)
Rasha Thadani: 90 ರ ದಶಕದಲ್ಲಿ ಜನಪ್ರಿಯರಾಗಿದ್ದ ರವೀನಾ ಟಂಡನ್ ಅವರ ಪುತ್ರಿ ರಶಾ ಥಡಾನಿ ಈಗ ಬಾಲಿವುಡ್ನಲ್ಲಿ ಸದ್ದು ಮಾಡಲು ಸಿದ್ಧರಾಗಿದ್ದಾರೆ. ಸದ್ಯ ಆಕೆಯೇ ಮನೆಮಾತಾಗಿದ್ದಾಳೆ. ಜನವರಿ 17 ರಂದು ಬಿಡುಗಡೆಯಾದ ಆಜಾದ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು..
ಈ ಚಿತ್ರ ಬಿಡುಗಡೆಯಾದಾಗಿನಿಂದ ರಾಶಾಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಈ ಚಿತ್ರದಲ್ಲಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ರಾಶಾ ತಮ್ಮ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ' ಮಿಸ್ ಮಾಲಿನಿ'ಗೆ ನೀಡಿದ ಸಂದರ್ಶನದಲ್ಲಿ ಅವರು ತನಗೆ ಸಂಬಂಧಿಸಿದ ಹಲವು ವಿಷಯಗಳನ್ನು ಹೇಳಿದ್ದಾರೆ.
ರಾಶಾ ಅವರ ಕ್ರಶ್ ಹೆಸರು ಕೇಳಿದರೆ ನೀವು ಖಂಡಿತ ಶಾಕ್ ಆಗುತ್ತೀರಿ. ಸದ್ಯ ಆಕೆಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಟಿಯ ಕ್ರಷ್ ಬಾಲಿವುಡ್ನಲ್ಲಿ ಈ ಸುಂದರ ಹಂಕ್ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ.. 40 ವರ್ಷದ ಆ ನಟ 2023 ರಲ್ಲಿ ವಿವಾಹವಾದರು..
ರಾಶಾ ಅವರ ಕ್ರಷ್ ನಟ ಎಂದರೇ ಅದು ಬೇರಾರೂ ಅಲ್ಲ.. ಸಿದ್ಧಾರ್ಥ್ ಮಲ್ಹೋತ್ರಾ. "ನಾನು ಮಾತ್ರವಲ್ಲ, ಆಲ್ಮೋಸ್ಟ್ ಎಲ್ಲ ಹುಡಗಿಯರಿಗೂ ಈ ನಟನೆಂದರೇ ತುಂಬಾ ಇಷ್ಟ.. ಸ್ಟೂಡೆಂಟ್ಆಫ್ ದ ಇಯರ್ನಿಂದ ಸಿದ್ಧಾರ್ಥ್ ಮತ್ತು ಆಲಿಯಾ ಅವರನ್ನು ಇಷ್ಟಪಡುತ್ತಿದ್ದೇನೆ.. ಸಿದ್ದಾರ್ಥ ನನ್ನ ಕ್ರಷ್" ಎಂದು ರಾಶಾ ಹೇಳಿದ್ದಾರೆ... ಸದ್ಯ ಅವರ ಉತ್ತರ ಸೋಷಿಯಲ್ ಮಿಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇನ್ನು ನಟ ಸಿದ್ಧಾರ್ಥ್ ಮಲ್ಹೋತ್ರಾ ಕರಣ್ ಜೋಹರ್ ಅವರ ' ಸ್ಟೂಡೆಂಟ್ ಆಫ್ ದಿ ಇಯರ್ ' ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು.. ಅವರು ಹಲವು ವರ್ಷಗಳಿಂದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. 2023 ರಲ್ಲಿ ನಟಿ ಕಿಯಾರಾ ಅಡ್ವಾಣಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು... ಆದರೆ ಅವರ ಮದುವೆಯ ಸುದ್ದಿ ಅನೇಕ ಯುವತಿಯರ ಹೃದಯವನ್ನು ಒಡೆಯಿತು.