫ್ಯಾಮಿಲಿಯಲ್ಲಿ ಎಲ್ಲರೂ ಸಿನಿಮಾ ರಂಗಕ್ಕಾಗಿ ಹೆಸರು ಬದಲಿಸಿಕೊಂಡಿದ್ದಾರೆ. ಹೆಸರು ಬದಲಿಸಿಕೊಂಡರೆ ಅದೃಷ್ಟ ಖುಲಾಯಿಸೋದು ಗ್ಯಾರಂಟಿ ಅನ್ನೋದು ರಾಜ್ ಕುಟುಂಬದಲ್ಲಿರುವ ನಂಬಿಕೆ. ಅಣ್ಣಾವ್ರ ಮುದ್ದಿನ ಮೊಮ್ಮಗ ಗುರು ರಾಜ್‍ಕುಮಾರ್ ಅವರ ಹೆಸರನ್ನು ಯವ ರಾಜ್‌ಕುಮಾರ್ ಅಂತ ಹೆಸರು ಬದಲಾಯಿಸಿಕೊಂಡಿದ್ದಾರೆ. ಯುವ ರಾಜ್‌ಕುಮಾರ್‌ ಅವರ ಮೊದಲ ಹೆಸರು ಗುರು. ಆದರೆ ಜನ್ಮನಾಮದ ಪ್ರಕಾರ ಹೆಸರಿಟ್ಟರೆ ಎಲ್ಲದಕ್ಕೂ ಒಳ್ಳೆಯದಾಗುತ್ತದೆ ಎಂದು ಯುವ ರಾಜ್‌ಕುಮಾರ್‌ ಅವರ ಅಜ್ಜಿ ಪಾರ್ವತಮ್ಮ ಯಾವಾಗಲೂ ಹೇಳುತ್ತಿದ್ದರು. ಆ ಪ್ರಕಾರ ವಿಚಾರಿಸಿದಾಗ ಜನ್ಮ ನಾಮಕ್ಕೆ 'ಯ' ಅಕ್ಷರದಿಂದ ಹೆಸರು ಬೇಕಿತ್ತು ಎಂಬುದು ತಿಳಿದುಬಂದಿದೆಯಂತೆ. ಹಾಗಾಗಿ ಗುರು ರಾಜ್‌ಕುಮಾರ್‌ ಎಂಬ ಹೆಸರನ್ನು ಯುವರಾಜ್‌ ಎಂದು ಬದಲಿಸಲಾಯಿತಂತೆ. ವಿಶೇಷ ಎಂದರೆ ರಾಜ್‌ ಕುಟುಂಬದಲ್ಲಿ ಅಣ್ಣಾವ್ರ ಕಾಲದಿಂದಲೂ ಎಲ್ಲರೂ ಹೆಸರು ಬದಲಾಯಿಸಿಕೊಂಡಿದ್ದಾರೆ.


ಡಾ.ರಾಜ್ ಕುಟುಂಬದಲ್ಲಿ ಹೆಸರನ್ನು ಬದಲಾಯಿಸಿಕೊಂಡಿರುವುದು ಇದೇ ಮೊದಲೇನೂ ಅಲ್ಲ. ಕನ್ನಡಿಗರ ಪ್ರೀತಿಯ ರಾಜ್‌ಕುಮಾರ್‌ ಅವರ ಮೊದಲ ಹೆಸರು ಮುತ್ತುರಾಜ್. ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ರಾಜ್‍ಕುಮಾರ್ ಅಂತ ಬದಲಾಯಿತು.  ಚಂದನವನದ ದೊಡ್ಮನೆಯ ದೊಡ್ಡ ಮಗ ಶಿವರಾಜ್ ಕುಮಾರ್ ಅವರ ಮೊದಲ ಹೆಸರು ಪುಟ್ಟಸ್ವಾಮಿ. ಆದರೆ ಇದೀಗ ಶಿವಪುಟ್ಟಸ್ವಾಮಿ ಅನ್ನೋದು ಅವರ ಮೂಲ ಹೆಸರು ಅಂತ ಯಾರಿಗೂ ತಿಳಿಯದಷ್ಟರ ಮಟ್ಟಿಗೆ ಶಿವರಾಜ್ ಕುಮಾರ್ ಅನ್ನೋ ಹೆಸರು ಫೇಮಸ್‌ ಆಯಿತು. ನಟ ಪುನೀತ್ ರಾಜ್‍ಕುಮಾರ್ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡವರು. ಇವರ ಮೊದಲ ಹೆಸರು ಲೋಹಿತ್. ಆದರೆ ಅವರು ಅಪ್ಪು ಸಿನಿಮಾ ಮೂಲಕ ನಾಯಕನಾದ ಮೇಲೆ ಪುನೀತ್ ರಾಜ್‍ಕುಮಾರ್ ಆಗಿ ಹೆಸರು ಬದಲಿಸಿಕೊಂಡರು. ನಂತರ ಅಪ್ಪು ಎಂದೇ ಮನೆ ಮಾತಾದರು. ದೊಡ್ಮನೆಗೂ ಹೆಸರು ಬದಲಾವಣೆಗೂ ಅವಿನಾಭಾವ ನಂಟಿದೆ.


ಇದನ್ನೂ ಓದಿ: 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್‌! ಕನ್ನಡಿಗ ಕ್ಯಾ.ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್


ಕೆಜಿಎಫ್ 2 ಯಶಸ್ಸಿನಲ್ಲಿರುವ ಹೊಂಬಾಳೆ ಫಿಲ್ಮ್ಸ್ ಮುಂದಿನ ಸಿನಿಮಾಗಳನ್ನು ಸಹ ಘೋಷಣೆ ಮಾಡಿದೆ. ಈಗಾಗಲೇ ಹಲವು ಬಿಗ್​ಬಜೆಟ್ ಚಿತ್ರಗಳನ್ನು ಘೋಷಿಸಿದೆ. ಇದೀಗ ಮತ್ತೊಂದು ವಿಚಾರ ಸಿನಿಪ್ರಿಯರ ಸಂತಸಕ್ಕೆ ಕಾರಣವಾಗಿದೆ. ದೊಡ್ಮನೆ ಉತ್ತರಾಧಿಕಾರಿಗೆ ಹೊಂಬಾಳೆ ಫಿಲ್ಮ್ಸ್ ಮುನ್ನುಡಿ ಬರೆಯಲಿದೆ. ನಟ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ ಯುವ ರಾಜ್‌ಕುಮಾರ್ ಲಾಂಚ್ ಮಾಡುವ ಮೂಲಕ ಹೊಸ ಪರ್ವವನ್ನು ಹೊಂಬಾಳೆ ಫಿಲ್ಮ್ಸ್ ಮಾಡಿದೆ. ಅಪ್ಪು ಅವರ ನಿನ್ನೆಂದಲೇ ಸಿನಿಮಾದ ಮೂಲಕ ಹೊಂಬಾಳೆ ಫಿಲ್ಮ್ಸ್ ಲಾಂಚ್ ಆಗಿತ್ತು. ಇದೀಗ ಪುನೀತ್ ಅಣ್ಣನ ಮಗ ಯುವ ರಾಜ್‌ಕುಮಾರ್ ಲಾಂಚ್ ಮಾಡುವ ಮೂಲಕ ಅರ್ಥಪೂರ್ಣ ಮುನ್ನುಡಿ ಬರೆದಿದೆ. 


ಪುನೀತ್ ರಾಜ್​ಕುಮಾರ್​ ಮತ್ತು ಸಂತೋಷ್​ ಆನಂದ್ ರಾಮ್​ ಅವರು ಕಾಂಬಿನೇಷನ್​ನಲ್ಲಿ ರಾಜಕುಮಾರ, ಯುವರತ್ನ ಸಿನಿಮಾ ಮೂಡಿಬಂದಿದ್ದವು. ಆ ಎರಡೂ ಸಿನಿಮಾಗಳಿಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿತ್ತು. ಇದೀಗ ಅಪ್ಪು ಸೋದರ ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರನಿಗೆ ಸಿನಿಮಾ ಮಾಡಲು ವಿಜಯ್‌ ಕಿರಗಂದೂರು ಸಜ್ಜಾಗಿದ್ದಾರೆ. ಪುನೀತ್‌, ಸಂತೋಷ್​ ಆನಂದ್ ರಾಮ್​ ಹಾಗೂ ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರ ಬರಬೇಕಿತ್ತು. ಅದು ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ ಆಗಿರಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿತ್ತು. ಇನ್ನೇನು ಆ ಚಿತ್ರ ಸೆಟ್ಟೇರಬೇಕು ಅನ್ನೋದಕ್ಕೂ ಮುನ್ನವೇ ಪುನೀತ್ ರಾಜ್​ಕುಮಾರ್​ ಇಹಲೋಕ ತ್ಯಜಿಸಿದರು. ಈಗ ಅದೇ ಕಥೆಗೆ ಯುವ ರಾಜ್​ಕುಮಾರ್​ ಜೀವತುಂಬಲಿದ್ದಾರೆ ಎಂಬ ಗಾಸಿಪ್‌ ಹರಿದಾಡುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.