)
Rashmika Mandanna Latest News: ರಶ್ಮಿಕಾ ಮಂದಣ್ಣ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆದರು ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದ ರಶ್ಮಿಕಾ ಈಗ ತಮ್ಮ ಮದುವೆಯ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದರು.
ಪುಷ್ಪಾ 2 ದಿ ರೂಲ್ ಸಿನಿಮಾ ಕಾರ್ಯಕ್ರಮದ ಸಮಯದಲ್ಲಿ ತಮ್ಮ ಭಾವಿ ಪತಿಯ ಬಗ್ಗೆ ಮಾತನಾಡಿದ್ದರು. ರಶ್ಮಿಕಾ ಹಲವಾರು ವರ್ಷಗಳಿಂದ ಯಾರನ್ನೋ ಪ್ರೀತಿಸುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿರುವ ಬೆನ್ನಲ್ಲೇ ಭಾವಿ ಪತಿಯ ಬಗ್ಗೆ ಹೇಳಿದ್ದರು. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ನಡೆದಿದೆ ಎಂಬ ವದಂತಿ ಹರಡಿತ್ತು.
ತಮಿಳುನಾಡಿನ ಚೆನ್ನೈನಲ್ಲಿ ನಡೆದಿದ್ದ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣಗೆ ಮದುವೆಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ರಶ್ಮಿಕಾ ಮಂದಣ್ಣ ಸ್ವಲ್ಪ ಹೊತ್ತು ಯೋಚಿಸಿ ನಂತರ ನಗುತ್ತಲೇ 'ಅವರು ನಿಮಗೆಲ್ಲ ಗೊತ್ತು' ಎಂದು ಸುಳಿವು ನೀಡಿದ್ದರು.
ಚಿತ್ರರಂಗದ ಯಾರನ್ನಾದರೂ ಮದುವೆಯಾಗುತ್ತೀರಾ? ಅಥವಾ ಹೊರಗಿನವರಾ? ಎಂದು ಮತ್ತೆ ಕೇಳಿದಾಗ, 'ಅದು ಎಲ್ಲರಿಗೂ ತಿಳಿದಿರುವ ವಿಷಯ' ಎಂದು ರಶ್ಮಿಕಾ ನಸುನಕ್ಕಿದ್ದರು. ʻನಮಗೆ ಗೊತ್ತಿಲ್ಲ. ಒಂದು ಸಣ್ಣ ಸುಳಿವು ಕೊಡಿʼ ಎಂದು ಮತ್ತೆ ಪ್ರಶ್ನಿಸಿದಾಗ... 'ಹಾಗೆ ಹೇಳುವುದು ಬೇಡ. ನಾನೇ ಖುದ್ದಾಗಿ ಒಂದು ದಿನ ಎಲ್ಲವನ್ನೂ ಹೇಳುತ್ತೇನೆ' ಎಂದು ನಗುತ್ತಲೇ ರಶ್ಮಿಕಾ ಹೇಳಿದ್ದರು.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಮುಂದಿನ ದಿನಗಳಲ್ಲಿ ಮದುವೆಯಾಗಬಹುದು ಎನ್ನಲಾಗ್ತಿದೆ. ರಶ್ಮಿಕಾ ಅವರ ಮಾತಿನ ಗೂಡಾರ್ಥ ಏನು ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಯಬಹುದು.
ಇದನ್ನೂ ಓದಿ : ನಟಿ ರಮ್ಯಾ ನಿಜವಾದ ವಯಸ್ಸೆಷ್ಟು, ಇವರ ತಂದೆ ಯಾರು ಗೊತ್ತೇ!