)
Renu Desai Second Marriage: ರೇಣು ದೇಸಾಯಿ.. ಪವನ್ ಕಲ್ಯಾಣ್ ಅವರಿಂದ ಬೇರ್ಪಟ್ಟು ಸುಮಾರು 13 ವರ್ಷಗಳಾಗಿವೆ. ಎರಡನೇ ಮದುವೆಯಾಗದೆ ಅವರು ಇನ್ನೂ ಒಂಟಿಯಾಗಿದ್ದಾರೆ. ಅವರು ತಮ್ಮ ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯಾಳನ್ನು ನೋಡಿಕೊಳ್ಳುತ್ತಾ ಒಂಟಿ ಜೀವನ ನಡೆಸುತ್ತಿದ್ದಾರೆ. ಆದರೆ, ಅವರು ತಮ್ಮ ಎರಡನೇ ಮದುವೆಗೆ ಸಂಬಂಧಿಸಿದಂತೆ ಆಗಾಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಇದಕ್ಕೆ ಸ್ಪಷ್ಟೀಕರಣ ನೀಡಿದರು. ನಟಿ ತಾವು ಎರಡನೇ ಬಾರಿಗೆ ಯಾವಾಗ ಮದುವೆಯಾಗುತ್ತಾರೆ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ರೇಣು ದೇಸಾಯಿ ʼಎರಡನೇ ಮದುವೆಯಾಗಲು ಸಿದ್ಧಳಾಗಿದ್ದೇನೆ.. ಆದರೆ ಇಲ್ಲಿ ಒಂದು ಸಣ್ಣ ತಿರುವು ಇದೆ. ಮದುವೆಯಾಗಲು ಇನ್ನೂ ಕೆಲವು ದಿನ ಬೇಕು..ʼ ಎಂದಿದ್ದಾರೆ.. ಮುಂದಿನ ಎರಡು ಮೂರು ವರ್ಷಗಳಲ್ಲಿ ಖಂಡಿತವಾಗಿಯೂ ಮದುವೆಯಾಗುವುದಾಗಿ ರೇಣು ದೇಸಾಯಿ ಸ್ಪಷ್ಟಪಡಿಸಿದ್ದಾರೆ.
ಮದುವೆಯಾಗದೇ ಇರುವುದಕ್ಕೆ ಕಾರಣವನ್ನೂ ಅವರು ಬಹಿರಂಗಪಡಿಸಿದ್ದು, ʼಮಕ್ಕಳ ಹಿತದೃಷ್ಟಿಯಿಂದ ನಾನು ಮದುವೆಯಾಗಲಿಲ್ಲ.. ಒಂದು ಸಮಯದಲ್ಲಿ ಮದುವೆಯಾಗಲು ರೆಡಿಯಾಗಿ ನಿಶ್ಚಿತಾರ್ಥವೂ ಆಗಿತ್ತು.. ಆದರೆ ಅದು ಕಾರಣಂತಾರಗಳಿಂದ ರದ್ದಾಯಿತು.. ಆದರೆ ಆ ಸಮಯದಲ್ಲಿ, ನನ್ನ ಮಕ್ಕಳಾದ ಅಕಿರಾ ಮತ್ತು ಆದ್ಯ ಇನ್ನೂ ಚಿಕ್ಕವರಾಗಿದ್ದರು. ಅವರಿಗೆ ಆರೈಕೆದಾರರ ಅಗತ್ಯವಿತ್ತು.. ಒಂದೊಳ್ಳೆ ಒಡನಾಟದ ಅಗತ್ಯವಿತ್ತು. ನಾನು ಮದುವೆಯಾದರೇ ನನ್ನ ಮಕ್ಕಳು ಒಂಟಿಯಾಗುತ್ತಾರೆ.. ಏಕೆಂದರೇ ತಂದೆ ಈಗಾಗಲೇ ದೂರವಾಗಿದ್ದಾರೆ.. ನಾನೂ ಕೂಡ ಹೊರಟು ಹೋದರೆ, ಅವರು ಒಂಟಿತನದ ಭಾವನೆಯನ್ನು ಎದುರಿಸಬೇಕಾಗುತ್ತದೆ ಎಂದು ಮದುವೆ ಮುಂದೂಡಿದ್ದೇನೆ ಎನ್ನುತ್ತಾರೆ ರೇಣು ದೇಸಾಯಿ..
ʼಇನ್ನೆರಡು ಅಥವಾ ಮೂರು ವರ್ಷಗಳಲ್ಲಿ, ಮಕ್ಕಳು ದೊಡ್ಡವರಾಗುತ್ತಾರೆ. ಅವರು ಕಾಲೇಜಿಗೆ ಹೋಗುತ್ತಾರೆ. ನಂತರ ಅವರಿಗೆ ಸ್ನೇಹಿತರು ಮತ್ತು ಪ್ರೇಮಿಗಳ ಹೊಸ ಲೋಕವಿರುತ್ತದೆ. ಅವರು ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಆಗ ತಮ್ಮ ಹೆತ್ತವರ ಮೇಲೆ ಹೆಚ್ಚು ಅವಲಂಬಿತವಾಗಿರುವುದಿಲ್ಲ, ಅವರಿಗೆ ಬೆಂಬಲ ಮಾತ್ರ ಬೇಕಾಗುತ್ತದೆ.. ಆಗ ನಾನು ಸ್ವತಂತ್ರಳಾಗಿ ನನ್ನ ದಾಂಪತ್ಯವನ್ನು ಆನಂದಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ನಾನು ಇಷ್ಟು ವರ್ಷಗಳಿಂದ ಕಾಯುತ್ತಿದ್ದೇನೆʼ ಎಂದು ರೇಣು ದೇಸಾಯಿ ಹೇಳಿದರು. ಈ ವಿಷಯಗಳು ಐಡ್ರೀಮ್ ಸಂದರ್ಶನದಲ್ಲಿ ಬಹಿರಂಗಗೊಂಡಿವೆ. ಈ ಲೆಕ್ಕಾಚಾರದ ಆಧಾರದ ಮೇಲೆ, ರೇಣು ದೇಸಾಯಿ ಇನ್ನೆರಡು ಮೂರು ವರ್ಷಗಳಲ್ಲಿ ಮತ್ತೊಂದು ಜೀವನವನ್ನು ಪ್ರಾರಂಭಿಸುತ್ತಾರೆ ಎಂದು ಹೇಳಬಹುದು.
ಇನ್ನು ಬದ್ರಿ ಚಿತ್ರೀಕರಣದ ಸಮಯದಲ್ಲಿ ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಪ್ರೀತಿಯಲ್ಲಿ ಬಿದ್ದರು.. ಅವರು ಕೆಲವು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಆ ಸಮಯದಲ್ಲಿ, ಅಕಿರಾ ನಂದನ್ ಜನಿಸಿದರು. ನಂತರ, ಅವರು ಮದುವೆಯಾದರು. ಬಳಿಕ ಆಧ್ಯಾ ಎಂಬ ಮಗಳು ಜನಿಸಿದಳು. ಅವಳು ಹುಟ್ಟಿದ ಎರಡು ವರ್ಷಗಳ ನಂತರ ಅವರು ವಿಚ್ಛೇದನ ಪಡೆದರು. ಪವನ್ ರಷ್ಯಾದ ನಟಿ ಅನ್ನಾ ಲೆಜಿನೋವಾ ಅವರನ್ನು ಮೂರನೇ ಬಾರಿಗೆ ವಿವಾಹವಾದರು. ಅವರಿಗೆ ಪೋಲೆನಾ ಎಂಬ ಮಗಳು ಮತ್ತು ಮಾರ್ಕ್ ಶಂಕರ್ ಎಂಬ ಮಗನಿದ್ದಾನೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.