)
Dhurandhar movie facts : ಧುರಂಧರ್ ಚಿತ್ರ ಪ್ರದರ್ಶನವನ್ನು ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ದೇಶದಲ್ಲಿ ನಿಷೇಧಿಸಲಾಗಿದೆ.. ಅಚ್ಚರಿ ವಿಚಾರ ಅಂದ್ರೆ, ಭಾರತದ ಪರಮ ಶತ್ರು ಪಾಕಿಸ್ತಾನದಲ್ಲಿ ಈ ಚಿತ್ರದ ಮೇಲೆ ಯಾವುದೇ ನಿಷೇಧವಿಲ್ಲ... ಏಕೆ ಗೊತ್ತೆ? ಬನ್ನಿ ನೋಡೋಣ..
ವರದಿಗಳ ಪ್ರಕಾರ, ಅಲ್ಲಿನ ಅಧಿಕಾರಿಗಳು ಚಿತ್ರದ ವಿಷಯವನ್ನು ಪಾಕಿಸ್ತಾನ ವಿರೋಧಿ ಎಂದು ಪರಿಗಣಿಸಿ ಅದಕ್ಕೆ ಅನುಮತಿ ನೀಡಲು ನಿರಾಕರಿಸಿವೆ ಎನ್ನಲಾಗಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಮೂಲಗಳು, "ಇದನ್ನು ಪಾಕಿಸ್ತಾನ ವಿರೋಧಿ ಚಿತ್ರವೆಂದು ಪರಿಗಣಿಸಿರುವುದರಿಂದ ಈ ನಿರ್ಧಾರ ಕೈಗೊಂಡಿವೆ ಎಂದು ಹೇಳಲಾಗುತ್ತಿದೆ. ತಂಡ ಎಷ್ಟೇ ಪ್ರಯತ್ನಿಸಿದರೂ ಸಹ ಅನುಮತಿ ಸಿಗಲಿಲ್ಲ ಎನ್ನಲಾಗಿದೆ.
ಈ ಸಿನಿಮಾಗೂ ಮುನ್ನ ರಣವೀರ್ ಸಿಂಗ್ ಅವರ ಗೂಢಚರ್ ಮತ್ತು ಹೃತಿಕ್ ರೋಷನ್ ಅವರ 'ಫೈಟರ್', ಅಕ್ಷಯ್ ಕುಮಾರ್ ಅವರ 'ಸ್ಕೈ ಫೋರ್ಸ್', ಜಾನ್ ಅಬ್ರಹಾಂ ಅವರ 'ಡಿಪ್ಲೊಮ್ಯಾಟ್', ಯಾಮಿ ಗೌತಮ್ ಅವರ 'ಆರ್ಟಿಕಲ್ 370' ಮತ್ತು ಅನುಪಮ್ ಖೇರ್ ಅವರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರಗಳು ಸಹ ಮಧ್ಯಪ್ರಾಚ್ಯದಲ್ಲಿ ನಿಷೇಧವನ್ನು ಎದುರಿಸಿದ್ದವು.
ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಡಿಸೆಂಬರ್ 5 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಒಂದು ವಾರದಲ್ಲಿ, ಈ ಚಿತ್ರವು ಭಾರತದಲ್ಲಿ ಸುಮಾರು 207.25 ಕೋಟಿ ರೂ. ಮತ್ತು ವಿಶ್ವಾದ್ಯಂತ ಅಂದಾಜು 306.25 ಕೋಟಿ ರೂ. ಸಂಗ್ರಹಿಸಿದೆ. ರಣವೀರ್ ಸಿಂಗ್ ಜೊತೆಗೆ ಚಿತ್ರದಲ್ಲಿ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.