Rashmika Mandanna Wedding: ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ವಿಷಯ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಇತ್ತೀಚಿಗೆ ನಿಶ್ಚಿತಾರ್ಥದ ಕುರಿತು ವದಂತಿಗಳು ಸಹ ಹರಿದಾಡುತ್ತಿವೆ. ಇನ್ನೂ ಫೆಬ್ರುವರಿ 26, 2026 ರಂದು ಅವರ ವಿವಾಹದ ನಡೆಯಲಿದ್ದು, ಈ ಕುರಿತು ಹಲವಾರು ಚರ್ಚೆಗಳು ಸಹ ನಡೆಯುತ್ತಿವೆ. "ದಿ ಗರ್ಲ್‌ಫ್ರೆಂಡ್" ಚಿತ್ರದ ಪ್ರಚಾರದ ವೇಳೆ, "ಹಾನೆಸ್ಟ್ ಟೌನ್‌ಹಾಲ್" ನಲ್ಲಿ ತಾವು ವಿಜಯ ಅವರನ್ನು ಮದುವೆ ಆಗುವುದಾಗಿ ರಶ್ಮಿಕಾ ಹೇಳಿಕೊಂಡಿದ್ದಾರೆ.
ಹೌದು.. ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರ ಮದುವೆ ವಿಚಾರ ಸಾಕಷ್ಟು ಸುದ್ದಿಗೆ ಕಾರಣವಾಗಿದೆ. ಅಲ್ಲದೆ ಈ ಜೋಡಿ ಗುಟ್ಟಾಗಿ ನಿಶ್ಷಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವಿಷಯ ಕೂಡಾ ಹರಿದಾಡುತ್ತಿದೆ. ಹೀಗಿರುವಾಗ ಈ ವಿಚಾರದಲ್ಲಿ ಮೌನ ಮುರಿದ ರಶ್ಮಿಕಾ ಮಂದಣ್ಣ, ಸ್ನೇಹ ಮತ್ತು ಪ್ರೀತಿಯ ನಂತರ ಮದುವೆ ಅನಿವಾರ್ಯ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಆ ಹೋಟೆಲ್‌ಗೆ ಹೋದಾಗಲೆಲ್ಲಾ ಅವನು ನೀನೇ ಬೇಕು ಅಂತ ಕಾಡುತ್ತಿದ್ದ.! ಆಘಾತಕಾರಿ ಘಟನೆ ಬಿಚ್ಚಿಟ್ಟ ನಟಿ ಮೀನಾ
ರಶ್ಮಿಕಾ ತಮ್ಮ ಜೀವನ ಸಂಗಾತಿಯಲ್ಲಿ ಯಾವ ಗುಣಗಳನ್ನು ಬಯಸುತ್ತಿದ್ದಾರೆ ಎಂದು ಕೇಳಿದಾಗ.. "ಆಳವಾಗಿ ಅರ್ಥಮಾಡಿಕೊಳ್ಳುವ, ನನ್ನ ದೃಷ್ಟಿಕೋನದಿಂದ ಜೀವನವನ್ನು ನೋಡಬಲ್ಲ, ಪ್ರತಿಯೊಂದು ಪರಿಸ್ಥಿತಿಯಲ್ಲಿ ಅರ್ಥಮಾಡಿಕೊಳ್ಳವ ವ್ಯಕ್ತಿಯನ್ನು ನಾನು ಬಯಸುತ್ತೇನೆ. ಪ್ರಾಮಾಣಿಕ, ಸತ್ಯವಂತ ಮತ್ತು ಪ್ರತಿಯೊಂದು ಕಷ್ಟದಲ್ಲೂ ನನ್ನೊಂದಿಗೆ ನಿಲ್ಲುವ ವ್ಯಕ್ತಿಯನ್ನು ನಾನು ಬಯಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ. "ನಾನು ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುತ್ತೇನೆ" ಎಂದು ಹೇಳಿದರು. ನಟಿಯ ಈ ಮಾತು ಕೇಳಿ ಎಲ್ಲರೂ ಚಪ್ಪಾಳೆ ಹೊಡೆದು ಖುಷಿ ವ್ಯಕ್ತಪಡಿಸಿದರು.
ಮಾಧ್ಯಮ ವರದಿಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ಫೆಬ್ರುವರಿ 2026ರಲ್ಲಿ ಮದುವೆಯಾಗುವ ನಿರೀಕ್ಷೆಯಿದೆ. ಉದಯಪುರಕ್ಕೆ ರಶ್ಮಿಕಾ ಇತ್ತೀಚಿಗೆ ಬೇಟಿ ನೀಡಿ, ಅಲ್ಲಿ ಅವರ ವಿವಾಹದ ಸಳ್ಥಗಳನ್ನು ನೋಡಿದ್ದಾರೆ ಎನ್ನಲಾಗಿದೆ. ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಲು ನಿರ್ಧಾರಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.









