)
Bigg Boss Kannada Season 12 Winner:ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ಬಾರಿ ಎರಡು ಫಿನಾಲೆಗಳು ನಡೆಯಲಿವೆ. ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೂರನೇ ವಾರದಲ್ಲಿ ಮೊದಲ ಫಿನಾಲೆ ನಡೆಯುತ್ತಿದೆ. ಮಾಳು, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಫೈನಲಿಸ್ಟ್ ಆಗಿದ್ದಾರೆ.
ಬಿಗ್ ಬಾಸ್ ಮೊದಲ ಫಿನಾಲೆಗೆ ಕೆಲವೇ ಹೊತ್ತು ಬಾಕಿಯಿದೆ. ಈ ಸಮಯದಲ್ಲಿ ಯಾರು ಈ ಮಿಡ್ ಫಿನಾಲೆಯ ವಿನ್ನರ್ ಆಗಬಹುದೆಂಬ ಕುತೂಹಲ ಹೆಚ್ಚಿಸಿದೆ.
ಮೊದಲ ವಾರವೇ ಬಿಗ್ ಬಾಸ್ ನಲ್ಲಿ ಡಲ್ ಆಗಿ ಕಂಡವರು ಬಳಿಕ ಸ್ಟ್ರಾಂಗ್ ಕಂಟೆಸ್ಟಂಟ್ಗಳಾದರು. ಬರ ಬರುತ್ತ ತಮ್ಮ ಆಟದ ವರಸೆ ಬದಲಿಸಿದರು.
ಬಿಗ್ ಬಾಸ್ನಲ್ಲಿ ಮೊದಲ ಫಿನಾಲೆಗೆ ತಲುಪಬಹುದು ಎಂದುಕೊಂಡಿದ್ದವರೇ ಎಲಿಮಿನೇಟ್ ಆದರು. ದಿನಕಳೆದಂತೆ ಬಿಗ್ ಬಾಸ್ ಆಟ ರೋಚಕ ತಿರುವುಗಳನ್ನು ಪಡೆಯುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿ ಮಾಳು ಮತ್ತು ರಾಶಿಕಾ ಆಟದ ವರಸೆ ಬದಲಿಸಿದ್ದಾರೆ. ಇತ್ತೀಚೆಗೆ ರಾಶಿಕಾ ಆಡಿದ ಟಾಸ್ಕ್ ಕಂಡು ವೀಕ್ಷಕರು ಫಿದಾ ಆಗಿದ್ದರು. ಮಾಳು ಕೂಡ ತಮ್ಮ ಟ್ಯಾಲೆಂಟ್ ತೋರಿಸುತ್ತಿದ್ದಾರೆ.
ಮಾಳು ಮತ್ತು ರಾಶಿಕಾ ಆಟ ಬರ ಬರುತ್ತ ಜನರ ಮನಸ್ಸಿಗೆ ಇಷ್ಟವಾಗುತ್ತಿದೆ. ಸೈಲೆಂಟ್ ಆಗಿರುತ್ತಿದ್ದ ಮಾಳು ವೈಲೆಂಟ್ ಅವತಾರ ಬಿಗ್ ಬಾಸ್ ಪ್ರೇಕ್ಷಕರ ಮನಸ್ಸಿಗೆ ಹಿಡಿಸುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೂರನೇ ವಾರದ ಈ ಮೊದಲ ಫಿನಾಲೆಯಲ್ಲಿ ಮಾಳು ಅಥವಾ ರಾಶಿಕಾ ಇಬ್ಬರಲ್ಲಿ ಒಬ್ಬರು ವಿನ್ನರ್ ಆದರೂ ಅಚ್ಚರಿಯಿಲ್ಲ ಎಂಬುದು ಕೆಲ ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯವಾಗಿದೆ.