ಅನಿಲ್ ಕಪೂರ್ ಜತೆ ರಶ್ಮಿಕಾ ಮಂದಣ್ಣ ಸ್ಟೆಪ್, ವೀಡಿಯೋ ಆಯ್ತು ವೈರಲ್

ಬಾಲಿವುಡ್ ನಟ ಅನಿಲ್ ಕಪೂರ್ ಜತೆ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಬೊಂಬಾಟ್ ಸ್ಟೆಪ್.  

Last Updated : Jul 26, 2018, 10:16 AM IST
ಅನಿಲ್ ಕಪೂರ್ ಜತೆ ರಶ್ಮಿಕಾ ಮಂದಣ್ಣ ಸ್ಟೆಪ್, ವೀಡಿಯೋ ಆಯ್ತು ವೈರಲ್ title=

ಕನ್ನಡ ಚಿತ್ರರಂಗದಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಹೆಸರು ಕೇಳಿದೊಡನೆ  ಮೊದಲು ನೆನಪಾಗುವುದು 'ನಗುವ ನಯನ ಮಧುರ ಮೌನ, ಮಿಡಿವಾ ಹೃದಯ ಇರೆ ಮಾತೇಕೆ' ಗೀತೆ. ಆದರೆ ಈ ನಟ ಯಾಕೋ ಈಗ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಜೊತೆ 'ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಅಂದಿದೆ...' ಅಂತಾ ಇದ್ದಾರೆ. 

ಇದಕ್ಕೆ ಕಾರಣ ಏನು ಗೊತ್ತಾ, 'ಮೂರೆ ಮೂರು ಪೆಗ್ಗಿಗೆ...' ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್ ಜತೆ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಸ್ಟೆಪ್ ಹಾಕಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದ ಇವರಿಬ್ಬರು, ಚಂದನ್ ಶೆಟ್ಟಿ ಹಾಡಿರುವ 'ಮೂರೇ ಮೂರು ಪೆಗ್ಗಿಗೆ..' ಹಾಡಿಗೆ ಹಾಕಿರುವ ಹೆಜ್ಜೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಈ ವಿಡಿಯೋವನ್ನು ತನ್ನ Instagram ಖಾತೆಯಲ್ಲಿ ಹಂಚಿಕೊಂಡಿರುವ ರಶ್ಮಿಕಾ, ಅಪ್ಪಾ..!! ಆ ಸಂದರ್ಭದಲ್ಲಿ ನನಗೆ ತುಂಬಾ ನಾಚಿಕೆಯಾಯಿತು. ಯಾವ ಉದ್ಯಮದಲ್ಲಾದರೂ ಇರಲಿ, ನಾವು ಎಷ್ಟು ಸಿನಿಮಾ ಮಾಡಿದ್ದೇವೆ, ಯಾವ ಭಾಷೆಯಲ್ಲಿ ನಟಿಸುತ್ತಿದ್ದೇವೆ ಎಂಬುದು ಮುಖ್ಯವಲ್ಲ. ನಾವು ಒಗ್ಗೂಡಿದಾಗ ಅದು ಯಾವಾಗಲೂ ವಿನೋದಮಯವಾಗಿರುತ್ತದೆ. ನಾನು ಈವರೆಗೂ ಭೇಟಿ ಮಾಡಿರುವ ಪ್ರತಿಯೊಬ್ಬ ನಟರೂ ಅಂತಹ ಸ್ವೀಟ್ ಹಾರ್ಟ್ ಹೊಂದಿದ್ದಾರೆ. ಇಂತಹ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಾನು ಇದೇ ರೀತಿ ಇರಲು ಬಯಸುತ್ತೇನೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

Trending News