)
ಅಗಲಿದ ರಂಗಕರ್ಮಿ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅಂತ್ಯಕ್ರಿಯೆ ಚಿಕ್ಕ ಸಿಂದಗಿ ಗ್ರಾಮದ ಖಬರ ಸ್ಥಾನದಲ್ಲಿ ನೆರವೇರಿತು. ಸರತಿ ಸಾಲಿನಲ್ಲಿ ನಿಂತು ಸಾವಿರಾರು ಜನರು ಅವರ ಅಂತಿಮ ದರ್ಶನ ಪಡೆದರು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...
ತೊಂಭತ್ತರ ದಶಕದಲ್ಲಿ ಕಲಿಯುಗದ ಕುಡುಕ ಧ್ವನಿ ಸುರುಳಿಯ ಮೂಲಕ ಮನೆ ಮಾತಾಗಿ ಉತ್ತರ ಕರ್ನಾಟಕದ ಜನರ ಸೊಗಡನ್ನು ಚಿತ್ರರಂಗದಲ್ಲಿ ಶಾಶ್ವತ ಛಾಪು ಮೂಡಿಸುವ ಮೂಲಕ ಗಮನ ಸೆಳೆದಿದ್ದ ರಂಗಕರ್ಮಿ, ನಾಟಕಕಾರ ಹಾಗೂ ಚಲನಚಿತ್ರ ನಟ ರಾಜು ತಾಳಿಕೋಟೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದು ವೃತ್ತಿರಂಗಭೂಮಿಯ ಕೊಂಡಿಯೊಂದು ಕಳಚಿದಂತಾಗಿದೆ.
ಶೈನ್ ಶೆಟ್ಟಿ ಚಲನಚಿತ್ರದಲ್ಲಿ ನಟಿಸಲು ಉಡುಪಿಯ ಕದ್ರಿಗೆ ತೆರಳಿದ್ದ ಹಾಸ್ಯ ನಟ ರಾಜು ತಾಳಿಕೋಟೆ ಉಸಿರಾಟದ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಧಾರವಾಡದ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ಇನ್ನಿಲ್ಲ ಅನ್ನುವ ಸುದ್ದಯಿಂದ ಕಲಾ ಅಭಿಮಾನಿಗಳಲ್ಲಿ ದುಃಖದ ಕಟ್ಟೆ ಒಡೆಯುವಂತೆ ಮಾಡಿತ್ತು.
ಹೃದಯಾಘಾತದಿಂದ ಸಾವನ್ನಪ್ಪಿದ ರಾಜು ತಾಳಿಕೋಟಿ ಖಾಸ್ಗತೇಶ್ವರ ನಾಟಕ ಕಂಪನಿಯ ಮೂಲಕ 78 ನಾಟಕಗಳನ್ನು ರಚಿಸಿ ನೂರಾರು ಯಶಸ್ವಿ ಪ್ರಯೋಗಗಳ ಮೂಲಕ ಜನರ ಮನಸೋರೆಗೊಂಡಿದ್ದರಲ್ಲದೆ ಸಹ ಕಲಾವಿದರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುವ ಹೃದಯ ವೈಶ್ಯಾಲ್ಯತೆ ಹೊಂದಿದ್ದ ರಾಜು ತಾಳಿಕೋಟೆ ಹಲವಾರು ಕಲಾವಿದರ ಮಕ್ಕಳ ಮದುವೆ ಸಹಾಯಾರ್ಥ ಕಲಿಯುಗದ ಕುಡುಕ ನಾಟಕ ಪ್ರದರ್ಶನ ಮಾಡುವ ಮೂಲಕ ಬಂದ ಹಣವನ್ನು ಸಹಾಯಾರ್ಥವಾಗಿ ನೀಡುತ್ತಿದ್ದರು...
ಇನ್ನೂ ಚಿತ್ರರಂಗದಲ್ಲಿ ತಮ್ಮದೆ ಆದ ಹಾಸ್ಯದ ಹೊನಲನ್ನು ಹೊಮ್ಮಿಸಿ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುತ್ತಿದ್ದ ರಾಜು ತಾಳಿಕೋಟೆ ಪಂಜಾಬಿ ಹೌಸ್, ಮನಸಾರೆ, ಪಂಚರಂಗಿ ಸುಗ್ರೀವ, ಅಪ್ಪು ಮತ್ತು ಪಪ್ಪು, ಮಲ್ಲಿಕಾರ್ಜುನ, ಲೈಫು ಇಷ್ಟೇನೆ, ರಾಜಧಾನಿ, ಅಲೆಮಾರಿ, ಮೈನಾ, ಟೋಪಿವಾಲ, ವೀರ, ಪಾತರಗಿತ್ತಿ, ಯು ದ ಎಂಡ್ ಎ, ಹಂಡ್ರೆಡ್, ಶ್ರೀಮಂತ, ಸೇರಿದಂತೆ ಹಲವಾರು ಚಲನಚಿತ್ರ ಮತ್ತು ಕಿರುತೆರೆಯ ಬಿಗ್ ಬಾಸ್ ಸಿಜನ್ ಸೇವನ ಕಂಟೆಸ್ಟಂಟ್ ಆಗಿಯೂ ಕಲಾದೇವಿಗೆ ತಮ್ಮ ಕಲಾಕಾಣಿಕೆಯನ್ನು ಸಲ್ಲಿಸಿದ್ದರು. ಇನ್ನೂ ಚಿಕ್ಕಸಿಂದಗಿ ಗ್ರಾಮದ ಅವರ ತೋಟದ ಮನೆಯಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಸಿಲಾಗಿತ್ತು. ಸಚಿವ ಶಿವಾನಂದ ಪಾಟೀಲ, ಶಾಸಕ ಅಪ್ಪಾಜಿ ನಾಡಗೌಡ, ಅಶೋಕ ಮನಗೂಳಿ, ಚಿತ್ರ ನಟಿ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ, ರಮೇಶ ಭೂಸನೂರ ಸೇರಿದಂತೆ ಹಲವು ಜನ ಗಣ್ಯರು ಸೇರಿದಂತೆ ಕಲವಾವಿದರು, ಅಭಿಮಾನಿಗಳು ಸಹಿತ ಸರತಿ ಸಾಲಿನಲ್ಲಿ ನಿಂತು ಸಾವಿರಾರು ಜನ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಅಂತಿಮ ದರ್ಶನ ಪಡೆದರು...
ಕಲಿಯುಗದ ಕುಡುಕ ನಾಟಕದ ಮೂಲಕವೇ ಮನೆಮಾತಾಗಿದ್ದ ರಾಜು ತಾಳಿಕೋಟೆ ಅವರ ಅಗಲಿಕೆ ನೂರಾರು ಕಲಾವಿದರು ಹಾಗೂ ಕಲಾಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದ್ದು, ರಾಜು ತಾಳಿಕೋಟೆ ಅವರ ಅಂತ್ಯ ಕ್ರಿಯೆಯನ್ನು ವಿಜಯಪುರ ಜಿಲ್ಲೆಯ ಚಿಕ್ಕಸಿಂದಗಿ ಗ್ರಾಮದ ಖಬರ ಸ್ಥಾನದಲ್ಲಿ ಮುಸ್ಲಿಂ ಸಮಾಜದ ಸಂಪ್ರದಾಯದ ಪ್ರಕಾರ ನೆರವೇರಿಸಿದರು. ಅವರು ಗಳಿಸಿದ್ದ ಜನರ ಪ್ರೀತಿಗೆ ಪ್ರತಿರೂಪ ಎಂಬಂತೆ ಸಾವಿರಾರು ಜನರು ಅಂತಿಮ ದರ್ಶನಕ್ಕೆ ಆಗಮಿಸಿದ್ದು ಕಂಡು ಬಂತು...
ಇದನ್ನೂ ಓದಿ: ರಾಜು ತಾಳಿಕೋಟಿ ನಿಧನ ರಾಜ್ಯಕ್ಕೆ ನಷ್ಟ: ಪ್ರಭು ಹಂಚಿನಾಳ