)
Ravi Kishan wife : ರವಿ ಕಿಶನ್ ದಕ್ಷಿಣ ಚಿತ್ರಗಳಿಂದ ಪ್ರಾರಂಭಿಸಿ ಬಾಲಿವುಡ್ ಮತ್ತು ಭೋಜ್ಪುರಿ ಚಲನಚಿತ್ರೋದ್ಯಮದಲ್ಲಿಯೂ ಬಹಳ ಜನಪ್ರಿಯರಾಗಿದ್ದಾರೆ. ರವಿ ಸಿನಿಮಾದಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿಯೂ ಪ್ರಬಲ ನಾಯಕ. ಅವರ ಈ ಯಶಸ್ಸಿನ ಹಿಂದೆ ಅವರ ಪತ್ನಿ ಇದ್ದಾರೆ. ಇತ್ತೀಚಿಗೆ ತಮ್ಮ ಹೆಂಡತಿಯ ಕುರಿತು ಅಚ್ಚರಿ ವಿಷಯಗಳನ್ನು ಬಿಚ್ಚಿಟ್ಟರು.
ಪ್ರತಿಯೊಬ್ಬ ಯಶಸ್ವಿ ಗಂಡನ ಹಿಂದೆ ಒಂದು ಹೆಣ್ಣು ಇರುತ್ತಾಳೆ ಎನ್ನುವ ಗಾದೆಗೆ ರವಿಕೃಷ್ಣನ್ ಒಂದು ಜ್ವಲಂತ ಉದಾಹರಣೆ ಎನ್ನಬಹುದು. ಅದಕ್ಕಾಗಿಯೇ ಈ ನಟ ತನ್ನ ಹೆಂಡತಿಗೆ ಯಾವಾಗಲೂ ಧನ್ಯವಾದ ಹೇಳಲು ಮರೆಯುವುದಿಲ್ಲ. ಅಲ್ಲದೆ, ರಾತ್ರಿ ಮಲಗುವ ಮುನ್ನ ಅವಳಿಗೆ ನಮಸ್ಕರಿಸುತ್ತಾರಂತೆ.
ಇತ್ತೀಚೆಗೆ ರವಿ ಕಿಶನ್ ಅವರು ಸನ್ ಆಫ್ ಸರ್ದಾರ್ ಚಿತ್ರದ ಪ್ರಚಾರಕ್ಕಾಗಿ ದಿ ಕಪಿಲ್ ಶರ್ಮಾ ಶೋಗೆ ಬಂದಿದ್ದರು. ಅಜಯ್ ದೇವಗನ್ ಕೂಡ ಅವರೊಂದಿಗೆ ಇದ್ದರು. ಅಲ್ಲಿ ಕಪಿಲ್ ಶರ್ಮಾ ಅವರಿಗೆ ಒಂದು ಪ್ರಶ್ನೆ ಕೇಳಿದರು. ಅಲ್ಲದೆ, ಆಗ ನಟ ಅಚ್ಚರಿ ವಿಷಯ ಬಿಚ್ಚಿಟ್ಟರು.
ದುಃಖದ ಸಮಯದಲ್ಲಾಗಲಿ ಅಥವಾ ಸಂತೋಷದ ಸಮಯದಲ್ಲಾಗಲಿ.. ನಾನು ಸೋತು ಹೋದಾಗ, ಪ್ರೀತಿ ನನ್ನನ್ನು ನೋಡಿಕೊಳ್ಳುತ್ತಾಳೆ. ಇಂತಹ ಹೆಂಡತಿಯನ್ನು ಪಡೆದ ನಾನು ತುಂಬಾ ಅದೃಷ್ಟಶಾಲಿ. ಅದಕ್ಕಾಗಿಯೇ ನಾನು ಅವಳನ್ನು ದೇವರ ಸ್ಥಾನದಲ್ಲಿ ಇರಿಸಿದೆ ಅಂತ ಹೇಳಿಕೊಂಡಿದ್ದರು..
ಕಾಲು ಮುಟ್ಟೋಕೆ ಹೋದ್ರೆ ಪ್ರೀತಿ ತುಂಬಾ ಕೋಪಗೊಳ್ಳುತ್ತಾಳೆ. ಅವಳು ಪಾದವನ್ನು ಮುಟ್ಟಲು ಬಿಡುವುದಿಲ್ಲ. ಅದಕ್ಕಾಗಿ ಅವಳು ಮಲಗಿದ್ದಾಗ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತೇನೆ. ಹಲವು ವರ್ಷಗಳಿಂದ ಇದು ಹೀಗೆಯೇ ನಡೆಯುತ್ತಿದೆ ಎಂದು ನಟ, ರಾಜಕಾರಣಿ ರವಿ ಕಿಶನ್ ಹೇಳಿಕೊಂಡರು.