1983ರ ಕ್ರಿಕೆಟ್​ ವಿಶ್ವಕಪ್​ನಲ್ಲಿ ಭಾರತ ತಂಡ ಜಯಶಾಲಿಯಾದ ಘಟನೆಯನ್ನು ಆಧರಿಸಿ '83' ಸಿನಿಮಾ ತಯಾರಾಗಿದೆ. ಕನ್ನಡಕ್ಕೂ ಡಬ್​ ಆಗಿ ಈ ಚಿತ್ರ ಡಿ.24ರಂದು ಬಿಡುಗಡೆಗೊಳ್ಳಲಿದೆ.  


COMMERCIAL BREAK
SCROLL TO CONTINUE READING

ನಿನ್ನೆ ಬೆಂಗಳೂರಿನಲ್ಲಿ ನಡೆದ '83' ಸುದ್ದಿಗೋಷ್ಠಿಯಲ್ಲಿ  ರಣವೀರ್​ ಸಿಂಗ್​ ಮತ್ತು ಕಿಚ್ಚ ಸುದೀಪ್, 1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ಕಪಿಲ್‌ ದೇವ್‌ (Kapil Dev) ಸೇರಿದಂತೆ ತಂಡದಲ್ಲಿದ್ದ ರೋಜರ್‌ ಬಿನ್ನಿ, ಸೈಯದ್‌ ಕಿರ್ಮಾನಿ, ಕೆ.ಶ್ರೀಕಾಂತ್‌ ಪಾಲ್ಗೊಂಡಿದ್ದರು. 


ಈ ವೇಳೆ ರಣವೀರ್​ ಸಿಂಗ್​ (Ranveer Singh) ಹಾಗೂ ಕ್ರಿಕೆಟರ್​ ಶ್ರೀಕಾಂತ್ (Cricketer Srikanth) ಅವರಿಗೆ ಸುದೀಪ್​ ಕೆಲವು ಕನ್ನಡ ಡೈಲಾಗ್​ ಹೇಳಿಕೊಟ್ಟರು. ಸುದೀಪ್​​ ತಾವು ನಟಿಸಿದ ಕೆಂಪೇಗೌಡ ಸಿನಿಮಾದ ಡೈಲಾಗ್ ಹೇಳಿ ಕೊಟ್ಟರು. ಅದನ್ನು ಹೇಳಿದ ಇವರಿಗೆ ಎಲ್ಲರಿಂದ ಚಪ್ಪಾಳೆ ಸಿಕ್ಕಿತು. 


'83' ಸಿನಿಮಾ ಟ್ರೇಲರ್​​ನಿಂದಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ಇದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್​ 24ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಕಬೀರ್​ ಖಾನ್​ ನಿರ್ದೇಶನ ಮಾಡಿದ್ದಾರೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ.  


 


ಇದನ್ನೂ ಓದಿ: ಈ ಒಂದು ಫೋಟೋಗಾಗಿ ಅತ್ತಿದ್ದರಂತೆ.. 36 ವರ್ಷ ಕಾದಿದ್ದರಂತೆ ಕಿಚ್ಚ.. ಇದೇ ನೋಡಿ ಆ ಅಪರೂಪದ ಚಿತ್ರ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.