ರೆಬಲ್ ಸ್ಟಾರ್ ಅಂಬರೀಶ್ ನೆನೆದು 'ಮಿಸ್ ಯು ಅಣ್ಣಾ' ಎಂದ ಯಶ್!

ಇತ್ತೀಚೆಗಷ್ಟೇ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಯಶ್ 'ಮಿಸ್ ಯು ಅಣ್ಣಾ' ಎಂದಿದ್ದಾರೆ. 

Updated: Dec 22, 2018 , 01:40 PM IST
ರೆಬಲ್ ಸ್ಟಾರ್ ಅಂಬರೀಶ್ ನೆನೆದು 'ಮಿಸ್ ಯು ಅಣ್ಣಾ' ಎಂದ ಯಶ್!
Photo Courtesy: twitter/@TheNameIsYash

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನೆಮಾ ವಿಶ್ವದಾದ್ಯಂತ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲಿ ಇತ್ತೀಚೆಗಷ್ಟೇ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಯಶ್ 'ಮಿಸ್ ಯು ಅಣ್ಣಾ' ಎಂದಿದ್ದಾರೆ. 

ಈ ಹಿಂದೆ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್ ದಿನದಂದು ಅಂಬರೀಶ್ ಅವರು ಸ್ವತಃ ಯಶ್ ಅವರಿಗೆ ಶುಭಾಶಯ ಕೋರಿದ್ದರು. ಆದರೆ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅವರೇ ಇಲ್ಲವಾಗಿರುವುದು ಯಶ್ ಅವರನ್ನು ಭಾವುಕರಾಗುವಂತೆ ಮಾಡಿದೆ. ಈ ಬಗ್ಗೆ ಯಶ್ ತಮ್ಮ ಟ್ವಿಟ್ಟರ್, ಇನ್ಸ್ಟಾಗ್ರಾಂ ಅಕೌಂಟ್ ಗಳಲ್ಲಿ ಅಂಬಿ ಭಾವಚಿತ್ರಕ್ಕೆ ಕೈಮುಗಿದು ನಮಿಸುತ್ತಿರುವ ಫೋಟೋ ಹಾಕಿ 'Miss You Anna...' ಎಂದು ಬರೆದುಕೊಂಡಿದ್ದಾರೆ. 

ಅಂಬರೀಶ್ ನಿಧನರಾದಾಗ ಅವರ ಕುಟುಂಬದ ಜೊತೆಗಿದ್ದುಕೊಂಡು ಎಲ್ಲಾ ಕಾರ್ಯಗಳನ್ನೂ ನಡೆಸಿಕೊಟ್ಟಿದ್ದರು ಯಶ್. ಅಷ್ಟೇ ಅಲ್ಲದೆ ಅಂಬರೀಶ್ ಅವರು ಯಶ್ ಗೆ ಹುಟ್ಟುವ ಮಗುವಿಗಾಗಿ ಒಂದು ತೊಟ್ಟಿಲನ್ನೂ ಆರ್ಡರ್ ಮಾಡಿದ್ದರು. ಯಶ್ ಮನೆಯ ಪ್ರತಿಯೊಂದು ಕಾರ್ಯಕ್ರಮಕ್ಕೂ ಅಂಬರೀಶ್ ದಂಪತಿ ಹಾಜರಾಗುತ್ತಿದ್ದರು. ಆದರೀಗ ಕೆಜಿಎಫ್ ಸಿನಿಮಾ ಯಶಸ್ಸು ನೋಡಲು ಅಂಬಿ ಅಣ್ಣಾ ಇಲ್ಲದಿರುವುದು ಯಶ್ ಅವರನ್ನು ಭಾವುಕರನ್ನಾಗಿ ಮಾಡಿದೆ.