47 ನೇ ವಯಸ್ಸಿನಲ್ಲಿ ತಂದೆಯಾದ ಖುಷಿ.. ಹೆಣ್ಣು ಮಗುವಿನ ಆಗಮನದ ಸಂತಸದಲ್ಲಿ ಸ್ಟಾರ್ ದಂಪತಿ

Tamil Actor: ಕಿಂಗ್ಸ್‌ಲೇ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, 47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಚಾರ ತಿಳಿದು ಭಿನ್ನ ವಿಭಿನ್ನ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

Written by - Zee Kannada News Desk | Last Updated : Apr 3, 2025, 08:13 PM IST
  • ರೆಡಿನ್ ಕಿಂಗ್‌ಸ್ಲೇ ತಮಿಳಿನ ಖ್ಯಾತ ಹಾಸ್ಯ ನಟರಲ್ಲಿ ಒಬ್ಬರು.
  • ರೆಡಿನ್‌ ಡಿಸೆಂಬರ್‌ 10, 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
  • 47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
47 ನೇ ವಯಸ್ಸಿನಲ್ಲಿ ತಂದೆಯಾದ ಖುಷಿ.. ಹೆಣ್ಣು ಮಗುವಿನ ಆಗಮನದ ಸಂತಸದಲ್ಲಿ ಸ್ಟಾರ್ ದಂಪತಿ

Tamil Actor: ಸಿನಿಮಾ ತಾರೆಯರ ಸಿನಿ ಸುದ್ದಿಗಿಂದ ಅವರ ವೈಯಕ್ತಿಕ ಜೀವನದ ಕುರಿತಾದ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ಅಭಿಮಾನಿಗಳಿಗೆ ಹೆಚ್ಚು ತವಕ. ಅದರಲ್ಲೂ ಸೆಲೆಬ್ರಿಟಿಗಳ ಮದುವೆ, ಮುಂಜಿಯಂತಹ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರೆ, ಅಭಿಮಾನಿಗಳಿಗೆ ಮಾಹಿತಿ ತಿಳಿದುಕೊಳ್ಳುವ ಅವಸರ, ಇದೀಗ 47ನೇ ವಯಸ್ಸಿನಲ್ಲಿ ತಂದೆಯಾಗಿರುವ ಖ್ಯಾತ ನಟ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

Add Zee News as a Preferred Source

ರೆಡಿನ್ ಕಿಂಗ್‌ಸ್ಲೇ ತಮಿಳಿನ ಖ್ಯಾತ ಹಾಸ್ಯ ನಟರಲ್ಲಿ ಒಬ್ಬರು, ಮಾಡಿದ್ದು ಒಂದೆರೆಡು ಸಿನಿಮಾ ಆದ್ರೂ, ಸಿಕ್ಕಾಪಟ್ಟೆ ಫೇಮಸ್‌ ಆದರು, ಇವರ ಆಕ್ಟಿಂಗ್‌ಗೆ ಸೆಪೆರೇಟ್‌ ಫ್ಯಾನ್‌ ಬೇಸ್‌ ಇದ್ದು, ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಪಾತ್ರಗಳ ಮೂಲಕ ನಕ್ಕು ನಗಿಸುತ್ತಾ ಒಂದು ಹೆಸರು ಗಿಟ್ಟಿಸಿಕೊಂಡ ನಂತರ, ರೆಡಿನ್‌ ಡಿಸೆಂಬರ್‌ 10, 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

redins

ಇದನ್ನೂ ಓದಿ: ಪ್ರಾಣಕ್ಕಿಂತ ಹೆ್ಚ್ಚಾಗಿ ಪ್ರೀತಿಸಿ ಮದುವೆಯಾಗಿ ಸುಂದರ ಕನಸ್ಸು ಕಟ್ಟಿಕೊಂಡಿದ್ದ.. ವಿಚ್ಛೇದನದ ನಂತರ ಪತ್ನಿಗೆ ಜೀವನಾಂಶ ನೀಡಿ ದಿವಾಳಿಯಾದ ಸ್ಟಾರ್‌ ನಟ!

ತಮಿಳಿನ ಖ್ಯಾತ ಕಿರುತೆರೆ ನಟಿ ಸಂಗೀತ ಎನ್ನುವವರ ಜೊತೆ ಕಿಂಗ್ಸ್‌ಲೇ ಮದುವೆ ಅದ್ದೂರಿಯಾಗಿ ನಡೆದಿತ್ತು, ತನ್ನ 45ನೇ ವಯಸ್ಸಿನಲ್ಲಿ ಕಿಂಗ್ಸ್‌ಲೇ ಅತ್ಯಂತ ಸುಂದರವಾದ ಮಹಿಳೆಯನ್ನು ಮದುವೆಯಾಗುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗೊದ್ದರು, ಇನ್ನೂ ಕೆಲವರು ಇವರಿಗೆಲ್ಲಾ ಹೆಂಗ್ರೋ ಇಂತಹ ಬ್ಯೂಟಿಫುಲ್‌ ಹುಡುಗಿ ಸಿಕ್ಕಳು ಎಂದು ಹೊಟ್ಟೆ ಉರ್ಕೊಂಡವರೇ ಹೆಚ್ಚು.

ಆಗ ಸುದ್ದಿಯಾಗಿದ್ದ ಕಿಂಗ್ಸ್‌ಲೇ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, 47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಚಾರ ತಿಳಿದು ಭಿನ್ನ ವಿಭಿನ್ನ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಈ ಸುದ್ದಿ ಸ್ವತಃ ಕಿಂಗ್ಸ್‌ಲೇ ಅವರ ಪತ್ನಿ ಸಂಗೀತ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ದಂಪತಿಗೆ ಶುಭ ಕೋರುತ್ತಿದ್ದಾರೆ. ಇನ್ನೂ, ಕಿಂಗ್ಸ್‌ಲೇ ಕೂಡ ತಮ್ಮ ಮೊದಲ ಮಗು ಜನಿಸಿದ ಖುಷಿಯನ್ನು ಆಚರಿಸುತ್ತಿದ್ದು, ತಮ್ಮ ಪುಟ್ಟ ಕಂದಮ್ಮ ಜೊತೆ ಫೋಟೋ ಹಂಚಿಕೊಂಡು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

redinss

ಇದನ್ನೂ ಓದಿ: ನನಗೆ ಆಗ 17 ವರ್ಷ ವಯಸ್ಸು.. ಆತ ಹೇಳಿದಂತೆ ಮಾಡಿದೆ, ಅಪ್ಪ ನೋಡಿ ಬೇಸರವಾಗಿದ್ರು: ನಟಿ ಅಮಲಾ ಪೌಲ್

ಇನ್ನೂ, ಕೆಲವೇ ದಿನಗಳ ಮುಂಚೆಯಷ್ಟೇ ಕಿಂಗ್ಸ್‌ಲೆ ತಮ್ಮ ಪತ್ನಿಯ ಶ್ರೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿ, ಈ ಸಂದರ್ಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ನೆಟ್ಟಿಗರು ಈ ಫೋಟೋಗಳಿಗೆ ಪಾಸಿಟಿವ್‌ ಹಾಗೂ ನೆಗೆಟಿವ್‌ ಕಾಮೆಂಟ್‌ಗಳನ್ನ ಮಾಡಿದ್ದರು, ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಿಂಗ್ಸ್‌ಲೆ ಸದ್ಯ ತಮ್ಮ ಮುದ್ದು ಮಗಳ ಜೊತೆ ಎಂಜಾಯ್‌ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News