ಚಿತ್ರರಂಗಕ್ಕೆ ಬಿಗ್‌ಶಾಕ್‌.. ರಿತೇಶ್ ದೇಶಮುಖ್ ಸಿನಿಮಾ ಶೂಟಿಂಗ್‌ ವೇಳೆ ಅಪಘಾತ! ಸೆಟ್‌ನಲ್ಲೇ ಜೀವ ಬಿಟ್ಟ ಖ್ಯಾತ ಸೆಲೆಬ್ರಿಟಿ..

raja shivaji film dancer: ರಿತೇಶ್ ದೇಶಮುಖ್ ಅವರ ಚಿತ್ರದ ಚಿತ್ರೀಕರಣದ ಸಮಯದಲ್ಲಿ ದುರದೃಷ್ಟಕರ ಅಪಘಾತ ಸಂಭವಿಸಿದ್ದು, ಖ್ಯಾತ ಸೆಲೆಬ್ರಿಟಿಯೊಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ..   

Written by - Savita M B | Last Updated : Apr 26, 2025, 10:04 AM IST
  • ನಟ ರಿತೇಶ್ ದೇಶಮುಖ್ ಅವರ ಚಿತ್ರ 'ರಾಜಾ ಶಿವಾಜಿ' ಚಿತ್ರೀಕರಣದ ಸಮಯದಲ್ಲಿ ಅಪಘಾತ ಸಂಭವಿಸಿದೆ
  • ಬಂದಿರುವ ಮಾಹಿತಿಯ ಪ್ರಕಾರ, ಚಿತ್ರದ ಡಾನ್ಸರ್ ಸೌರಭ್ ಶರ್ಮಾ ನಿಧನರಾಗಿದ್ದಾರೆ.
ಚಿತ್ರರಂಗಕ್ಕೆ ಬಿಗ್‌ಶಾಕ್‌.. ರಿತೇಶ್ ದೇಶಮುಖ್ ಸಿನಿಮಾ ಶೂಟಿಂಗ್‌ ವೇಳೆ ಅಪಘಾತ! ಸೆಟ್‌ನಲ್ಲೇ ಜೀವ ಬಿಟ್ಟ ಖ್ಯಾತ ಸೆಲೆಬ್ರಿಟಿ..

Ritesh Deshmukh new film: ನಟ ರಿತೇಶ್ ದೇಶಮುಖ್ ಅವರ ಚಿತ್ರ 'ರಾಜಾ ಶಿವಾಜಿ' ಚಿತ್ರೀಕರಣದ ಸಮಯದಲ್ಲಿ ಅಪಘಾತ ಸಂಭವಿಸಿದೆ.. ಬಂದಿರುವ ಮಾಹಿತಿಯ ಪ್ರಕಾರ, ಚಿತ್ರದ ಡಾನ್ಸರ್ ಸೌರಭ್ ಶರ್ಮಾ ನಿಧನರಾಗಿದ್ದಾರೆ. 

Add Zee News as a Preferred Source

ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ಸೌರಭ್ ಕಣ್ಮರೆಯಾಗಿದ್ದರು.. ಆದರೆ ಎರಡು ದಿನಗಳ ನಂತರ ಸೌರಭ್ ಅವರ ಶವ ನದಿಯಲ್ಲಿ ಪತ್ತೆಯಾಗಿದೆ ಎಂಬ ಆಘಾತಕಾರಿ ಮಾಹಿತಿಯೂ ಹೊರಬರುತ್ತಿದೆ. ಸೌರಭ್ ಸಾವಿನ ನಂತರ, ಕುಟುಂಬದ ಮೇಲೆ ದುಃಖದ ಬೆಟ್ಟವೇ ಬಿದ್ದಿದೆ. ಇಲ್ಲಿಯವರೆಗೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಚಿತ್ರದ ಚಿತ್ರೀಕರಣ ಸತಾರಾ ಜಿಲ್ಲೆಯ ಸಂಗಮ್ ಮಹುಲಿ ಗ್ರಾಮದಲ್ಲಿ ನಡೆಯುತ್ತಿತ್ತು. ಈ ವೇಳೆ ಸೌರಭ್ ಶರ್ಮಾ ಡಾನ್ಸರ್‌ ಆಗಿ ಹಾಡಿನ ಭಾಗವಾಗಿದ್ದರು. ಹಾಡಿನ ಚಿತ್ರೀಕರಣ ಮುಗಿದ ನಂತರ, ಅವರು ಕೃಷ್ಣಾ ನದಿಯಲ್ಲಿ ಕೈ ತೊಳೆಯಲು ಹೋಗಿದ್ದು, ನದಿಯ ಬಲವಾದ ಪ್ರವಾಹದ ಅರಿವಿಲ್ಲದೆ, ಈಜಲು ನದಿಗೆ ಹಾರಿದ ಅವರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.. 

ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಇವುಗಳನ್ನು ತಿಂದರೆ ನೆಮ್ಮದಿಯ ನಿದ್ರೆ ಬರದಿರಲು ಸಾಧ್ಯವೇ ಇಲ್ಲ..!

ಈ ಬಗ್ಗೆ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ನೀಡಲಾಗಿದೆ.. ಎರಡು ದಿನಗಳ ಹುಡುಕಾಟದ ನಂತರ ಅವರ ಶವ ನದಿಯಲ್ಲಿ ಅವರ ಪತ್ತೆಯಾಗಿದೆ. ಈ ಘಟನೆಯಿಂದಾಗಿ, ಚಿತ್ರದ ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಚಿತ್ರದ ಬಗ್ಗೆ ಹೇಳುವುದಾದರೆ, 'ರಾಜ ಶಿವಾಜಿ' ಚಿತ್ರವು ಮಹಾನ್ ಮರಾಠಾ ಯೋಧ ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಈ ಚಿತ್ರದಲ್ಲಿ ರಿತೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಇವುಗಳನ್ನು ತಿಂದರೆ ನೆಮ್ಮದಿಯ ನಿದ್ರೆ ಬರದಿರಲು ಸಾಧ್ಯವೇ ಇಲ್ಲ..!

ಇನ್ನು ರಿತೇಶ್ ದೇಶಮುಖ್ ಅವರ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡುವುದಾದರೇ ನಟ ಶೀಘ್ರದಲ್ಲೇ 'ರೈಡ್ 2' ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರ ಮೇ 1 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಜಯ್ ದೇವಗನ್, ತಮನ್ನಾ ಭಾಟಿಯಾ, ಸೌರಭ್ ಶುಕ್ಲಾ, ವಾಣಿ ಕಪೂರ್, ಸುಪ್ರಿಯಾ ಪಾಠಕ್, ಅಮಿತ್ ಸಿಯಾಲ್ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಿತೇಶ್ ದೇಶಮುಖ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳ ಸಂಖ್ಯೆಯೂ ತುಂಬಾ ದೊಡ್ಡದಾಗಿದೆ. ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ನಟ ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಇಷ್ಟೇ ಅಲ್ಲ, ರಿತೇಶ್ ಮತ್ತು ಅವರ ಪತ್ನಿ ಜೆನಿಲಿಯಾ ಅವರ ವೀಡಿಯೊಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News