)
Raveena Tandon Comment: ಸಿನಿಮಾಗಳಲ್ಲಿ ಪ್ಲಾಪ್ಗಳು ಮತ್ತು ಹಿಟ್ಗಳು ಸಾಮಾನ್ಯ. ಆದರೆ ಸ್ಟಾರ್ಗಿರಿ ಗಳಿಸಲು ಕಷ್ಟಪಟ್ಟು ಕೆಲಸ ಮಾಡಬೇಕು. ಅನೇಕ ಜನರು ಕೆಲವು ಕೆಲಸಗಳನ್ನು ಮಾಡಲು ಸಾಧ್ಯವಾಗದೆ ಬೆಳ್ಳಿ ಪರದೆಯಿಂದ ದೂರ ಉಳಿಯುತ್ತಾರೆ. ಹುಡುಗಿಯರ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ ಎಂದರೇ ಅತಿಶಯೋಕ್ತಿಯಲ್ಲ.. ಆದರೆ 90 ರ ದಶಕದಲ್ಲಿ, ಒಬ್ಬ ನಾಯಕಿ ಈ ರೀತಿಯ ಕೆಲವು ದೃಶ್ಯಗಳನ್ನು ಮಾಡಲು ಸಾಧ್ಯವಾಗದ ಕಾರಣ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ತೊರೆದರು. 90 ರ ದಶಕದಲ್ಲಿ ಬಾಲಿವುಡ್ನಲ್ಲಿ, ಮಾಧುರಿ ದೀಕ್ಷಿತ್, ರವೀನಾ ಟಂಡನ್, ಜೂಹಿ ಚಾವ್ಲಾ, ಕರಿಷ್ಮಾ ಕಪೂರ್, ಕಾಜೋಲ್ ಮತ್ತು ಶಿಲ್ಪಾ ಶೆಟ್ಟಿಯಂತಹ ಸುಂದರಿಯರು ಒಂದರ ನಂತರ ಒಂದರಂತೆ ಹಿಟ್ ಸಿನಿಮಾಗಳನ್ನು ಗಳಿಸಿದರು. ನಂತರ ಅನೇಕ ನಟಿಯರು ಕೆಲವು ಸಿನಿಮಾಗಳನ್ನು ತಿರಸ್ಕರಿಸಿದರು, ಅವು ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಮತ್ತು ಕಲ್ಟ್ ಹಿಟ್ಗಳಾಗಿ ಮಾರ್ಪಟ್ಟವು. ಇತ್ತೀಚೆಗೆ, ರವೀನಾ ಟಂಡನ್ ಈ ವಿಷಯದ ಬಗ್ಗೆ ಹೇಳಿಕೊಂಡಿದ್ದಾರೆ.
ರವೀನಾ ಟಂಡನ್ ಇತ್ತೀಚೆಗೆ ANI ಪಾಡ್ಕ್ಯಾಸ್ಟ್ನಲ್ಲಿ ಬಾಲಿವುಡ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ʼರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಅಲ್ಲದೇ ಶಾರುಖ್ ಖಾನ್, ಸನ್ನಿ ಡಿಯೋಲ್ ಮತ್ತು ಜೂಹಿ ಚಾವ್ಲಾ ನಟಿಸಿರುವ 'ಡರ್' ಗೆ ನಾನೇ ಮೊದಲ ಆಯ್ಕೆ. ಆದರೆ ನಾನು ಆ ಆಫರ್ ಅನ್ನು ತಿರಸ್ಕರಿಸಿದೆ. ಕಾರಣ ಚಿತ್ರದಲ್ಲಿ ನನಗೆ ಇಷ್ಟವಾಗದ ಕೆಲವು ದೃಶ್ಯಗಳಿದ್ದವು.. ಹೀಗಾಗಿ ನಾನು ಆ ಸಿನಿಮಾವನ್ನ ರಿಜೆಕ್ಟ್ ಮಾಡಿದೆ..ʼ ಎಂದರು.
ಇದಲ್ಲದೇ ʼ1991 ರಲ್ಲಿ ಕರಿಷ್ಮಾ ಕಪೂರ್ ಅವರ ಬಾಲಿವುಡ್ ಚೊಚ್ಚಲ ಪ್ರವೇಶವನ್ನು ಗುರುತಿಸಿದ "ಪ್ರೇಮ್ ಖೈದಿ" ಚಿತ್ರದ ಆಫರ್ ಸಹ ನನಗೆ ಬಂದಿತ್ತು. ಆದರೆ ಅದರಲ್ಲಿ ನಾಯಕ ಜಿಪ್ ತೆಗೆಯುವ ದೃಶ್ಯವಿತ್ತು. ಹೀಗಾಗಿ ಅದನ್ನೂ ರಿಜೆಕ್ಟ್ ಮಾಡಬೇಕಾಯಿತು.. ಏಕೆಂದರೇ ನಾನು ಸ್ವಲ್ಪ ನಾಚಿಕೆ ಸ್ವಭಾವದವಳಾಗಿದ್ದೆ.. ಎಂದು ರವೀನಾ ಹೇಳಿದರು.
ಇನ್ನು ರವೀನಾ ಟಂಡನ್ 1991 ರಲ್ಲಿ ಸಲ್ಮಾನ್ ಖಾನ್ ಅಭಿನಯದ ಫತ್ತರ್ ಕೆ ಪೂಲ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು ಮತ್ತು 1994 ರ ದಿಲ್ವಾಲೆ ಚಿತ್ರವು ರವೀನಾಗೆ ದೊಡ್ಡ ಹಿಟ್ ಆಗಿತ್ತು, ಇದು ಅವರಿಗೆ ಒಂದು ಮಹತ್ವದ ತಿರುವು ನೀಡಿತು. ರವೀನಾ ನಾಲ್ಕು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ರವೀನಾ ಇತ್ತೀಚೆಗೆ ಕೆಜಿಎಫ್ 2 ಚಿತ್ರದೊಂದಿಗೆ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು.