Rishab Shetty: ರಶ್ಮಿಕಾಗೆ ‘ಕೃತಜ್ಞತೆ ಇಲ್ಲ’.. ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ರು ರಿಷಬ್ ಶೆಟ್ಟಿ!
Rishab Shetty on Rashmika : ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಇತೀಚೆಗೆ ಇಡೀ ದೇಶವೇ ಕೊಂಡಾಡಿದ ಕಾಂತಾರ ಸಿನಿಮಾ ರಿಲೀಸ್ ಆದ ವೇಳೆ ಚಿತ್ರ ವೀಕ್ಷಿಸಿಲ್ಲ ಎಂಬ ಹೇಳಿಕೆ ಮೂಲಕ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
Rishab Shetty :
ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಇತೀಚೆಗೆ ಇಡೀ ದೇಶವೇ ಕೊಂಡಾಡಿದ ಕಾಂತಾರ ಸಿನಿಮಾ ರಿಲೀಸ್ ಆದ ವೇಳೆ ಚಿತ್ರ ವೀಕ್ಷಿಸಿಲ್ಲ ಎಂಬ ಹೇಳಿಕೆ ಮೂಲಕ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ರಶ್ಮಿಕಾಗೆ ‘ಕೃತಜ್ಞತೆ ಇಲ್ಲ’ ಎಂದು ಹಲವರು ಅಸಮಾಧಾನ ಹೊರಹಾಕಿದ್ದರು. ನಟಿ ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿಲ್ಲ ಎಂಬ ಕಾಮೆಂಟ್‌ಗಳ ಸುತ್ತಲಿನ ವಿವಾದದ ಬಗ್ಗೆ ಇದೀಗ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
ಇತ್ತೀಚೆಗೆ ವೈರಲ್ ಆದ ಹಳೆಯ ಸಂದರ್ಶನದ ಕ್ಲಿಪ್‌ನಲ್ಲಿ, ರಶ್ಮಿಕಾ ತನ್ನ ಚೊಚ್ಚಲ ಚಿತ್ರದಲ್ಲಿ ನಟಿಸಿದ ಪ್ರೊಡಕ್ಷನ್ ಹೌಸ್ ಬಗ್ಗೆ ಮಾತನಾಡುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಆದಾಗ್ಯೂ ಅವರು ಯಾವುದೇ ಹೆಸರನ್ನು ಉಲ್ಲೇಖಿಸಲಿಲ್ಲ. ಅಭಿಮಾನಿಗಳು ಆಕೆಯನ್ನು ‘ಕೃತಜ್ಞತೆ ಇಲ್ಲದವರು’ ಎಂದು ಆರೋಪಿಸಿದರು ಮತ್ತು ನಿರ್ದಯವಾಗಿ ಟ್ರೋಲ್ ಮಾಡಿದರು.
ಇದನ್ನೂ ಓದಿ : Puneeth Rajkumar: ಅಪ್ಪನ ಜನ್ಮ ದಿನಕ್ಕೆ ಕೊಡಗಿನಲ್ಲಿ ಹುಣಸೆ ಗಿಡ ನೆಟ್ಟಿದ್ರು ಪುನೀತ್!
Mashable Indiaದ ಜೊತೆಗಿನ ಇತ್ತೀಚಿನ ಸಂದರ್ಶನವೊಂದರಲ್ಲಿ, ರಶ್ಮಿಕಾ ಅವರ ಕಾಮೆಂಟ್‌ಗಳಿಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ ಮತ್ತು ಅವರು ಅದನ್ನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಹಲವಾರು ಕಲಾವಿದರನ್ನು ಲಾಂಚ್ ಮಾಡಿದ್ದು, ಹಲವು ನಿರ್ದೇಶಕರು, ನಿರ್ಮಾಪಕರು ಅವಕಾಶ ನೀಡಿದ್ದಾರೆ ಎಂದರು. ಅಂತಹ ಜನರ ದೊಡ್ಡ ಪಟ್ಟಿ ಇದೆ ಎಂದು ರಿಷಬ್ ಹೇಳಿದ್ದು ಸಖತ್ ವೈರಲ್ ಆಗಿದೆ.
ಇದಲ್ಲದೆ ಕಿರಿಕ್ ಪಾರ್ಟಿ ಇತ್ತೀಚೆಗೆ ಆರು ವರ್ಷಗಳನ್ನು ಪೂರೈಸಿದಾಗ, ರಿಷಬ್ Instagram ನಲ್ಲಿ ಥ್ರೋಬ್ಯಾಕ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಹೊರತುಪಡಿಸಿ ಎಲ್ಲರಿಗೂ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ : Rashmika Mandanna: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ಟ್ರೋಲ್ ಆದ ರಶ್ಮಿಕಾ ಮಂದಣ್ಣ.!
ದಕ್ಷಿಣದ ಚಿತ್ರಗಳು ಹಿಂದಿ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಬಗ್ಗೆ ಇಟೈಮ್ಸ್ ಜೊತೆ ಮಾತನಾಡಿದ ರಿಷಬ್ ಶೆಟ್ಟಿ, "ಪ್ರತಿಯೊಂದು ಇಂಡಸ್ಟ್ರಿಯೂ ಏರಿಳಿತಗಳ ಮೂಲಕ ಸಾಗುತ್ತದೆ. ಬಹುಶಃ ಪ್ರೇಕ್ಷಕರು ಇನ್ನು ಮುಂದೆ ಬಾಲಿವುಡ್, ಸ್ಯಾಂಡಲ್‌ವುಡ್ ಎಂದು ಚಿತ್ರಗಳನ್ನು ವಿಭಜಿಸುವುದಿಲ್ಲ. ಜನರು ಅದನ್ನು ಭಾರತೀಯ ಸಿನಿಮಾ ಎಂದು ನೋಡುತ್ತಾರೆ. ಕಾಂತಾರ ಕನ್ನಡ, ಪ್ರಾದೇಶಿಕ, ಭಾರತೀಯ ಸಿನಿಮಾ ಆಗಿದೆ. ಹಿಂದಿ ಚಿತ್ರರಂಗಕ್ಕೂ ಅದೇ ಹೋಗುತ್ತದೆ. ಜನರು ಭಾಷೆಯ ತಡೆಗೋಡೆ ದಾಟಿ ಭಾರತದ ಎಲ್ಲಾ ಭಾಗಗಳಿಂದ ಕಂಟೆಂಟ್‌ಗಳನ್ನು ವೀಕ್ಷಿಸುತ್ತಿದ್ದಾರೆ. ಪ್ರತಿಯೊಂದು ಚಿತ್ರರಂಗವೂ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದೆ" ಎಂದಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.